alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರಹಣ ಕಾಲದಲ್ಲಿ ಮಾಡಬೇಡಿ ಈ ಕೆಲಸ

ಇಂದು ಶತಮಾನದ ದೀರ್ಘ ಚಂದ್ರಗ್ರಹಣ ಸಂಭವಿಸುತ್ತಿದೆ. ಜುಲೈ 27 ರ ರಾತ್ರಿ 11 ಗಂಟೆ 54 ನಿಮಿಷ 2 ಸೆಕೆಂಡ್ ಗೆ ಸಂಭವಿಸುವ ಈ ಗ್ರಹಣವನ್ನು ಭಾರತೀಯರು ವೀಕ್ಷಿಸಬಹುದಾಗಿದೆ. ಚಂದ್ರ ಗ್ರಹಣದ ಸೂತಕ 9 ಗಂಟೆ ಮೊದಲು ಅಂದ್ರೆ 2 ಗಂಟೆ 52 ನಿಮಿಷಕ್ಕೆ ಹಿಡಿಯಲಿದೆ.

ಚಂದ್ರಗ್ರಹಣ ಬೇರೆ ಬೇರೆ ರಾಶಿಯವರಿಗೆ ಬೇರೆ ಬೇರೆ ಪರಿಣಾಮ ಬೀರುತ್ತದೆ. ಗ್ರಹಣ ಕಾಲದಲ್ಲಿ ಕೆಲವೊಂದು ಮುನ್ನೆಚ್ಚರಿಕೆ ವಹಿಸಿದ್ರೆ ಮುಂದೆ ಒಳ್ಳೆಯದಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಗ್ರಹಣ ಕಾಲದ ವೇಳೆ ಸ್ನಾನ, ದ್ಯಾನ, ದಾನ, ಮಂತ್ರ, ಸ್ತೋತ್ರ ಪಠಣ, ತೀರ್ಥಸ್ನಾನ, ಹವನ ಇತ್ಯಾದಿ ಕೆಲಸವನ್ನು ಮಾಡಬೇಕು.

ಗ್ರಹಣ ಕಾಲದಲ್ಲಿ ಆಹಾರ ಸೇವನೆ ಮಾಡುವುದ್ರಿಂದ ರೋಗ ಹರಡುತ್ತದೆ. ಹಾಗಾಗಿ ಗ್ರಹಣ ಕಾಲದಲ್ಲಿ ಭೋಜನ ನಿಷಿದ್ಧ. ಗ್ರಹಣ ಕಾಲದಲ್ಲಿ ಮನೆಯಲ್ಲಿರುವ ಆಹಾರ ಹಾಗೂ ಪಾನೀಯ ಪುನಃ ಬಳಕೆಗೆ ಯೋಗ್ಯವಾಗಿರುವುದಿಲ್ಲ. ಗ್ರಹಣ ಅಥವಾ ಸೂತಕದ ಮೊದಲು ಆಹಾರಕ್ಕೆ ತುಳಸಿ ಎಲೆ ಹಾಕಿದ್ರೆ ಗ್ರಹಣ ಈ ಆಹಾರಕ್ಕೆ ತಟ್ಟುವುದಿಲ್ಲ.

ಗ್ರಹಣದ ವೇಳೆ ಕೋಪ, ಸೊಕ್ಕು, ಸುಳ್ಳು, ವಂಚನೆ ಮಾಡಬಾರದು. ಗ್ರಹಣದ ವೇಳೆ ದೇವರ ಮೂರ್ತಿ ಸ್ಪರ್ಶ, ಉಗುರು ಕತ್ತರಿಸುವುದು, ಕೂದಲು ಕತ್ತರಿಸುವುದು, ನಿದ್ರೆ ಮಾಡಬಾರದು. ಮಕ್ಕಳು, ಗರ್ಭಿಣಿಯರು, ವೃದ್ಧರು ಸಮಯಕ್ಕೆ ಸರಿಯಾಗಿ ಆಹಾರ ಹಾಗೂ ಔಷಧಿ ಸೇವನೆ ಮಾಡಬಹುದು. ಅವ್ರಿಗೆ ಯಾವುದೇ ತೊಂದರೆಯಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...