alex Certify
ಕನ್ನಡ ದುನಿಯಾ       Mobile App
       

Kannada Duniya

ರವಿವಾರ ಏಕಾದಶಿಯಂದು ಮಾಡಿ ಈ ಕೆಲಸ

ಜೂನ್ 10 ಭಾನುವಾರ ಏಕಾದಶಿ. ಪ್ರತಿ ತಿಂಗಳು ಏಕಾದಶಿ ಬರುತ್ತೆ. ಆದ್ರೆ ಈ ಬಾರಿಯ ಏಕಾದಶಿ ವಿಶೇಷತೆ ಹೊಂದಿದೆ. ಏಕೆಂದ್ರೆ ಅಧಿಕಮಾಸದ ಏಕಾದಶಿ. ಅಧಿಕಮಾಸ ಮೂರು ವರ್ಷದಲ್ಲಿ ಒಮ್ಮೆ ಬರುತ್ತದೆ. ಜೂನ್ 10 ರ ನಂತ್ರ 2021ರಲ್ಲಿ ಅಧಿಕ ಮಾಸ ಬರಲಿದೆ.

ಪಂಡಿತರ ಪ್ರಕಾರ ಅಧಿಕ ಮಾಸ ಶ್ರೀಕೃಷ್ಣನಿಗೆ ಪ್ರಿಯವಾದ ತಿಂಗಳು. ಹಾಗಾಗಿ ಇದನ್ನು ಪುರುಷೋತ್ತಮ ಮಾಸವೆಂದೂ ಕರೆಯಲಾಗುತ್ತದೆ. ಅಧಿಕ ಮಾಸದ ಏಕಾದಶಿಯಂದು ಕೆಲವೊಂದು ಉಪಾಯ ಅನುಸರಿಸಿದ್ರೆ ಶ್ರೀಕೃಷ್ಣನ ಕೃಪೆಗೆ ಪಾತ್ರರಾಗಬಹುದು.

ಏಕಾದಶಿಯಂದು ಶ್ರೀಕೃಷ್ಣನ ಪೂಜೆ ಮಾಡಿ. ಪೂಜೆ ವೇಳೆ ಶ್ರೀಕೃಷ್ಣನ ಮೂರ್ತಿ ಬಳಿ ಸ್ವಲ್ಪ ಹಣವನ್ನು ಇಡಿ. ಪೂಜೆ ನಂತ್ರ ಈ ಹಣವನ್ನು ನಿಮ್ಮ ಪರ್ಸ್ ನಲ್ಲಿಟ್ಟುಕೊಳ್ಳಿ.ಇದ್ರಿಂದ ಧನ ಲಾಭವಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಶ್ರೀಮಂತರಾಗಲು ಬಯಸುವವರು ಏಕಾದಶಿಯಂದು ಶ್ರೀಕೃಷ್ಣನ ದೇವಸ್ಥಾನಕ್ಕೆ ಹೋಗಿ ಬಿಳಿ ಬಣ್ಣದ ಮಿಠಾಯಿ ಅಥವಾ ಖೀರ್ ದೇವರಿಗೆ ಅರ್ಪಿಸಿ. ಮಿಠಾಯಿ ಮೇಲೆ ತುಳಸಿಯನ್ನು ಅವಶ್ಯವಾಗಿ ಇಡಿ.

ಏಕಾದಶಿಯಂದು ಬ್ರಹ್ಮ ಮುಹೂರ್ತದಲ್ಲಿ ಎದ್ದು ಪವಿತ್ರ ನದಿಯಲ್ಲಿ ಸ್ನಾನ ಮಾಡಿದ್ರೆ ಎಲ್ಲ ಸುಖ ಪ್ರಾಪ್ತಿಯಾಗುತ್ತದೆ. ನಂತ್ರ ವಿಧಿವಿಧಾನದ ಮೂಲಕ ಗಾಯತ್ರಿ ಮಂತ್ರವನ್ನು ಜಪಿಸಬೇಕು. ಮಹಿಳೆಯರು ಸ್ನಾನದ ನಂತ್ರ ಉತ್ತಮ ಆರೋಗ್ಯ ಹಾಗೂ ಗಂಡನ ದೀರ್ಘಾಯುಷ್ಯಕ್ಕೆ ಪ್ರಾರ್ಥನೆ ಮಾಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...