alex Certify
ಕನ್ನಡ ದುನಿಯಾ       Mobile App
       

Kannada Duniya

52 ವರ್ಷಗಳ ನಂತ್ರ ಕೂಡಿ ಬಂದಿದೆ ಮಂಗಳಕರ ಮುಹೂರ್ತ

images

ದೇಶದಾದ್ಯಂತ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಕಳೆಗಟ್ಟಿದೆ. ಎಲ್ಲೆಡೆ ಗೋಪಿಲೋಲನ ಆರಾಧನೆ ನಡೆಯುತ್ತಿದೆ. ಶ್ರೀಕೃಷ್ಣ ಮಂದಿರಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ. ರಾಧಾ- ಕೃಷ್ಣನಿಗೆ ಅಲಂಕಾರ ಮಾಡಿ, ಬೆಣ್ಣೆ, ಸಿಹಿ ತಿಂಡಿಗಳನ್ನು ನೈವೇದ್ಯ ಮಾಡಿ, ವಿಠಲನ ಆರಾಧನೆಯಲ್ಲಿ ಭಕ್ತರು ನಿರತರಾಗಿದ್ದಾರೆ.

ಇದು ಶ್ರೀಕೃಷ್ಣನ 5243 ನೇ ಜನ್ಮದಿನವೆಂದು ಹೇಳಲಾಗ್ತಾ ಇದೆ. ಭಾದ್ರಪದದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ರೋಹಿಣಿ ನಕ್ಷತ್ರದಲ್ಲಿ ಮಧ್ಯರಾತ್ರಿ 12 ಗಂಟೆಗೆ ಶ್ರೀಕೃಷ್ಣನ ಜನನವಾಗಿದೆ. ಈ ಬಾರಿಯ ಕೃಷ್ಣಜನ್ಮಾಷ್ಟಮಿ ಬಹಳ ವಿಶೇಷತೆಯನ್ನು ಪಡೆದಿದೆ. ಅಷ್ಟಮಿ ಜೊತೆಗೆ ರೋಹಿಣಿ ನಕ್ಷತ್ರ ಬಂದಿರುವುದರಿಂದ ಇಂದು ಕೃಷ್ಣನ ಆರಾಧನೆ ಮಾಡುವುದು ಬಹಳ ಮಂಗಳಕರವಾಗಿದೆ. 52 ವರ್ಷಗಳ ನಂತ್ರ ಇಂತಹ ಮುಹೂರ್ತ ಕೂಡಿ ಬಂದಿದೆ. ಈ ಹಿಂದೆ 1958ರಲ್ಲಿ ಇದೇ ತಿಥಿ ಹಾಗೂ ನಕ್ಷತ್ರ ಒಟ್ಟಿಗೆ ಬಂದಿತ್ತು.

ಬಹಳಷ್ಟು ವಿಶೇಷತೆಗಳನ್ನು ಹೊಂದಿರುವ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿಯೂ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪಾಂಡುರಂಗನ ಪೂಜೆ ನೆರವೇರುತ್ತಿದೆ. ಬೆಂಗಳೂರಿನ ಇಸ್ಕಾನ್ ಸೇರಿದಂತೆ ಪ್ರಸಿದ್ಧ ಕೃಷ್ಣನ ದೇವಾಲಯಗಳಿಗೆ ರಾತ್ರಿಯಿಂದಲೇ ಭಕ್ತರು ಹರಿದು ಬರ್ತಿದ್ದಾರೆ. ಇಸ್ಕಾನ್ ನಲ್ಲಿ ಶ್ರೀಕೃಷ್ಣನಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ರಾಧಾ-ಕೃಷ್ಣ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಲಾಗಿದೆ. ವಿಶೇಷ ಪ್ರಸಾದವನ್ನು ವಿನಿಮಯ ಮಾಡಲಾಗ್ತಾ ಇದೆ. ಹರೆ ಕೃಷ್ಣ ಹರೆ ಕೃಷ್ಣ ನಾಮಸ್ಮರಣೆ ಎಲ್ಲೆಡೆ ಮೊಳಗಿದೆ.

ಪೊಡವಿಗೊಡೆಯನ ನಾಡು ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಮನೆ ಮಾಡಿದೆ. ಶ್ರೀಕೃಷ್ಣನಿಗೆ ವಿಶೇಷ ಪೂಜೆ ಮಾಡಲಾಗ್ತಾ ಇದೆ. ಸರತಿ ಸಾಲಿನಲ್ಲಿ ನಿಂತಿರುವ ಭಕ್ತರು ಕಡಗೋಲು ಕೃಷ್ಣನ ದರ್ಶನ ಪಡೆದು ಪುನೀತರಾಗ್ತಿದ್ದಾರೆ. ಶಾಲೆಗಳಲ್ಲಿ ಬಾಲ ಕೃಷ್ಣನ ವೇಷ ತೊಟ್ಟ ಮಕ್ಕಳು ಸಂಭ್ರಮಿಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...