alex Certify
ಕನ್ನಡ ದುನಿಯಾ       Mobile App
       

Kannada Duniya

ಅಧಿಕ ಮಾಸದ ಹುಣ್ಣಿಮೆಯಂದು ಮಾಡಿ ಈ ಉಪಾಯ

ಮೇ 29 ಮಂಗಳವಾರ ಹುಣ್ಣಿಮೆ. ಪ್ರತಿ ತಿಂಗಳೂ ಇದು ಬರುತ್ತೆ. ಆದ್ರೆ ಈ ಬಾರಿ ಹುಣ್ಣಿಮೆ ವಿಶೇಷತೆ ಹೊಂದಿದೆ. ಈಗ ಅಧಿಕ ಮಾಸ ನಡೆಯುತ್ತಿದೆ. ಅಧಿಕ ಮಾಸ ಮೂರು ವರ್ಷಕ್ಕೊಮ್ಮೆ ಬರುತ್ತದೆ. ಹಾಗಾಗಿ ಈ ಅಧಿಕ ಮಾಸದಲ್ಲಿ ಬರುವ ಹುಣ್ಣಿಮೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತೆ. ಯಾಕೆಂದ್ರೆ ಮತ್ತೆ ಈ ಹುಣ್ಣಿಮೆ 2021ಕ್ಕೆ ಬರಲಿದೆ.

ಅಧಿಕ ಮಾಸದ ಹುಣ್ಣಿಮೆಯನ್ನು ಕೆಲ ಉಪಾಯಗಳನ್ನು ಮಾಡಿದ್ರೆ ಹಣ ವೃದ್ಧಿಯಾಗುವ ಜೊತೆಗೆ ನಿಮ್ಮ ದೌರ್ಭಾಗ್ಯ ಕೂಡ ದೂರವಾಗುತ್ತದೆ.

ಆರ್ಥಿಕ ವೃದ್ಧಿ ಬಯಸುವವರು ಹುಣ್ಣಿಮೆ ಮರುದಿನ ಬ್ರಾಹ್ಮಣರಿಗೆ ಭೋಜನ ನೀಡಬೇಕು. ದಕ್ಷಿಣೆ ಹಾಗೂ ವಸ್ತ್ರವನ್ನು ಬ್ರಾಹ್ಮಣರಿಗೆ ನೀಡಿ.

ಅಧಿಕ ಮಾಸದ ಹುಣ್ಣಿಮೆಯಂದು ವಿಷ್ಣುವಿಗೆ ಕೇಸರಿ ಮಿಶ್ರಿತ ಹಾಲನ್ನು ಅಭಿಷೇಕ ಮಾಡಿ. ದಕ್ಷಿಣ ಮುಖವಿರುವ ಶಂಖದಿಂದ ಅಭಿಷೇಕ ಮಾಡಿದ್ರೆ ಫಲ ಬೇಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.

ಕೈನಲ್ಲಿ ಹಣ ನಿಲ್ಲುತ್ತಿಲ್ಲ,ಉದ್ಯೋಗದಲ್ಲಿ ಏಳ್ಗೆಯಾಗಿಲ್ಲ ಎನ್ನುವವರು ಮೇ 29ರಂದು 7 ಕನ್ಯೆಯರನ್ನು ಮನೆಗೆ ಕರೆದು ಭೋಜನ ನೀಡಿ. ಕೆಲವೇ ದಿನಗಳಲ್ಲಿ ನಿಮ್ಮ ಆಸೆ ಈಡೇರಲಿದೆ.

ಹುಣ್ಣಿಮೆ ದಿನ ತುಳಸಿ ಗಿಡದ ಕೆಳಗೆ ತುಪ್ಪದ ದೀಪವನ್ನು ಹಚ್ಚಿ. ‘ಓಂ ವಾಸುದೇವಾಯ ನಮಃ’ ಮಂತ್ರವನ್ನು ಜಪಿಸಿ. ಇದ್ರಿಂದ ಮನೆಯಲ್ಲಿ ಸುಖ-ಶಾಂತಿ ನೆಲೆಸಿರುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...