alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರಹಣದ ವೇಳೆ ಗರ್ಭಿಣಿಯರು ಮಾಡಬೇಡಿ ಈ ಕೆಲಸ

ಜನವರಿ 31 ರಂದು ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ಗ್ರಹಣದ ಬಗ್ಗೆ ಜನರಲ್ಲಿ ಉತ್ಸಾಹವಿದೆ. ಆದ್ರೆ ಇದನ್ನು ಅಶುಭವೆಂದು ಪರಿಗಣಿಸಲಾಗಿದೆ. ಚಂದ್ರ ಗ್ರಹಣದ ಪ್ರಭಾವ 108 ದಿನವಿರಲಿದೆ. ಹಾಗಾಗಿ ಗ್ರಹಣದ ವೇಳೆ ಕೆಲವೊಂದು ಕೆಲಸಗಳನ್ನು ಮಾಡದಿರುವುದು ಒಳ್ಳೆಯದು.

ಚಂದ್ರ ಗ್ರಹಣದ ಪ್ರಭಾವ ಪ್ರತಿಯೊಂದು ರಾಶಿ ಹಾಗೂ ಜನರ ಮೇಲೆ ಬೀಳುತ್ತದೆ. ಆದ್ರೆ ಗರ್ಭಿಣಿಯರು ಹಾಗೂ ಹುಟ್ಟುವ ಮಗುವಿನ ಮೇಲೆ ಇದು ಹೆಚ್ಚಿನ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ. ಹಾಗಾಗಿ ಗರ್ಭಿಣಿಯರು ಹೆಚ್ಚು ಜಾಗೃತೆಯಿಂದಿರಬೇಕೆಂದು ಸಲಹೆ ನೀಡಲಾಗಿದೆ.

ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಮನೆಯಿಂದ ಹೊರಗೆ ಹೋಗಬೇಡಿ.

ಮನೆಯ ಕೋಣೆಯಲ್ಲಿ ಆಕಳ ಸಗಣಿಯಿಂದ ಸ್ವಸ್ಥಿಕವನ್ನು ಬಿಡಿಸಬೇಕು.

ಗರ್ಭಿಣಿಯರು ಗ್ರಹಣದ ದಿನ ಯಾವುದೇ ತರಕಾರಿ ಅಥವಾ ಹಣ್ಣನ್ನು ಗಿಡದಿಂದ ಕೀಳಬಾರದು.

ಗರ್ಭಿಣಿಯರು ಅಂದು ಸೂಜಿ, ದಾರವನ್ನು ಮುಟ್ಟಬಾರದು.

ಬರಿಗಣ್ಣಿನಲ್ಲಿ ಗ್ರಹಣ ನೋಡುವುದು ಕೂಡ ಒಳ್ಳೆಯದಲ್ಲ. ಇದು ಹುಟ್ಟುವ ಮಗುವಿನ ಮೇಲೆ ಪ್ರಭಾವ ಬೀರಲಿದೆ.

ಗ್ರಹಣಕ್ಕಿಂತ ಮೊದಲು ಗರ್ಭಿಣಿಯರು ದಾನ ಮಾಡಬೇಕು. ಅಥವಾ ಬಡ ವ್ಯಕ್ತಿಗಳಿಗೆ ಆಹಾರ ನೀಡಬೇಕು.

ಗ್ರಹಣದ ವೇಳೆ ಶಿವಲಿಂಗದ ಬಳಿ ಕುಳಿತು ಓಂ ನಮಃ ಶಿವಾಯ ಮಂತ್ರ ಜಪಿಸಬೇಕು.

ಗ್ರಹಣದ ನಂತ್ರ ಸ್ನಾನ ಮಾಡಿ ಇಷ್ಟ ದೇವರ ಪೂಜೆ ಮಾಡಿ.

ಗ್ರಹಣದ ನಂತ್ರ ಶಿವನಿಗೆ ಪಂಚಗವ್ಯದ ಅಭಿಷೇಕ ಮಾಡಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...