alex Certify
ಕನ್ನಡ ದುನಿಯಾ       Mobile App
       

Kannada Duniya

ನವರಾತ್ರಿಯಲ್ಲಿ ಮರೆತೂ ಮಾಡಬೇಡಿ ಈ ಕೆಲಸ

28_09_2016-maadurgaji

ದುರ್ಗಾ ದೇವಿಯ ಆರಾಧನೆಗೆ ದಿನಗಣನೆ ಆರಂಭವಾಗಿದೆ. ಅಕ್ಟೋಬರ್ ಒಂದರಿಂದ ದೇವಿಯ ಪೂಜೆ ನಡೆಯಲಿದೆ. ನವರಾತ್ರಿ ಆಚರಣೆಗೆ ದೇಶದ ಜನರು ಸಜ್ಜಾಗ್ತಿದ್ದಾರೆ. ನವರಾತ್ರಿಯ 9 ದಿನಗಳೂ ಬಹಳ ಮಹತ್ವ ಪಡೆದಿದೆ. ದೇವಿಯ ಆರಾಧನೆ ಜೊತೆಗೆ ಕೆಲವೊಂದು ವಿಷಯಗಳ ಬಗ್ಗೆ ಗಮನ ನೀಡಬೇಕಾಗುತ್ತದೆ. ಅಪ್ಪಿತಪ್ಪಿ 9 ದಿನಗಳ ಕಾಲ ಆ ಕೆಲಸಗಳನ್ನು ಮಾಡಿದ್ರೆ ದುರ್ಗೆಯ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.

ನವರಾತ್ರಿಯಂದು ವ್ರತ ಮಾಡುವವರು ಶ್ರದ್ಧಾ, ಭಕ್ತಿಯಿಂದ ಪೂಜೆಯನ್ನು ಮಾಡಬೇಕು. ಯಾರ ನಿಂದನೆಯನ್ನೂ ಮಾಡಬಾರದು. ಜಗಳ ಮಾಡುವುದು ಒಳಿತಲ್ಲ. ಇದರಿಂದ ದೇಹದಲ್ಲಿರುವ ಸಾತ್ವಿಕ ಶಕ್ತಿಯ ನಾಶವಾಗುತ್ತದೆ.

ವ್ರತ ಮಾಡುವವರು ಬೆಳ್ಳುಳ್ಳಿ, ಈರುಳ್ಳಿಯನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಮಸಾಲೆ ಪದಾರ್ಥ, ಮಾಂಸ ಮತ್ತು ಮದ್ಯದಿಂದ ದೂರ ಇರಬೇಕು.

ನವರಾತ್ರಿಯಂದು ಕತ್ತರಿಯಿಂದ ದೂರ ಇರುವುದು ಒಳ್ಳೆಯದು. ಕೂದಲು ಅಥವಾ ಗಡ್ಡ ತೆಗೆಯುವುದು ನಿಷಿದ್ಧ. ಅದ್ರಲ್ಲೂ ದೇವಿಯ ಪೂಜೆ ಹಾಗೂ ವ್ರತ ಮಾಡುವವರು ಕೂದಲು ಕತ್ತರಿಸಬಾರದು. ಉಗುರು ತೆಗೆಯಬಾರದು. ಪೂಜೆ ಮಾಡುವ ವ್ಯಕ್ತಿಯ ಶರೀರದಲ್ಲಿ ದೇವತೆ ನೆಲೆಸಿರುತ್ತಾಳೆಂಬ ನಂಬಿಕೆ ಇದೆ.

ಕಳಶ ಇಡುವವರು ಹಾಗೆ ಅಖಂಡ ದೀಪ ಉರಿಸುವವರು ಮನೆಯ ಬೀಗ ಹಾಕಿ ಹೊರಗೆ ಹೋಗಬಾರದು.

ನವರಾತ್ರಿ ವ್ರತ ಮಾಡಿ ಪೂಜೆ ಮಾಡುವವರು ಚರ್ಮದ ವಸ್ತುಗಳನ್ನು ಬಳಸಬಾರದು. ಕಪ್ಪು ಬಟ್ಟೆಯನ್ನು ಧರಿಸಬೇಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...