alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಇವತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದೀರಿ. ಮಿತ್ರರ ಜೊತೆ ಕಾಲ ಕಳೆಯಲಿದ್ದೀರಿ. ಸರ್ಕಾರಿ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಅವಿವಾಹಿತರಿಗೆ ವಿವಾಹ ಯೋಗವಿದೆ.

ವೃಷಭ ರಾಶಿ

ಇವತ್ತು ನೀವು ಹೊಸ ಕಾರ್ಯ ಆರಂಭಿಸಬಹುದು. ಉದ್ಯೋಗಿಗಳಿಗೆ ಇವತ್ತಿನ ದಿನ ಶುಭವಾಗಲಿದೆ. ಗೃಹಸ್ಥ ಜೀವನದಲ್ಲಿ ಸುಖ-ಶಾಂತಿ ನೆಲೆಸಲಿದೆ. ಅಪೂರ್ಣ ಕಾರ್ಯ ಪೂರ್ಣಗೊಳ್ಳುತ್ತದೆ. ದಾಂಪತ್ಯ ಜೀವನದಲ್ಲಿ ಮಧುರ ಅನುಭವವಾಗಲಿದೆ.

ಮಿಥುನ ರಾಶಿ

ಇವತ್ತು ಸ್ವಲ್ಪ ಕಷ್ಟಕರ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ದೇಹದಲ್ಲಿ ಸ್ಪೂರ್ತಿಯ ಕೊರತೆ ಕಾಣಿಸಬಹುದು. ಕಚೇರಿಯಲ್ಲಿ ಸಹೋದ್ಯೋಗಿಗಳ ಮಂದ ಪ್ರವೃತ್ತಿ ನಿಮ್ಮ ಮೇಲೆ ಪರಿಣಾಮ ಬೀರಬಹುದು. ಹಿರಿಯ ಅಧಿಕಾರಿಗಳೊಂದಿಗೆ ವಾದ-ವಿವಾದ ಏರ್ಪಡಬಹುದು.

ಕರ್ಕ ರಾಶಿ

ಕೋಪ ಮತ್ತು ನಕಾರಾತ್ಮಕ ಚಿಂತನೆಗಳು ನಿಮ್ಮ ಮಾನಸಿಕ ಸ್ವಾಸ್ಥ್ಯವನ್ನು ಹಾಳುಗೆಡವಬಹುದು. ಊಟ-ತಿಂಡಿ ಬಗ್ಗೆ ಗಮನ ವಹಿಸಿ, ಇಲ್ಲದಿದ್ದಲ್ಲಿ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಖರ್ಚು ಹೆಚ್ಚಾಗಲಿದೆ. ಹೊಸ ಕಾರ್ಯವನ್ನು ಆರಂಭಿಸಬೇಡಿ.

ಸಿಂಹ ರಾಶಿ

ಸಂಗಾತಿಯ ಜೊತೆಗೆ ಭಿನ್ನಾಬಿಪ್ರಾಯ ಏರ್ಪಡುವ ಸಾಧ್ಯತೆ ಇದೆ. ಪಾಲುದಾರರ ಜೊತೆಗೆ ಧೈರ್ಯದಿಂದ ವ್ಯವಹರಿಸಿ. ವಿರುದ್ಧ ಲಿಂಗಿಗಳ ಬಗ್ಗೆ ಹೆಚ್ಚು ಆಕರ್ಷಿತರಾಗಲಿದ್ದೀರಿ. ಆದ್ರೆ ಭೇಟಿ ಆನಂದದಾಯಕವಾಗಿರುವುದಿಲ್ಲ.

ಕನ್ಯಾ ರಾಶಿ

ಇವತ್ತು ಎಲ್ಲಾ ವಿಚಾರಗಳಲ್ಲೂ ಅನುಕೂಲಕರ ವಾತಾವರಣವಿರಲಿದೆ. ಮನೆಯಲ್ಲಿ ಸುಖ-ಶಾಂತಿ ನೆಲೆಸಲಿದೆ. ಅನಾರೋಗ್ಯ ಪೀಡಿತರ ಆರೋಗ್ಯ ಸುಧಾರಿಸಲಿದೆ. ಆರ್ಥಿಕ ಲಾಭ ದೊರೆಯುವ ಸಾಧ್ಯತೆ ಇದೆ. ಕಚೇರಿಯಲ್ಲಿ ಎಲ್ಲರ ಸಹಕಾರ ಸಿಗುತ್ತದೆ.

