alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಇವತ್ತಿನ ದಿನ ನಿಮಗೆ ಮಿಶ್ರಫಲವಿದೆ. ಕಚೇರಿ ಅಥವಾ ಉದ್ಯಮದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಚರ್ಚೆ ನಡೆಸಲಿದ್ದೀರಿ. ಸರ್ಕಾರದಿಂದ ಲಾಭ ದೊರೆಯುವ ಸಾಧ್ಯತೆ ಇದೆ. ಕಚೇರಿ ಕೆಲಸಕ್ಕಾಗಿ ಪ್ರಯಾಣ ಮಾಡಬೇಕಾಗುತ್ತದೆ.

ವೃಷಭ ರಾಶಿ

ಹೊಸ ಕಾರ್ಯ ಆರಂಭಿಸಲಿದ್ದೀರಿ. ದೂರದಲ್ಲಿ ನೆಲೆಸಿರುವ ಸ್ನೇಹಿತರು ಮತ್ತು ಸಂಬಂಧಿಕರಿಂದ ಶುಭ ಸಮಾಚಾರ ಸಿಗಲಿದೆ. ವಿದೇಶಕ್ಕೆ ತೆರಳುವ ಅವಕಾಶ ಒದಗಿ ಬರಬಹುದು. ಉದ್ಯಮದಲ್ಲಿ ಆರ್ಥಿಕ ಲಾಭ ದೊರೆಯಲಿದೆ.

ಮಿಥುನ ರಾಶಿ

ಹೊಸ ಕಾರ್ಯವನ್ನು ಆರಂಭಿಸಬೇಡಿ. ಕೋಪವನ್ನು ನಿಯಂತ್ರಿಸಿಕೊಳ್ಳದಿದ್ದರೆ ಅನಿಷ್ಟ ಸಂಭವಿಸುತ್ತದೆ. ಅಧಿಕ ಖರ್ಚಿನಿಂದಾಗಿ ಹಣಕಾಸಿನ ಕೊರತೆಯ ಅನುಭವವಾಗುತ್ತದೆ. ಧಾರ್ಮಿಕ ಕಾರ್ಯ ಮತ್ತು ಈಶ್ವರನ ಆರಾಧನೆಯಲ್ಲಿ ತೊಡಗಿಕೊಳ್ಳಿ.

ಕರ್ಕ ರಾಶಿ

ವೈಭವೋಪೇತ ಜೀವನ ಮತ್ತು ಮನರಂಜನೆಯಿಂದ ಇಂದು ಆನಂದ ಪಡೆಯುತ್ತೀರಿ. ಉದ್ಯಮದಲ್ಲಿ ಲಾಭವಿದೆ. ಆರೋಗ್ಯ ಉತ್ತಮವಾಗಿರಲಿದೆ. ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ. ಪ್ರವಾಸ ಆಯೋಜನೆ ಮಾಡುವ ಸಾಧ್ಯತೆ ಇದೆ.

ಸಿಂಹ ರಾಶಿ

ಇವತ್ತಿನ ದಿನ ನಿಮಗೆ ಮಧ್ಯಮ ಫಲದಾಯಕವಾಗಿದೆ. ಕುಟುಂಬ ಸದಸ್ಯರೊಂದಿಗೆ ಮಿತವಾಗಿ ಮಾತನಾಡಿ. ನಿತ್ಯದ ಕೆಲಸಗಳಿಗೆ ಅಡಚಣೆ ಉಂಟಾಗಬಹುದು. ಅಧಿಕ ಪರಿಶ್ರಮದ ನಂತರವೂ ತಕ್ಕ ಪ್ರತಿಫಲ ದೊರೆಯದೇ ಇರುವುದರಿಂದ ಹತಾಶೆಯ ಅನುಭವವಾಗುತ್ತದೆ.

ಕನ್ಯಾ ರಾಶಿ

ಇಂದು ಕಲಹ ಮತ್ತು ಚರ್ಚೆಯಿಂದ ದೂರವಿರಿ. ಆಕಸ್ಮಿಕ ಖರ್ಚಿನ ಸಾಧ್ಯತೆ ಇದೆ. ವಿದ್ಯಾರ್ಥಿಗಳ ಅಧ್ಯಯನಕ್ಕೆ ತೊಡಕುಂಟಾಗಲಿದೆ. ಸ್ನೇಹಿತರ ಭೇಟಿ ಮನಸ್ಸಿಗೆ ಮುದ ನೀಡುವುದು. ಆಸ್ತಿ ಖರೀದಿಯಲ್ಲಿ ಎಚ್ಚರ ವಹಿಸಿ.

