alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಉಡುಗೊರೆ ನೀಡಿದವರು ನಿಮ್ಮ ಖುಷಿ ಬಯಸಲ್ಲ

ಉಡುಗೊರೆ ನೀಡುವುದು ಜೀವನದ ಒಂದು ಭಾಗ. ಉಡುಗೊರೆ ಪಡೆದವರು ತುಂಬಾ ಖುಷಿಯಾಗ್ತಾರೆ. ಆದ್ರೆ ಉಡುಗೊರೆ ನೀಡಿದವರು ನಿಮ್ಮ ಖುಷಿ ಬಯಸ್ತಾರಾ ಅಥವಾ ದುಃಖವನ್ನ ಎಂಬುದು ಉಡುಗೊರೆ ನೀಡಿದ ವಸ್ತುಗಳೇ ಹೇಳಿ ಬಿಡುತ್ತವೆ. ಕೆಲ ವಸ್ತುಗಳು ನಿಮಗೆ ಉಡುಗೊರೆ ರೂಪದಲ್ಲಿ ಸಿಕ್ಕಿದ್ರೆ ಉಡುಗೊರೆ ನೀಡಿದವರು ನಿಮ್ಮ ಖುಷಿ ಬಯಸಲ್ಲ ಎಂದು ಅರ್ಥೈಸಿಕೊಳ್ಳಿ.

ಹಿಂಸೆ ನೀಡುವ ಸಿಂಹ, ಹುಲಿಯಂತಹ ಕ್ರೂರ ಪ್ರಾಣಿಗಳ ಫೋಟೋ ಅಥವಾ ಮೂರ್ತಿ ಉಡುಗೊರೆ ರೂಪದಲ್ಲಿ ಸಿಕ್ಕಿದ್ರೆ ಉಡುಗೊರೆ ನೀಡಿದವರು ನಿಮ್ಮ ಯಶಸ್ಸು ಬಯಸುತ್ತಿಲ್ಲ ಎಂದೇ ಅರ್ಥ.

ಮುಳುಗುತ್ತಿರುವ ಹಡಗನ್ನು ಉಡುಗೊರೆ ಪಡೆದು ಅದನ್ನು ಮನೆಯಲ್ಲಿಟ್ಟರೆ ಆರ್ಥಿಕ ನಷ್ಟ ನಿಶ್ಚಿತ.

ಚಾಕು ಅಥವಾ ಮೊನಚಾದ ವಸ್ತುವನ್ನು ಉಡುಗೊರೆ ರೂಪದಲ್ಲಿ ಪಡೆಯಬೇಡಿ. ಅದನ್ನು ಮನೆಯಲ್ಲಿ ಇಡಬೇಡಿ. ಉಡುಗೊರೆ ಸಿಕ್ಕ ಚಾಕು ಮನೆಯಲ್ಲಿದ್ದರೆ ಕುಟುಂಬದಲ್ಲಿ ಹಿಂಸೆ ಜಾಸ್ತಿಯಾಗುತ್ತದೆ.

ಕಪ್ಪು ಬಣ್ಣದ ಬಟ್ಟೆಯನ್ನು ಉಡುಗೊರೆಯಾಗಿ ಪಡೆದ್ರೆ ಅದನ್ನು ಅಪಶಕುನವೆನ್ನಲಾಗುತ್ತದೆ. ಇದು ದುಃಖ, ಕಷ್ಟದ ಸಂಕೇತ. ಇದೇ ಕಾರಣಕ್ಕೆ ಮದುವೆಯಾಗಿ ಒಂದು ವರ್ಷ ಕಪ್ಪು ಬಟ್ಟೆಯನ್ನು ಧರಿಸುವುದಿಲ್ಲ.

ಚಪ್ಪಲಿ, ದೂರವಾಗುವ ಸಂಕೇತ. ಹಾಗಾಗಿ ಪ್ರೇಮಿಗಳು ಎಂದೂ ಚಪ್ಪಲಿಯನ್ನು ಉಡುಗೊರೆ ರೂಪದಲ್ಲಿ ಸ್ವೀಕರಿಸಬಾರದು.

ಅನೇಕರು ಗಡಿಯಾರವನ್ನು ಉಡುಗೊರೆಯಾಗಿ ನೀಡುತ್ತಾರೆ. ಗಡಿಯಾರವನ್ನು ಉಡುಗೊರೆಯಾಗಿ ಪಡೆಯಬಾರದು. ಇದು ಯಶಸ್ಸಿಗೆ ಅಡ್ಡಿಯುಂಟು ಮಾಡುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...