alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಶುಭ ಮುಹೂರ್ತದಲ್ಲಿ ಮಾಡಿ ಶ್ರೀಕೃಷ್ಣನ ಪೂಜೆ

ಕೃಷ್ಣ ಪಕ್ಷದ ಅಷ್ಠಮಿಯಂದು ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಈ ಬಾರಿ ಸೆಪ್ಟೆಂಬರ್ 2 ರಂದು ಕೃಷ್ಣ ಜನ್ಮಾಷ್ಠಮಿ ಆಚರಿಸಲಾಗ್ತಿದೆ. ಭಕ್ತರು ಈಗಿನಿಂದಲೇ ಕೃಷ್ಣನ ಆರಾಧನೆಗೆ ತಯಾರಿ ನಡೆಸಿದ್ದಾರೆ.

ಸೆಪ್ಟೆಂಬರ್ 2 ರಂದು ರಾತ್ರಿ 23:58 ಯಿಂದ 00:44ರವರೆಗಿರಲಿದೆ. ಅಂದ್ರೆ ಪೂಜೆಗೆ 45 ನಿಮಿಷ ಶುಭ ಮುಹೂರ್ತ ಸಿಗಲಿದೆ. ಈ ಶುಭ ಮುಹೂರ್ತದಲ್ಲಿ ಶ್ರೀಕೃಷ್ಣನ ಆರಾಧನೆ ಮಾಡಬೇಕು. ಸೆಪ್ಟೆಂಬರ್ 3 ರಂದು ಅಷ್ಠಮಿ ಮುಗಿಯಲಿದೆ. ಶ್ರೀಕೃಷ್ಣ ಭಗವಂತ ವಿಷ್ಣುವಿನ ಅವತಾರ. ಭಜನೆ, ನೃತ್ಯ, ಸಂಗೀತದ ಮೂಲಕ ಶ್ರದ್ಧೆ ಭಕ್ತಿಯಿಂದ ಪೂಜೆ ಮಾಡಿದ್ರೆ ಬಲು ಬೇಗ ಪ್ರಸನ್ನನಾಗ್ತಾನೆ ರಾಧಾವಲ್ಲಭ.

ಕೃಷ್ಣನ ಜನ್ಮ ದಿನವನ್ನು ವಿಧಿ-ವಿಧಾನದ ಮೂಲಕ ಆಚರಣೆ ಮಾಡಿದ್ರೆ ಇಷ್ಟಾರ್ಥಗಳು ಸಿದ್ಧಿಸಲಿವೆ. ಶ್ರೀಕೃಷ್ಣನ ಜನ್ಮಾಷ್ಠಮಿ ಆಚರಿಸುವ ಮೊದಲು ದೇವಸ್ಥಾನದಂತೆ ಮನೆಯನ್ನು ಗಂಗಾಜಲ ಮತ್ತು ಹಸುವಿನ ಸಗಣಿಯಿಂದ ಸ್ವಚ್ಛಗೊಳಿಸಿ. ಸುಹಾಸನೆಯುಳ್ಳ ಊದಿನ ಕಡ್ಡಿಯನ್ನು ಮನೆಯಲ್ಲಿ ಬೆಳಗಬೇಕು. ದೇವಸ್ಥಾನಗಳಲ್ಲಿ ಬಾಲ ಗೋಪಾಲನನ್ನು ಜೋಕಾಲಿ ಮೇಲೆ ಮಲಗಿಸಿ ಅಭಿಷೇಕ ಮಾಡಲಾಗುತ್ತದೆ. ಇಡೀ ದಿನ ಪೂಜೆಗಳು ನೆರವೇರುತ್ತವೆ. ದೇವಸ್ಥಾನದಲ್ಲಿ ಭಜನೆ ಕೇಳಿ ಬರ್ತಿರುತ್ತದೆ. ನೃತ್ಯ, ಸಂಗೀತ ಎಲ್ಲೆಲ್ಲೂ ತುಂಬಿರುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...