alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶೇಷ ದಿನವಾದ ನ.4 ರಂದು ಅವಶ್ಯವಾಗಿ ಮಾಡಿ ಈ ಕೆಲಸ

ನವೆಂಬರ್ 4 ಶನಿವಾರ ಕಾರ್ತಿಕ ಮಾಸದ ಶುಕ್ಲ ಪಕ್ಷದ ಪೂರ್ಣಿಮೆ. ಹಿಂದೂ ಧರ್ಮದಲ್ಲಿ ಹುಣ್ಣಿಮೆಗೆ ವಿಶೇಷ ಮಹತ್ವವಿದೆ. ಹುಣ್ಣಿಮೆ ದಿನ ಪೂಜೆ-ಪ್ರಾರ್ಥನೆ ಜೊತೆಗೆ ದಾನ ಮಾಡುವುದ್ರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಕಾರ್ತಿಕ ಪೂರ್ಣಿಮೆಯಂದು ಜನರು ಗಂಗಾ ನದಿಯಲ್ಲಿ ಪುಣ್ಯ ಸ್ನಾನ ಮಾಡ್ತಾರೆ.

ಶಾಸ್ತ್ರಗಳ ಪ್ರಕಾರ ಹುಣ್ಣಿಮೆ ದಿನ ಮಾಡುವ ಕೆಲವೊಂದು ಕೆಲಸದಿಂದಾಗಿ ಪುಣ್ಯ ಪ್ರಾಪ್ತಿಯಾಗುವ ಜೊತೆಗೆ ಧನ-ಸಂಪತ್ತಿನ ಸಮಸ್ಯೆ ಎಂದೂ ಕಾಡುವುದಿಲ್ಲ.

ಹುಣ್ಣಿಮೆ ದಿನ ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಮನೆಯ ಮುಖ್ಯ ದ್ವಾರಕ್ಕೆ ಮಾವಿನ ಎಲೆಯ ತೋರಣವನ್ನು ಕಟ್ಟಿ. ಇದ್ರಿಂದ ನಕಾರಾತ್ಮಕ ಶಕ್ತಿ ಮನೆಯನ್ನು ಪ್ರವೇಶ ಮಾಡುವುದಿಲ್ಲ.

ಕಾರ್ತಿಕ ಮಾಸದ ಹುಣ್ಣಿಮೆ ಈ ಬಾರಿ ಶನಿವಾರ ಬಂದಿದೆ. ಇದ್ರಿಂದ ಹುಣ್ಣಿಮೆ ಮಹತ್ವ ಮತ್ತಷ್ಟು ಹೆಚ್ಚಾಗಿದೆ. ಶನಿ ದೇವಸ್ಥಾನಕ್ಕೆ ಹೋಗಿ ಸಾಸಿವೆ ಎಣ್ಣೆಯನ್ನು ದೇವರಿಗೆ ಅರ್ಪಿಸಿ.

ಕಾರ್ತಿಕ ಮಾಸದ ಹುಣ್ಣಿಮೆ ದಿನ ತುಳಸಿ ಗಿಡದ ಮುಂದೆ ತುಪ್ಪದ ದೀಪವನ್ನು ಹಚ್ಚಿ. ಇದ್ರಿಂದ ಮನೆಯಲ್ಲಿ ಸದಾ ಸೌಭಾಗ್ಯ ನೆಲೆಸಿ ದೌರ್ಭಾಗ್ಯ ದೂರವಾಗುತ್ತದೆ.

ಹುಣ್ಣಿಮೆ ದಿನ 11 ಕವಡೆಯನ್ನು ತಂದು ಅದಕ್ಕೆ ಅರಿಶಿನ ಹಚ್ಚಿ ಕಪಾಟಿನಲ್ಲಿಡಿ. ಹೀಗೆ ಮಾಡಿದಲ್ಲಿ ಲಕ್ಷ್ಮಿ ಕೃಪೆ ಸದಾ ನಿಮ್ಮ ಮೇಲಿರುತ್ತದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...