alex Certify
ಕನ್ನಡ ದುನಿಯಾ       Mobile App
       

Kannada Duniya

ತಾಯಿ ಲಕ್ಷ್ಮಿ ಪೂಜೆ ವೇಳೆ ಇದು ನೆನಪಿರಲಿ

ತಾಯಿ ಮಹಾಲಕ್ಷ್ಮಿ ಕೃಪೆಯಿದ್ದರೆ ಜೀವನದಲ್ಲಿ ಯಾವುದೇ ಕಷ್ಟ ಎದುರಾಗುವುದಿಲ್ಲ ಎನ್ನುತ್ತಾರೆ. ತಾಯಿ ಲಕ್ಷ್ಮಿ ಒಲಿಸಿಕೊಳ್ಳುವುದು ಸುಲಭವಲ್ಲ. ಲಕ್ಷ್ಮಿ ಪೂಜೆಯನ್ನು ಶ್ರದ್ಧೆ-ಭಕ್ತಿಯ ಜೊತೆಗೆ ವಿಧಿ-ವಿಧಾನದ ಮೂಲಕ ಮಾಡಬೇಕಾಗುತ್ತದೆ. ನಿಯಮದಂತೆ ತಾಯಿ ಪೂಜೆ ಮಾಡಿದಲ್ಲಿ ಮಾತ್ರ ಲಕ್ಷ್ಮಿ ಆಶೀರ್ವಾದ ಪಡೆಯಲು ಸಾಧ್ಯ.

ತಾಯಿ ಲಕ್ಷ್ಮಿ ಪೂಜೆ ಮಾಡುವಾಗ ಬಿಳಿಯ ಅಥವಾ ಗುಲಾಬಿ ಬಣ್ಣದ ಬಟ್ಟೆ ಧರಿಸಿಯೇ ಮಾಡಬೇಕು.

ಲಕ್ಷ್ಮಿ ಪೂಜೆಗೆ ಶುಭ ಮುಹೂರ್ತ ಗೋಧೂಳಿ ಸಮಯ ಮತ್ತು ಮಧ್ಯರಾತ್ರಿ.

ಗುಲಾಬಿ ಬಣ್ಣದ ಕಮಲದ ಹೂವಿನ ಮೇಲೆ ಕುಳಿತಿರುವ ಲಕ್ಷ್ಮಿ ಮೂರ್ತಿಗೆ ಪೂಜೆ ಮಾಡಬೇಕು.

ಇದ್ರ ಜೊತೆಗೆ ಲಕ್ಷ್ಮಿ ಕೈನಿಂದ ನಾಣ್ಯ ಕೆಳಗೆ ಬೀಳುತ್ತಿರುವ ಮೂರ್ತಿಯನ್ನು ಆಯ್ಕೆ ಮಾಡಿಕೊಳ್ಳಿ.

ತಾಯಿ ಲಕ್ಷ್ಮಿಗೆ ಗುಲಾಬಿ ಬಣ್ಣದ ಹೂ ಅದ್ರಲ್ಲೂ ಕಮಲದ ಹೂವನ್ನು ಅರ್ಪಿಸುವುದು ಶ್ರೇಷ್ಠ.

ಲಕ್ಷ್ಮಿ ಮಂತ್ರವನ್ನು ಸ್ಫಟಿಕದ ಮಾಲೆ ಹಿಡಿದು ಜಪಿಸಿದ್ರೆ ಫಲ ಶೀಘ್ರ ಪ್ರಾಪ್ತಿಯಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...