alex Certify
ಕನ್ನಡ ದುನಿಯಾ       Mobile App
       

Kannada Duniya

ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಕ್ಕಾಗಿ ಹೀಗೆ ಮಾಡಿ….

saraswati-vandana-wallpaper

ಪರೀಕ್ಷೆಗಳು ಹತ್ತಿರ ಬಂದಿವೆ. ಮಕ್ಕಳೆಲ್ಲ ಅದೇ ತಯಾರಿಯಲ್ಲಿದ್ದಾರೆ. ಆದ್ರೆ ಕೆಲವೊಮ್ಮೆ ವಿದ್ಯಾರ್ಥಿಗಳಿಗೆ ಓದಿದ್ದನ್ನೆಲ್ಲ ನೆನಪಿಟ್ಟುಕೊಳ್ಳುವುದು ಕಷ್ಟವಾಗುತ್ತದೆ. ಬಲುಬೇಗ ಮರೆತುಹೋಗುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ಹಿಂದು ಗ್ರಂಥಗಳಲ್ಲಿ ಸರಳ ಮಂತ್ರವಿದೆ. ಮಕ್ಕಳ ಶ್ರಮಕ್ಕೆ ಈ ಮಂತ್ರ ಫಲ ಕೊಡುತ್ತದೆ.

ಸರಸ್ವತಿ ಜ್ಞಾನದೇವತೆ. ಸರಸ್ವತಿ ಮಂತ್ರಪಠಣದಿಂದ ವಿದ್ಯಾರ್ಥಿಗಳ ದೇಹದಲ್ಲಿ ಕಂಪನ ಸೃಷ್ಟಿಯಾಗುತ್ತದೆ, ದೇಹ ಮತ್ತು ಮನಸ್ಸು ಸಡಿಲಗೊಳ್ಳುತ್ತದೆ. ಏಕಾಗ್ರತೆ ಹೆಚ್ಚಿಸುತ್ತದೆ. ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯಲು ಪರೋಕ್ಷವಾಗಿ ಸಹಾಯ ಮಾಡುತ್ತದೆ.

ಬೆಳಗ್ಗೆ ಎದ್ದ ತಕ್ಷಣ ಶುಭ್ರವಾಗಿ ಸ್ನಾನ ಮಾಡಿ.  ಸರಸ್ವತಿಗೆ ಶ್ರೀಗಂಧವನ್ನು ಅರ್ಪಿಸಿ. ಹಳದಿ ಅಕ್ಕಿ ಮತ್ತು ಹಳದಿ ಹೂವುಗಳನ್ನು ಹಾಕಿ ಪೂಜೆ ಸಲ್ಲಿಸಿ. ಮನೆಯಲ್ಲಿ, ದೇವಸ್ಥಾನದಲ್ಲಿ ಅಥವಾ ಸರಸ್ವತಿಯ ಭಾವಚಿತ್ರಕ್ಕೂ ಪೂಜೆ ಸಲ್ಲಿಸಬಹುದು. ನಂತರ ವಿದ್ಯಾರ್ಥಿಗಳು ‘ಓಂ ಸರಸ್ವತ್ಯೆ ವಿದ್ಮಹೆ, ಬ್ರಹ್ಮಪುತ್ರಯೆ ಧೀಮಹಿ, ತನ್ನೋ ದೇವಿ ಪ್ರಚೋದಯಾತ್’ ಎಂಬ ಮಂತ್ರವನ್ನು 108 ಬಾರಿ ಪಠಿಸಬೇಕು.

ಪ್ರತಿನಿತ್ಯ ಈ ಮಂತ್ರವನ್ನು ಪಠಿಸುವುದರಿಂದ ಏಕಾಗ್ರತೆ ಮತ್ತು ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಪೂಜೆಯ ನಂತರ ಖೀರು ಮತ್ತು ಖಿಚಡಿಯನ್ನು ಸರಸ್ವತಿಗೆ ಅರ್ಪಿಸಿ. ಹೀಗೆ ಮಾಡುವುದರಿಂದ ನೀವು ಪರೀಕ್ಷೆಯಲ್ಲಿ ಚೆನ್ನಾಗಿ ಬರೆದು ಉತ್ತಮ ಅಂಕಗಳನ್ನು ಪಡೆಯಬಹುದು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...