alex Certify
ಕನ್ನಡ ದುನಿಯಾ       Mobile App
       

Kannada Duniya

ಅಮವಾಸ್ಯೆಯಂದು ರಾಶಿ ಪ್ರಕಾರ ಮಾಡಿ ಈ ಕೆಲಸ

2017_3image_14_27_534853110somwatiamavysa-ll

ಸನಾತನ ಧರ್ಮದಲ್ಲಿ ಸೋಮವಾರದ ಅಮವಾಸ್ಯೆಗೆ ಮಹತ್ವದ ಸ್ಥಾನವಿದೆ. ಹೀಗೆ ಬರೋದು ಬಹಳ ಅಪರೂಪ. ಶಾಸ್ತ್ರದಲ್ಲಿ ಅಶ್ವತ್ಥ ವೃತದ ಬಗ್ಗೆಯೂ ಉಲ್ಲೇಖವಿದೆ. ಪವಿತ್ರ ಗ್ರಂಥಗಳ ಪ್ರಕಾರ ಅಶ್ವತ್ಥ ಮರದಲ್ಲಿ ಎಲ್ಲ ದೇವಾನುದೇವತೆಗಳು ವಾಸವಾಗಿರ್ತಾರೆ. ಮಾರ್ಚ್ 27, ಸೋಮವಾರ ಮಧ್ಯಾಹ್ನದ ನಂತ್ರ ಅಮವಾಸ್ಯೆ ಶುರುವಾಗಲಿದೆ. ಸೂರ್ಯೋದಯವನ್ನು ಪರಿಗಣನೆ ಮಾಡುವುದರಿಂದ ಮಾರ್ಚ್ 28 ಮಂಗಳವಾರ ಅಮವಾಸ್ಯೆಯೆಂದು ಪಂಚಾಂಗದಲ್ಲಿ ಸೂಚಿಸಲಾಗಿದೆ.

ಸೋಮವಾರವೇ ಅಮವಾಸ್ಯೆ ಶುರುವಾಗಲಿರುವುದರಿಂದ ಯಾವ ರಾಶಿಯವರು ಯಾವ ಕೆಲಸ ಮಾಡಬೇಕೆನ್ನುವ ವಿವರ ಇಲ್ಲಿದೆ.

ಮೇಷ : ಅಶ್ವತ್ಥ ಮರವನ್ನು 9 ಬಾರಿ ಸುತ್ತಿ.

ವೃಷಭ : ನೀರಿಗೆ ಎಳ್ಳು ಬೆರೆಸಿ ಶಿವಲಿಂಗಕ್ಕೆ ಅರ್ಪಣೆ ಮಾಡಿ.

ಮಿಥುನ : ಭಗವಂತ ವಿಷ್ಣುವಿನ ದೇವಸ್ಥಾನಕ್ಕೆ ಹೋಗಿ ನೀಲಿ ಹೂ ಅರ್ಪಣೆ ಮಾಡಿ.

ಕರ್ಕ : ಶಿವಲಿಂಗಕ್ಕೆ ಜೇನುತುಪ್ಪವನ್ನು ಅಭಿಷೇಕ ಮಾಡಿ.

ಸಿಂಹ : ತಾಯಿ ಗೌರಿಯ ಫೋಟೋಕ್ಕೆ ಕುಂಕುಮ ಅರ್ಪಣೆ ಮಾಡಿ.

ಕನ್ಯಾ : ಅಶ್ವತ್ಥ ಮರವನ್ನು 108 ಬಾರಿ ಪ್ರದಕ್ಷಿಣೆ ಮಾಡಿ.

ತುಲಾ : ಸಾಲಿಗ್ರಾಮಕ್ಕೆ ತುಳಸಿಯನ್ನು ಅರ್ಪಿಸಿ.

ವೃಶ್ಚಿಕ : ಶಿವಲಿಂಗಕ್ಕೆ ಪಂಚಾಮೃತವನ್ನು ಅರ್ಪಿಸಿ.

ಧನು : ವಿಷ್ಣು ದೇವಾಲಯಕ್ಕೆ ಹೋಗಿ ಕೆಂಪು ಹೂ ಅರ್ಪಣೆ ಮಾಡಿ.

ಮಕರ : ಗಣೇಶನಿಗೆ ಮೊಸರು-ಅಕ್ಕಿಯನ್ನು ನೀಡಿ.

ಕುಂಭ : ಶಿವನಿಗೆ ಅಕ್ಕಿ ಖೀರ್ ನೀಡಿ.

ಮೀನ : ಹಸುವಿಗೆ ಕಾಕಂಬಿಯನ್ನು ನೀಡಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...