alex Certify
ಕನ್ನಡ ದುನಿಯಾ       Mobile App
       

Kannada Duniya

ವಿಜಯದಶಮಿಯಂದು ಈ ಸಮಯದಲ್ಲಿ ಮಾಡಿ ಪೂಜೆ

ಸೆಪ್ಟೆಂಬರ್ 30 ವಿಜಯದಶಮಿ. ರಾಮ ಲಂಕಾಪತಿ ರಾವಣನ ಜೊತೆ 10 ದಿನಗಳ ಕಾಲ ಯುದ್ಧ ಮಾಡ್ದ. 10ನೇ ದಿನ ರಾವಣನ ಸಂಹಾರವಾಯ್ತು. ನವರಾತ್ರಿ ದಶಮಿಯಂದು ಮುಕ್ತಾಯವಾಗುತ್ತದೆ ಎಂಬ ನಂಬಿಕೆಯೂ ಇದೆ. ದಶಮಿಯ ದಿನ ಶಸ್ತ್ರಾಸ್ತ್ರಗಳ ಪೂಜೆ ಮಾಡಲಾಗುತ್ತದೆ. ಇದ್ರ ಜೊತೆಗೆ ದೀಪಾವಳಿ ಸಂಭ್ರಮ ಶುರುವಾಗುತ್ತದೆ.

ಈ ದಿನ ಶುಭ ಕೆಲಸಗಳನ್ನು ಆರಂಭಿಸಿದ್ರೆ ಎಲ್ಲವೂ ಶುಭವಾಗುತ್ತದೆ ಎಂದು ನಂಬಲಾಗಿದೆ. ದಶಮಿ ತಿಥಿ ಸೆಪ್ಟೆಂಬರ್ 29 ರಾತ್ರಿ 11 ಗಂಟೆ 49 ನಿಮಿಷಕ್ಕೆ ಶುರುವಾಗಲಿದೆ. ಅಕ್ಟೋಬರ್ 1ರ ರಾತ್ರಿ 1 ಗಂಟೆ 35 ನಿಮಿಷಕ್ಕೆ ಮುಗಿಯಲಿದೆ. ಸೆಪ್ಟೆಂಬರ್ 30ರಂದು ವಿಜಯದ ಮುಹೂರ್ತ 45 ನಿಮಿಷವಿದೆ.

ಮಧ್ಯಾಹ್ನ 2 ಗಂಟೆ 8 ನಿಮಿಷದಿಂದ 2 ಗಂಟೆ 55 ನಿಮಿಷದವರೆಗೆ ಶುಭ ಮುಹೂರ್ತವಿದೆ. ವಿಜಯ ದಶಮಿಯ ಸಂಜೆ ಸಮಯವನ್ನು ವಿಜಯಲಾಕವೆಂದು ಕರೆಯಲಾಗುತ್ತದೆ. ಈ ದಿನ ಅಪರಾಜಿತ ಮತ್ತು ಶಮಿ ಪೂಜೆಯನ್ನು ಅವಶ್ಯವಾಗಿ ಮಾಡಲಾಗುತ್ತದೆ. ಈ ವೇಳೆ ಆನೆಗಳು, ಕುದುರೆಗಳು, ಶಸ್ತ್ರಾಸ್ತ್ರಗಳನ್ನು ಪೂಜೆ ಮಾಡಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...