alex Certify
ಕನ್ನಡ ದುನಿಯಾ       Mobile App
       

Kannada Duniya

ಶಿವರಾತ್ರಿ ದಿನದಂದು ವಿಘ್ನವಿನಾಶಕನನ್ನು ಮರೆಯಬೇಡಿ

2017_2image_11_18_185962104shivratriganesh-ll

ಶುಕ್ರವಾರ ಮಹಾಶಿವರಾತ್ರಿ ಬಂದಿರುವುದರಿಂದ ಸಾಕಷ್ಟು ವಿಶೇಷತೆಗಳಿವೆ. ಈ ದಿನವನ್ನು ದೇವಿ ಲಕ್ಷ್ಮಿಗೆ ಸಮರ್ಪಿಸಲಾಗಿದೆ. ಶಿವರಾತ್ರಿಯಂದು ಶಿವನ ಪೂಜೆ ಮಾಡುವ ಮೊದಲು ಶ್ರೀಗಣೇಶನನ್ನು ನೆನೆಯಬೇಕು. ಮೊದಲ ಪೂಜೆ ಗಣೇಶನಿಗೆ ಎಂದು ತಂದೆ ಶಿವನೇ ಹೇಳಿರೋದ್ರಿಂದ ಮೊದಲು ವಿಘ್ನನಾಶಕನಿಗೆ ಪೂಜೆ ಮಾಡುವುದನ್ನು ಮರೆಯಬಾರದು.

ಶುಕ್ರವಾರ ಶಿವರಾತ್ರಿಯಂದು ತಾಯಿ ಲಕ್ಷ್ಮಿ ಪೂಜೆ ಮಾಡುವುದು ಬಹಳ ಒಳ್ಳೆಯದು. ಕೀರ್ತಿ, ಸಂಪತ್ತು ಗಳಿಸಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಶಿವರಾತ್ರಿಯ ದಿನ ಗಣೇಶನಿಗೆ ವಿಶೇಷ ಪೂಜೆ ಮಾಡಿ ನಿಮ್ಮ ಇಚ್ಛೆಯನ್ನು ಈಡೇರಿಸಿಕೊಳ್ಳಬಹುದು. ದಪ್ಪವಾದ ದಾರಕ್ಕೆ ಏಳು ಗಂಟು ಹಾಕಿ ಗಣೇಶನ ಚರಣಕ್ಕೆ ಅರ್ಪಣೆ ಮಾಡಿ. ನಾಲ್ಕನೇ ಜಾವದ ಪೂಜೆ ಮುಗಿದ ನಂತ್ರ ಅದನ್ನು ನಿಮ್ಮ ಪರ್ಸ್ ನಲ್ಲಿಟ್ಟುಕೊಳ್ಳಿ. ಹೀಗೆ ಮಾಡಿದಲ್ಲಿ ನಿಮ್ಮ ಜೇಬು ಖಾಲಿಯಾಗುವುದಿಲ್ಲ.

ವಾಸ್ತುಶಾಸ್ತ್ರದ ಪ್ರಕಾರ ಮನೆ ಅಥವಾ ಕಚೇರಿ ವಾಸ್ತು ಸರಿಯಾಗಿಲ್ಲವಾದಲ್ಲಿ ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಹಾಗಾಗಿ ಶಿವರಾತ್ರಿಯಂದು ಮೊದಲು ಗಣೇಶ ಹಾಗೂ ದೇವಿ ಲಕ್ಷ್ಮಿಯ ಪೂಜೆ ಮಾಡಬೇಕು. ಸರಿಯಾದ ದಿಕ್ಕಿನಲ್ಲಿ ಗಣೇಶನ ಮೂರ್ತಿಯನ್ನಿಟ್ಟು ಪೂಜೆ ಮಾಡುವುದು ಅವಶ್ಯಕ.

ಮನೆಯ ಉತ್ತರ ದಿಕ್ಕು ಧನ-ಸಂಪತ್ತನ್ನು ಆಹ್ವಾನಿಸುವ ದಿಕ್ಕು. ಹಾಗಾಗಿ ಗಣೇಶ ಹಾಗೂ ಲಕ್ಷ್ಮಿ ಮೂರ್ತಿ ಅಥವಾ ಫೋಟೋವನ್ನು ಉತ್ತರ ದಿಕ್ಕಿನಲ್ಲಿ ಸ್ಥಾಪನೆ ಮಾಡಿ. ಕೆಳಗೆ ಕೆಂಪು ಬಟ್ಟೆಯನ್ನಿಡಿ. ಗಣೇಶನನ್ನು ಮಹಾಲಕ್ಷ್ಮಿಯ ಮಾನಸ ಪುತ್ರ ಎಂದೇ ಪರಿಗಣಿಸಲಾಗಿದೆ. ಹಾಗಾಗಿ ಎರಡೂ ದೇವರ ಮೂರ್ತಿಗಳನ್ನು ಸ್ಥಾಪನೆ ಮಾಡಿ ಪೂಜೆ ಮಾಡಿ. ವಾಸ್ತುಶಾಸ್ತ್ರ ಹೇಳುವಂತೆ ಕೆಂಪು ಬಣ್ಣದ ಕಾಗದ, ಅಕ್ಕಿ, ಗಣೇಶ, ಲಕ್ಷ್ಮಿಯ ಫೋಟೋ, ಅಶ್ವತ್ಥ ಎಲೆ, ಬೆಳ್ಳಿ ನಾಣ್ಯ, ಗೋಮತಿ ಚಕ್ರ ಹಾಗೂ ರುದ್ರಾಕ್ಷಿ ಇದ್ರಲ್ಲಿ ಒಂದನ್ನು ನಿಮ್ಮ ಪರ್ಸ್ ನಲ್ಲಿಟ್ಟುಕೊಳ್ಳಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...