ತುಲಾ ರಾಶಿ

ಮನಸ್ಸಿನಲ್ಲಿ ಅಧಿಕ ಸಂವೇದನಾಶೀಲತೆಯ ಅನುಭವವಾಗಲಿದೆ. ಶರೀರದಲ್ಲಿ ಸ್ಪೂರ್ತಿಯ ಅಭಾವ ಉಂಟಾಗಲಿದೆ. ಮನಸ್ಸು ವ್ಯಗ್ರವಾಗುತ್ತದೆ. ಹಣ ಮತ್ತು ಪ್ರತಿಷ್ಠೆಗೆ ಹಾನಿಯಾಗಲಿದೆ. ಸಂಬಂಧಿಕರೊಂದಿಗಿನ ವಾದ – ವಿವಾದದಿಂದ ಮನಸ್ಸಿಗೆ ನೋವುಂಟಾಗಲಿದೆ.

ವೃಶ್ಚಿಕ ರಾಶಿ

ದಿನವಿಡೀ ಪ್ರಸನ್ನವಾಗಿರುತ್ತೀರಾ. ಹೊಸ ಕಾರ್ಯವನ್ನು ಆರಂಭಿಸಲಿದ್ದೀರಿ. ಎಲ್ಲಾ ಕಾರ್ಯಗಳಲ್ಲೂ ಇವತ್ತು ಯಶಸ್ಸು ಸಿಗಲಿದೆ. ಆರ್ಥಿಕ ಲಾಭ ಮತ್ತು ಭಾಗ್ಯ ವೃದ್ಧಿಯಾಗಲಿದೆ. ಒಡಹುಟ್ಟಿದವರಿಂದ ಲಾಭ ಸಿಗುತ್ತದೆ.

ಧನು ರಾಶಿ

ಅಸಮಂಜಸತೆಯಿಂದಾಗಿ ದೃಢ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಮನಸ್ಸು ವ್ಯಾಕುಲಗೊಳ್ಳಲಿದೆ. ಅಂದುಕೊಂಡ ಕಾರ್ಯದಲ್ಲಿ ಸಫಲತೆ ಸಿಗದೇ ಇರುವುದರಿಂದ ಹತಾಶರಾಗಬಹುದು. ಕೆಲಸದ ಒತ್ತಡ ಹೆಚ್ಚಾಗಲಿದೆ. ಅನಾವಶ್ಯಕವಾಗಿ ಹಣ ಖರ್ಚಾಗಲಿದೆ.

ಮಕರ ರಾಶಿ

ಇವತ್ತು ಕೈಗೊಂಡ ಎಲ್ಲಾ ಕಾರ್ಯಗಳೂ ಯಶಸ್ವಿಯಾಗಲಿವೆ. ಕಚೇರಿ ಮತ್ತು ಉದ್ಯಮದಲ್ಲಿ ಪ್ರತಿಷ್ಠೆ ಹೆಚ್ಚಾಗಲಿದೆ. ಪದೋನ್ನತಿಯ ಯೋಗವಿದೆ. ಶರೀರಕ್ಕೆ ಹಾನಿ ಸಂಭವಿಸುವ ಸಾಧ್ಯತೆಯಿದ್ದು, ಜಾಗರೂಕರಾಗಿರಿ.

ಕುಂಭ ರಾಶಿ

ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಕೋರ್ಟು-ಕಚೇರಿ ವಿವಾದದಲ್ಲಿ ಸಿಲುಕಬೇಡಿ. ಕೋಪವನ್ನು ನಿಯಂತ್ರಿಸಿಕೊಳ್ಳುವುದು ಅತ್ಯವಶ್ಯ. ಅನಾವಶ್ಯಕವಾಗಿ ಹಣ ಖರ್ಚಾಗಲಿದೆ.

ಮೀನ ರಾಶಿ

ಕೌಟುಂಬಿಕ ಮತ್ತು ಸಾಮಾಜಿಕ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ತೋರಲಿದ್ದೀರಿ. ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ಅವರಿಗಾಗಿ ಹಣ ಖರ್ಚು ಮಾಡಬೇಕಾಗುತ್ತದೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...