ತುಲಾ ರಾಶಿ

ನಿಮ್ಮ ಕಲ್ಪನೆ ಮತ್ತು ಸೃಜನಶೀಲತೆಯ ಪ್ರಗತಿಯನ್ನು ಗಮನಿಸಿ ಸಂತುಷ್ಟರಾಗುತ್ತೀರಿ. ವ್ಯರ್ಥ ವಾದ–ವಿವಾದಗಳಲ್ಲಿ ತೊಡಗಿಕೊಳ್ಳಬೇಡಿ. ಪ್ರಿಯ ವ್ಯಕ್ತಿಯನ್ನು ಭೇಟಿ ಮಾಡುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ

ಮಾನಸಿಕ ಮತ್ತು ಶಾರೀರಿಕ ಅಸ್ವಸ್ಥತೆಯ ಅನುಭವವಾಗಲಿದೆ. ತಾಯಿಯ ಆರೋಗ್ಯದಲ್ಲಿ ಏರುಪೇರಾಗಬಹುದು. ಆರ್ಥಿಕ ನಷ್ಟ ಮತ್ತು ಸಾರ್ವಜನಿಕ ಜೀವನದಲ್ಲಿ ಮಾನಹಾನಿಯಾಗುವ ಸಾಧ್ಯತೆ ಇದೆ. ಜಮೀನು, ವಾಹನ ಇತ್ಯಾದಿ ದಸ್ತಾವೇಜುಗಳಿಂದ ಇಂದು ದೂರವಿರಿ.

ಧನು ರಾಶಿ

ಇವತ್ತು ನಿಮ್ಮ ಮನಸ್ಸು ಶಾಂತ ಮತ್ತು ಪ್ರಸನ್ನವಾಗಿರಲಿದೆ. ಒಡಹುಟ್ಟಿದವರೊಂದಿಗೆ ಸಮಯ ಕಳೆಯಲಿದ್ದೀರಿ. ಇಂದು ಹೊಸ ಕೆಲಸ ಆರಂಭಿಸಬಹುದು. ಸಂಬಂಧಿಕರು ಅಥವಾ ಮಿತ್ರರು ಆಗಮಿಸುವ ಸಾಧ್ಯತೆ ಇದೆ. ಲಘು ಯಾತ್ರೆ ಕೈಗೊಳ್ಳಬಹುದು.

ಮಕರ ರಾಶಿ

ಇವತ್ತು ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಿ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಲಿ. ಗೃಹಿಣಿಯಲ್ಲಿ ಮಾನಸಿಕ ಅಸಂತೋಷ ಕಾಣಿಸಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಏಕಾಗ್ರತೆಯ ಕೊರತೆ ಕಾಣಿಸುತ್ತದೆ.

ಕುಂಭ ರಾಶಿ

ಇವತ್ತು ಮನಸ್ಸು ಮತ್ತು ಶರೀರ ಆರೋಗ್ಯಪೂರ್ಣವಾಗಿರಲಿದೆ, ಉತ್ಸಾಹದ ಅನುಭವವಾಗಲಿದೆ. ಆರ್ಥಿಕವಾಗಿಯೂ ಇಂದು ಲಾಭದಾಯಕ ದಿನ. ನಕಾರಾತ್ಮಕ ಆಲೋಚನೆಗಳಿಂದ ದೂರವಿರುವುದು ಒಳಿತು.

ಮೀನ ರಾಶಿ

ಇವತ್ತು ಏಕಾಗ್ರತೆಯ ಅನುಭವವಾಗಲಿದೆ. ಕುಟುಂಬದಿಂದ ದೂರವಾಗುವ ಸಾಧ್ಯತೆ ಇದೆ. ಕೋರ್ಟ್-ಕಚೇರಿ ವಿಷಯಗಳಲ್ಲಿ ಜಾಗರೂಕರಾಗಿರಿ. ಬೇಗನೆ ಲಾಭ ಪಡೆಯಬೇಕೆಂಬ ಅತಿಯಾಸೆ ಬೇಡ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...