alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಾ ಶಿವರಾತ್ರಿಯ ಶುಭ ಮುಹೂರ್ತ

2017_2image_10_14_532595060bholenathpuja-ll

ಮಹಾ ಶಿವರಾತ್ರಿಯಂದು ಶಿವನ ಪೂಜೆ ಮಾಡುವುದರಿಂದ ಎಲ್ಲ ಪ್ರಾರ್ಥನೆ ಈಡೇರುತ್ತದೆ. ಪಿತೃ ದೋಷ ದೂರವಾಗುತ್ತದೆ. ಮನೆಯ ಸಂಪೂರ್ಣ ವಾಸ್ತುದೋಷ ದೂರವಾಗಿ ಮನೆಯಲ್ಲಿ ಸುಖ-ಶಾಂತಿ ಸಿಗುತ್ತದೆ. ಅಜ್ಞಾನವನ್ನು ದೂರ ಮಾಡಿ ಜ್ಞಾನ ನೀಡುವ ಶಕ್ತಿ ಸೃಷ್ಟಿಕರ್ತನಿಗಿದೆ. ಶಿವರಾತ್ರಿಯನ್ನು ದೇಶದಾದ್ಯಂತ ಒಂದು ಉತ್ಸವದ ರೀತಿಯಲ್ಲಿ ಆಚರಿಸಲಾಗುತ್ತದೆ.

ಶಿವರಾತ್ರಿ ಹಬ್ಬ ಜೀವನಕ್ಕೊಂದು ಹೊಸ ಉತ್ಸಾಹ ನೀಡುತ್ತದೆ ಎಂದು ನಂಬಲಾಗಿದೆ. ಶಿವರಾತ್ರಿಯಂದು ವೃತ ಮಾಡುವವರ ಮನೋಕಾಮನೆ ಈಡೇರಲಿದೆ. ಶ್ರದ್ಧಾ ಭಕ್ತಿಯಿಂದ ಶಿವನ ಪೂಜೆ ಮಾಡಿದ್ರೆ ಫಲ ನಿಶ್ಚಿತ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಈ ಬಾರಿ ಶುಕ್ರವಾರ ಅಂದ್ರೆ ಫೆಬ್ರವರಿ 24ರಂದು ಮಹಾಶಿವರಾತ್ರಿ ಬಂದಿದೆ.

ಫೆಬ್ರವರಿ 24ರಂದು 21:38 ಗಂಟೆಗೆ ಮಾಘ ಮಾಸದ ಕೃಷ್ಣಪಕ್ಷದ ಚತುರ್ದಶಿ ತಿಥಿ ಆರಂಭವಾಗಲಿದೆ.

ಪೂಜೆಗೆ ಮಂಗಳಕರವಾದ ಸಮಯ:

ನಿಶ್ಚಿತ ಪೂಜೆಯ ಸಮಯ: ಮಧ್ಯರಾತ್ರಿ 11:44 – 12:40

ಮೊದಲ ಜಾವದ ಪೂಜೆ : ಸಂಜೆ 6:18 – 9:20

ಎರಡನೇ ಜಾವದ ಸಮಯ : ರಾತ್ರಿ 9:20 -12:40

ಮೂರನೇ ಜಾವದ ಸಮಯ : 12:40 -3:45

ನಾಲ್ಕನೇ ಜಾವದ ಸಮಯ : 3.45:ಬೆಳಿಗ್ಗೆ 6:53

ಈ ಜಾವಗಳಲ್ಲಿ ಜಾಗರಣೆ ಮಾಡಿ, ಶಿವನಿಗೆ ಶಾಸ್ತ್ರೋಕ್ತವಾಗಿ ಪೂಜೆ ಮಾಡುವುದರಿಂದ ಶಿವ ಸಂತೃಪ್ತನಾಗಿ ಬೇಡಿದ್ದನ್ನು ನೀಡ್ತಾನೆ ಎಂಬ ನಂಬಿಕೆ ಭಕ್ತರದ್ದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...