alex Certify
ಕನ್ನಡ ದುನಿಯಾ       Mobile App
       

Kannada Duniya

ಜೂನ್ 2 ರಂದು ಗಣೇಶನ ಪೂಜೆ ಮಾಡಿ ಇದನ್ನು ಅರ್ಪಿಸಿ

ಜೂನ್ 2 ಶನಿವಾರ ಅಧಿಕ ಮಾಸದ ಕೃಷ್ಣ ಪಕ್ಷದ ಚತುರ್ಥಿ. ಸಾಮಾನ್ಯವಾಗಿ ಚತುರ್ಥಿಯಂದು ಗಣೇಶನ ಆರಾಧನೆ ಮಾಡಲಾಗುತ್ತದೆ. ಆದ್ರೆ ಈ ಬಾರಿ ಅಧಿಕ ಮಾಸವಾಗಿರುವ ಕಾರಣ ವಿಶೇಷ ಪ್ರಾಮುಖ್ಯತೆ ಬಂದಿದೆ. ಈ ದಿನ ಗಣೇಶನ ಪೂಜೆ ವೇಳೆ ಗಣೇಶನಿಗೆ ಪ್ರಿಯವಾದ ವಸ್ತುಗಳನ್ನು ಬಳಸುವುದ್ರಿಂದ ಮಂಗಳಕರ ಫಲ ದೊರೆಯಲಿದೆ.

ಮೋದಕ : ಗಣೇಶ ಮೋದಕ ಪ್ರಿಯ. ಮೋದಕ ಅರ್ಪಣೆ ಮಾಡುವುದ್ರಿಂದ ಗಣೇಶ ಪ್ರಸನ್ನನಾಗ್ತಾನೆ. ಭಕ್ತರ ಪ್ರತಿಯೊಂದು ಬೇಡಿಕೆಯನ್ನು ಈಡೇರಿಸುತ್ತಾನೆ. ಹಾಗಾಗಿ ಚತುರ್ಥಿ ದಿನ ಅವಶ್ಯವಾಗಿ ಗಣೇಶನಿಗೆ ಮೋದಕವನ್ನು ಅರ್ಪಿಸಿ.

ದರ್ಬೆ : ಭಗವಂತ ಗಣೇಶನಿಗೆ ದರ್ಬೆ ಅರ್ಪಿಸುವ ಭಕ್ತನ ಎಲ್ಲ ಸಮಸ್ಯೆ ದೂರವಾಗುತ್ತದೆ ಎಂದು ನಂಬಲಾಗಿದೆ. ಜೀವನದಲ್ಲಿ ಸದಾ ಸಂತೋಷ ನೆಲೆಸಿರುತ್ತದೆ. ಸ್ವಚ್ಛ ಸ್ಥಳದಲ್ಲಿರುವ ದರ್ಬೆಯನ್ನು ನೀರಿನಲ್ಲಿ ತೊಳೆದು ಗಣೇಶನಿಗೆ ಅರ್ಪಿಸಿ.

ಎಲೆ-ಅಡಿಕೆ : ತಂಬಾಕು ರಹಿತ ಎಲೆ-ಅಡಿಕೆಯನ್ನು ಗಣೇಶನಿಗೆ ಅರ್ಪಿಸಲಾಗುತ್ತದೆ. ದಾಂಪತ್ಯ ಜೀವನ ಸುಖಕರವಾಗಿರುತ್ತದೆ. ಹಾಗೆ ಸದಾ ಭಕ್ತರ ಮೇಲೆ ಗಣೇಶನ ಕೃಪೆ ನೆಲೆಸಿರುತ್ತದೆ.

ಅರಿಶಿನದ ಕೊಂಬು : ಅರಿಶಿನದ ಕೊಂಬನ್ನು ಗಣೇಶನಿಗೆ ಅರ್ಪಿಸುವ ಪದ್ಧತಿಯಿದೆ. ಇದನ್ನು ಅರ್ಪಿಸುವುದ್ರಿಂದ ಸಂಕಷ್ಟ ದೂರವಾಗಿ ಆರ್ಥಿಕ ಲಾಭವಾಗುತ್ತದೆ.

ಮೋತಿಚೂರ್ ಲಡ್ಡು : ಮೋತಿಚೂರ್ ಲಡ್ಡನ್ನು ಗಣೇಶನಿಗೆ ಅರ್ಪಣೆ ಮಾಡುವುದ್ರಿಂದ ಮನೆಯಲ್ಲಿ ಯಾವಾಗ್ಲೂ ಸಂತೋಷ, ಸಮೃದ್ಧಿ ನೆಲೆಸಿರುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...