alex Certify ಈ ದೇವಸ್ಥಾನದ ಕಂಬಗಳನ್ನ ಅಪ್ಪಿತಪ್ಪಿಯೂ ಎಣಿಸಬೇಡಿ ಹಾಗೆ ಮಾಡಿದ್ರೆ ಅನಾಹುತ ಕಟ್ಟಿಟ್ಟ ಬುತ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ದೇವಸ್ಥಾನದ ಕಂಬಗಳನ್ನ ಅಪ್ಪಿತಪ್ಪಿಯೂ ಎಣಿಸಬೇಡಿ ಹಾಗೆ ಮಾಡಿದ್ರೆ ಅನಾಹುತ ಕಟ್ಟಿಟ್ಟ ಬುತ್ತಿ

ದೇಗುಲಗಳ ಬೀಡಾಗಿರುವ ಭಾರತ, ಹಲವಾರು ವೈಶಿಷ್ಟ್ಯಗಳುಳ್ಳ ದೇವಸ್ಥಾನಗಳ ನೆಲೆಯಾಗಿದೆ. ಎಂತಹ ಆಸ್ತಿಕನೂ ನಂಬುವಂತಹ ವಿಚಿತ್ರ ಘಟನೆಗಳು ಕೆಲವು ದೇವಸ್ಥಾನಗಳಲ್ಲಿ ನಡೆಯುತ್ತವೆ. ಇಂತಹುದೇ ಒಂದು ದೇವಸ್ಥಾನ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿದೆ.

ನಾಲ್ಕೂ ದಿಕ್ಕಿನಲ್ಲಿ ಬಾಗಿಲನ್ನು ಹೊಂದಿರುವ ಈ ಮಹಾಲಕ್ಷ್ಮಿ ದೇಗುಲ ಕೆತ್ತನೆಯ ಕಂಬಗಳಿಂದಲೇ ಹೆಸರುವಾಸಿ. ಹಲವಾರು ಸುಂದರ ಕೆತ್ತನೆಗಳ ಕಂಬಗಳ ಮೇಲೆ ನಿಂತಿರುವ ಈ ದೇವಸ್ಥಾನದಲ್ಲಿ ಎಷ್ಟು ಕಂಬಗಳಿವೆ ಎಂಬುದು ಇನ್ನೂ ಯಾರಿಗೂ ತಿಳಿದಿಲ್ಲ. ಹಿಂದೆ ಕೆಲವರು ಎಷ್ಟು ಕಂಬಗಳಿವೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿದ್ದರಂತೆ. ಹಾಗೆ ಪ್ರಯತ್ನಿಸಿದವರ ಜೀವನದಲ್ಲಿ ಅಹಿತಕರ ಘಟನೆಗಳು ನಡೆದಿವೆ ಎಂದು ದೇವಸ್ಥಾನದ ಆಡಳಿತ ವರ್ಗ ಹೇಳುತ್ತದೆ.

ಈ ಮಹಾಲಕ್ಷ್ಮಿ ದೇವಸ್ಥಾನ ಸುಮಾರು 1800 ವರ್ಷ ಹಳೆಯದು. ಕ್ರಿ.ಶ. 7 ನೇ ಶತಮಾನದಲ್ಲಿ ಚಾಲುಕ್ಯರ ರಾಜ ಕರ್ಣದೇವ ಈ ದೇವಾಲಯದ ನಿರ್ಮಾಣವನ್ನು ಆರಂಭಿಸಿದ. ಈ ದೇವಸ್ಥಾನದ ನಿರ್ಮಾಣ ಕೂಡ ಅಷ್ಟೇ ವಿಭಿನ್ನವಾಗಿದೆ. ಏಕೆಂದರೆ ವರ್ಷದಲ್ಲಿ ಒಮ್ಮೆ ಮಾತ್ರ ಸೂರ್ಯನ ಕಿರಣ ನೇರವಾಗಿ ದೇವಿಯ ಮೇಲೆ ಬೀಳುವಂತೆ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ. ವಿಷ್ಟುವಿನ ಮೇಲೆ ಕೋಪಗೊಂಡ ಮಹಾಲಕ್ಷ್ಮಿ ಇಲ್ಲಿ ಬಂದು ನೆಲೆಸಿದ್ದಾಳೆ ಎಂಬ ಪ್ರತೀತಿ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...