alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆ ಗಡಿ ದಾಟಿದ್ರೆ ನಾಶವಾಗುತ್ತೆ ಎರಡೂ ಕುಟುಂಬ

2017_6image_15_50_557734346woman-ll

ಸ್ತ್ರೀ ಮನೆಯ ಲಕ್ಷ್ಮಿ. ಮದುವೆಗಿಂತ ಮೊದಲು ತಂದೆ ಮನೆ ಹಾಗೂ ಮದುವೆಯಾದ್ಮೇಲೆ ಗಂಡನ ಮನೆಯ ಗೌರವವನ್ನು ಕಾಪಾಡುವುದು ಮಹಿಳೆಯ ಕರ್ತವ್ಯ. ಸಮಾಜ ಹಾಗೂ ಕುಟುಂಬಕ್ಕೆ ಅವಮಾನವಾಗುವಂತಹ ಕೆಲಸವನ್ನು ಸ್ತ್ರೀಯಾದವಳು ಮಾಡಬಾರದು. ಮನು ಸ್ಮೃತಿ ಪ್ರಕಾರ ಮಹಿಳೆ ಮಾಡುವ ಕೆಲವೊಂದು ಕೆಲಸಗಳು ಇಡೀ ಕುಟುಂಬ ಗೌರವ ಹಾಳು ಮಾಡಿ ನಷ್ಟ ಅನುಭವಿಸಬೇಕಾಗುತ್ತದೆ.

ಗ್ರಂಥಗಳ ಪ್ರಕಾರ ಮಗುವಾಗಿದ್ದಾಗ ತಂದೆ, ಮದುವೆಯಾದ್ಮೇಲೆ ಗಂಡ ಹಾಗೂ ವಯಸ್ಸಾದ ಮೇಲೆ ಮಗ ಸ್ತ್ರೀಯ ರಕ್ಷಣೆ ಮಾಡ್ತಾರೆ. ಮದುವೆಯಾದ್ಮೇಲೆ ಪತ್ನಿಯಾದವಳು ಎಂದೂ ಪತಿಯ ಕೈ ಬಿಡಬಾರದು. ಪತಿಯಿಂದ ಬೇರೆಯಾಗಿ ತನಗಿಷ್ಟ ಬಂದ ಕೆಲಸ ಮಾಡಿದ್ರೆ ಅದ್ರ ಪರಿಣಾಮವನ್ನು ಮಕ್ಕಳು ಎದುರಿಸಬೇಕಾಗುತ್ತದೆ.

ಸ್ತ್ರೀಯಾದವಳು ಮದ್ಯಪಾನ ಮಾಡಬಾರದು. ಮದ್ಯ ಸೇವನೆ ಮಾಡಿದಾಗ ಒಳ್ಳೆಯದು-ಕೆಟ್ಟದರ ವ್ಯತ್ಯಾಸ ತಿಳಿಯುವುದಿಲ್ಲ. ಮದ್ಯಪಾನ ಮಾಡಿದ ಸ್ತ್ರೀ ಅನೇಕ ಬಾರಿ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡ್ತಾಳೆ. ಮದ್ಯಪಾನ ಮಾಡುವ ಮಹಿಳೆಯನ್ನು ಸಮಾಜ ಕೆಟ್ಟದಾಗಿ ನೋಡುತ್ತದೆ. ಮುಜುಗರದ ಪ್ರಸಂಗವನ್ನು ಕುಟುಂಬ ಎದುರಿಸಬೇಕಾಗುತ್ತದೆ. ಆರ್ಥಿಕ ನಷ್ಟವುಂಟಾಗುತ್ತದೆ. ಹಾಗಾಗಿ ಸ್ತ್ರೀಯೊಂದೆ ಅಲ್ಲ ಪುರುಷ ಕೂಡ ಮದ್ಯಪಾನದಿಂದ ದೂರವಿರಬೇಕು.

ಸ್ತ್ರೀಯಾದವಳು ದುಷ್ಟ ಪುರುಷರಿಂದ ದೂರವಿರಬೇಕು. ದುಷ್ಟ ಪುರುಷರು ಮಹಿಳೆಯನ್ನು ಕೆಳಮಟ್ಟದ ಕೆಲಸಕ್ಕೆ ಬಳಸಿಕೊಳ್ಳುತ್ತಾರೆ. ಇದ್ರಿಂದ ಸ್ತ್ರೀಗೆ ಕಳಂಕ ತರುತ್ತದೆ. ಸಮಾಜ ಅವರನ್ನು ನೋಡುವ ದೃಷ್ಠಿ ಬೇರೆಯಾಗುತ್ತದೆ.

ಕೆಲಸವಿಲ್ಲದೆ ಕಂಡ ಕಂಡಲ್ಲಿ ಸುತ್ತಾಡುವುದು ಸ್ತ್ರೀಗೆ ಯೋಗ್ಯವಲ್ಲ. ಹೀಗೆ ಓಡಾಡುವ ಸ್ತ್ರೀ ಕುಟುಂಬ ಹಾಗೂ ಸಂಬಂಧವನ್ನು ನಂಬುವುದಿಲ್ಲ. ಇದ್ರಿಂದ ಆಕೆ ಸಂಪೂರ್ಣ ಸ್ವತಂತ್ರಳಾಗಿ ಯಾರ ಭಯವಿಲ್ಲದೆ ಬದುಕಲು ಶುರುಮಾಡುತ್ತಾಳೆ. ಮದುವೆಯಾದ ಮಹಿಳೆ ಹೀಗೆ ಮಾಡಿದ್ರೆ ಹುಟ್ಟ ಹಾಗೂ ಕೊಟ್ಟ ಎರಡೂ ಮನೆಯ ಗೌರವ ಹಾಳಾಗುತ್ತದೆ.

ಬೆಳಿಗ್ಗೆ ಸೂರ್ಯೋದಯವಾದ ಮೇಲೆ ಮಲಗುವುದು ಒಳ್ಳೆಯದಲ್ಲ. ಸ್ತ್ರೀ ತುಂಬಾ ಸಮಯ ನಿದ್ರೆ ಮಾಡಿದಲ್ಲಿ ಮನೆಯ ವಾತಾವರಣ ಬದಲಾಗುತ್ತದೆ. ಕುಟುಂಬದ ಎಲ್ಲ ಜವಾಬ್ದಾರಿಯನ್ನು ಮಹಿಳೆಯಾದವಳು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಜೊತೆಗೆ ದರಿದ್ರ ಮನೆಯನ್ನು ಆವರಿಸುತ್ತದೆ. ಕುಟುಂಬದಲ್ಲಿ ಅಸಂತೋಷ ಮನೆ ಮಾಡುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...