alex Certify
ಕನ್ನಡ ದುನಿಯಾ       Mobile App
       

Kannada Duniya

ಮೇ30 ರಂದು ಅವಶ್ಯವಾಗಿ ಮಾಡಿ ಈ ಕೆಲಸ

2017_5image_09_41_429148092mangal-ll

ಮೇ 30ರ ಬೆಳಿಗ್ಗೆ ಸೂರ್ಯೋದಯವಾಗ್ತಾ ಇದ್ದಂತೆ ಮಂಗಲ ಪುಷ್ಯ ಯೋಗ ಶುರುವಾಗಲಿದೆ. ಈ ಶುಭ ಗಳಿಗೆ ಸಂಜೆ 5.25 ರವರೆಗೆ ಇರಲಿದೆ. ಋಗ್ವೇದದ ಪ್ರಕಾರ ಈ ನಕ್ಷತ್ರ ಮಂಗಳಕರ, ಶುಭಕರ ಹಾಗೂ ಆನಂದಮಯವಾಗಿರಲಿದೆ. ಎಷ್ಟೇ ಪ್ರಯತ್ನಪಟ್ಟರೂ ಜಮೀನು ದೊರಕದವರು, ಸಹೋದರನ ಜೊತೆ ಸದಾ ಜಗಳಕ್ಕಿಳಿಯುವವರು, ಶತ್ರುಗಳು ಹೆಚ್ಚಾಗುತ್ತಿದ್ದರೆ ಇದು ಮಂಗಳ ದೋಷವೆಂದು ಅರ್ಥ. ಜ್ಯೋತಿಷ್ಯದ ಪ್ರಕಾರ ಮಂಗಳನ ಕೃಪೆಗೆ ಪಾತ್ರರಾಗಲು ಕೆಲವೊಂದು ಕೆಲಸಗಳನ್ನು ಅವಶ್ಯವಾಗಿ ಮಾಡಬೇಕಾಗುತ್ತದೆ.

ಕಟ್ಟಿಗೆ ಒಲೆಯಲ್ಲಿ ಮಾಡಿದ ಸಿಹಿ ರೊಟ್ಟಿಯನ್ನು ಹಂಚಬೇಕು.

ತಾಮ್ರ ಅಥವಾ ಹವಳದಿಂದ ಮಾಡಿದ ಉಂಗುರ ಧರಿಸಿದರೆ ಒಳ್ಳೆಯದು.

ಸಹೋದರನ ಸೇವೆ ಮಾಡಿದಲ್ಲಿ ಮಂಗಳ ಗ್ರಹದ ಕೃಪೆಗೆ ಪಾತ್ರರಾಗಬಹುದು.

ಕೆಂಪು ಬಣ್ಣದ ಕಲ್ಲನ್ನು ಎರಡು ಭಾಗ ಮಾಡಿ ಒಂದನ್ನು ಹರಿಯುವ ನೀರಿಗೆ ಹಾಕಿ. ಇನ್ನೊಂದು ಕಲ್ಲನ್ನು ನೀವು ಇಟ್ಟುಕೊಳ್ಳಿ.

ಗಣೇಶನ ಸ್ತೋತ್ರ, ದೇವಿ ಕವಚ, ಲಕ್ಷ್ಮಿ ಸೋತ್ರದಲ್ಲಿ ಒಂದನ್ನು ನಿಯಮಿತವಾಗಿ ಓದುತ್ತ ಬಂದಲ್ಲಿ ಮಂಗಳ ಗ್ರಹದ ದೋಷ ನಿವಾರಣೆಯಾಗುತ್ತದೆ.

ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯಬೇಕು.

ತುಳಸಿ ಗಿಡಕ್ಕೆ ನೀರು ಹಾಕಬೇಕು.

ಈ ಮೇಲಿನ ಯಾವುದೇ ಒಂದು ಕೆಲಸವನ್ನು ಮಾಡಿದ್ರೂ ಮಂಗಳನ ಕೃಪೆಗೆ ಪಾತ್ರರಾಗಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...