alex Certify
ಕನ್ನಡ ದುನಿಯಾ       Mobile App
       

Kannada Duniya

ಖಗ್ರಾಸ ಸೂರ್ಯ ಗ್ರಹಣ: ಯಾವ ರಾಶಿಗೆ ಯಾವ ಫಲ

31_08_2016-solareclipse

ಇಂದು ಸೆಪ್ಟೆಂಬರ್ 1. ಭಾದ್ರಪದ ಅಮವಾಸ್ಯೆ. ಖಗ್ರಾಸ ಸೂರ್ಯ ಗ್ರಹಣ. ಈ ಗ್ರಹಣ ಸಿಂಹ ರಾಶಿ, ಪೂರ್ವ ಫಾಲ್ಗುಣಿ ನಕ್ಷತ್ರದ ಮೇಲೆ ಬಂದಿದೆ. ಆಫ್ರಿಕಾ, ಹಿಂದೂ ಮಹಾಸಾಗರ, ಆಸ್ಟ್ರೇಲಿಯಾದ ಪೂರ್ವ ಕರಾವಳಿಯಲ್ಲಿ ಹೆಚ್ಚಾಗಿ ಕಾಣಲಿದೆ. ಆಫ್ರಿಕಾದಲ್ಲಿ ಭಾಗಶಃ ಗೋಚರಿಸಲಿದೆ.

ಭಾರತದ ಕಾಲಮಾನ 11.43ಕ್ಕೆ ಗ್ರಹಣ ಶುರುವಾಗಲಿದೆ. 12.47ಕ್ಕೆ ಸೂರ್ಯಗ್ರಹಣ ಉತ್ತುಂಗದಲ್ಲಿರಲಿದೆ. 2.31ಕ್ಕೆ ಸೂರ್ಯ ಗ್ರಹಣ ಮುಕ್ತಾಯಗೊಳ್ಳಲಿದೆ. ಗುರುವಾರ ಕಾಣಿಸಿಕೊಳ್ಳಲಿರುವ ಸೂರ್ಯ ಗ್ರಹಣ ಬಹಳಷ್ಟು ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ. ಆಫ್ರಿಕನ್ ದೇಶಗಳ ಮೇಲೆ ಇದರ ಪ್ರಭಾವ ಜಾಸ್ತಿ ಇರಲಿದೆ. ಈ ದೇಶಗಳಲ್ಲಿ ಅಶಾಂತಿ ಕಾಡಲಿದೆ. ಪೂರ್ವ ಏಷ್ಯಾದ ದೇಶಗಳಲ್ಲಿ ಹವಾಮಾನ, ಬಿರುಗಾಳಿ, ಭೂಕಂಪದಿಂದ ಜನರು ತೊಂದರೆಗೊಳಪಡುವ ಸಾಧ್ಯತೆ ಹೆಚ್ಚಿದೆ.

ಯಾವ ರಾಶಿಗೆ ಯಾವ ಫಲ

ಮೇಷ : ಸಾಮಾಜಿಕ ಅಪಮಾನ ಎದುರಿಸಬೇಕಾದೀತು. ಮಾತಿನ ಮೇಲೆ ಹಿಡಿತವಿರಲಿ.

ವೃಷಭ : ಕೆಲಸ ಕಾರ್ಯದಲ್ಲಿ ಯಶಸ್ಸು. ಕುಟುಂಬದಲ್ಲಿ ಶಾಂತಿ ನೆಲೆಸಲಿದೆ. ಆರೋಗ್ಯ ಸಂಬಂಧಿ ಸಮಸ್ಯೆ ಕಾಡಬಹುದು.

ಮಿಥುನ : ಕೆಲವರಿಗೆ ಆರ್ಥಿಕ ಲಾಭ. ಆಲೋಚಿಸಿ ನಿರ್ಧಾರ ಕೈಗೊಳ್ಳುವುದು ಒಳ್ಳೆಯದು.

ಕರ್ಕ : ಹೊಸ ಕೆಲಸಗಳಿಗೆ ಕೈ ಬಿಚ್ಚಿ ಖರ್ಚು ಮಾಡುವುದು ಬೇಡ. ಇದರಿಂದ ನಷ್ಟ ಅನುಭವಿಸಬೇಕಾಗುತ್ತದೆ. ಗೃಹ ಖರ್ಚು ಹೆಚ್ಚಳ.

ಸಿಂಹ : ಶಾರೀರಿಕ ಅಥವಾ ಮಾನಸಿಕ ಸಮಸ್ಯೆ. ಸಹೋದರರ ಜೊತೆ ಮನಸ್ತಾಪವಾಗುವ ಸಾಧ್ಯತೆ ಇದೆ.

ಕನ್ಯಾ : ಅಧಿಕ ಖರ್ಚು. ಇದರಿಂದ ಮಾನಸಿಕ ಕಿರಿಕಿರಿ. ಹಣದ ವಿಚಾರದಲ್ಲಿ ಸ್ನೇಹಿತರಿಂದ ದೂರ ಇರುವುದು ಒಳಿತು.

ತುಲಾ : ಸಮಯದ ಮಹತ್ವ ಅರಿತು ಕೆಲಸ ಮಾಡಿದಲ್ಲಿ ಲಾಭ ಪ್ರಾಪ್ತಿ. ಹೊಸ ಕಾರ್ಯ ಆರಂಭಿಸಲು ಒಳ್ಳೆಯ ಕಾಲ. ಅನಗತ್ಯ ವಾದಗಳಿಂದ ದೂರವಿರಿ.

ವೃಶ್ಚಿಕ : ಆಲೋಚನೆ ಮಾಡಿ ಹಣ ವಿನಿಯೋಗ ಮಾಡಿ. ವಾಹನ ಓಡಿಸುವಾಗ ಎಚ್ಚರವಿರಲಿ.

ಧನು : ಹಣದ ವಿಚಾರದಲ್ಲಿ ಚಿಂತೆ. ಸಂಗಾತಿ ಆರೋಗ್ಯ ಸಮಸ್ಯೆ ನಿಮ್ಮ ಚಿಂತೆಗೆ ಕಾರಣವಾಗಬಹುದು.

ಮಕರ: ದೈಹಿಕ ಸುಖ ಪ್ರಾಪ್ತಿಯಾಗಲಿದೆ. ಕುಟುಂಬದಲ್ಲಿ ಸಹಕಾರ ವೃದ್ಧಿಯಾಗಲಿದೆ.

ಕುಂಭ : ಸಂಗಾತಿಗೆ ಸಮಸ್ಯೆ ಎದುರಾಗಲಿದೆ. ಜೀವನದಲ್ಲಿ ಅತಿ ದೊಡ್ಡ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಆರೋಗ್ಯದ ವಿಚಾರದಲ್ಲಿ ಬೇಜವಾಬ್ದಾರಿ ಒಳ್ಳೆಯದಲ್ಲ.

ಮೀನ : ಕೆಲವರಿಗೆ ರೋಗ ಕಾಡಬಹುದು. ಆಹಾರ ಸೇವನೆ ವೇಳೆ ಎಚ್ಚರವಿರಲಿ. ಕೋಪ ನಿಯಂತ್ರಣದಲ್ಲಿರಲಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...