alex Certify
ಕನ್ನಡ ದುನಿಯಾ       Mobile App
       

Kannada Duniya

ಕೃಷ್ಣ ಜನ್ಮಾಷ್ಠಮಿ ಪೂಜೆ ಹೀಗಿರಲಿ

ವರಮಹಾಲಕ್ಷ್ಮಿ, ರಕ್ಷಾ ಬಂಧನದ ನಂತ್ರ ಶ್ರೀಕೃಷ್ಣನ ಜನ್ಮಾಷ್ಠಮಿ ಸಂಭ್ರಮ ಎಲ್ಲೆಡೆ ಮನೆ ಮಾಡಲಿದೆ. ಈ ವರ್ಷ ಸೆಪ್ಟೆಂಬರ್ 2 ರಂದು ಕೃಷ್ಣ ಜನ್ಮಾಷ್ಠಮಿಯನ್ನು ಎಲ್ಲೆಡೆ ಆಚರಣೆ ಮಾಡಲಾಗ್ತಿದೆ. ಪಂಡಿತರ ಪ್ರಕಾರ ಇದು ಶ್ರೀಕೃಷ್ಣನ 5245 ನೇ ಜನ್ಮ ದಿನವಂತೆ.

ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಕೃಷ್ಣನ ಜನನವಾಗಿತ್ತು. ಈ ಬಾರಿ ಸೆಪ್ಟೆಂಬರ್ 2 ರ ರಾತ್ರಿ 8.47 ರಿಂದ ಅಷ್ಟಮಿ ಶುರುವಾಗಲಿದೆ. ಸೆಪ್ಟೆಂಬರ್ ಮೂರರ ಸಂಜೆ 7.20 ಕ್ಕೆ ಮುಕ್ತಾಯವಾಗಲಿದೆ.

ಕೃಷ್ಣಾಷ್ಠಮಿ ವೃತ ಮಾಡುವವರು ಈ ದಿನ ಒಂದೇ ಬಾರಿ ಭೋಜನ ಮಾಡಬೇಕು. ಈ ದಿನ ದೇವಸ್ಥಾನಗಳಲ್ಲಿ ಬೆಣ್ಣೆ ಕೃಷ್ಣನಿಗೆ ವಿಶೇಷ ಪೂಜೆ, ಅರ್ಚನೆ ನೆರವೇರುತ್ತದೆ. ಮಧ್ಯ ರಾತ್ರಿ ಶ್ರೀಕೃಷ್ಣನ ಜನನವಾಗಿರುವ ಕಾರಣ ರಾತ್ರಿ ಪೂಜೆ ಮಾಡಲಾಗುತ್ತದೆ. ಶ್ರೀಕೃಷ್ಣನಿಗೆ ಹೂಗಳಿಂದ ಅಲಂಕಾರ ಮಾಡಿ ಪೂಜೆ ಮಾಡಬೇಕು. ಅದ್ರಲ್ಲೂ ವೈಜಯಂತಿ ಮಾಲೆ ಕೃಷ್ಣನಿಗೆ ಪ್ರಿಯವಾದದ್ದು. ಪೂಜೆಗೆ ಕಪ್ಪು ಬಣ್ಣದ ವಸ್ತುವನ್ನು ಬಳಸಬೇಡಿ. ಹಳದಿ ಬಟ್ಟೆ, ಚಂದನದ ಮಾಲೆಯಿಂದ ಶ್ರೀಕೃಷ್ಣನನ್ನು ಅಲಂಕರಿಸಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...