alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಯ ವಾಸ್ತು ದೋಷವನ್ನು ಕಡಿಮೆ ಮಾಡುತ್ತೆ ಈ ಚಿಹ್ನೆ

ವಾಸ್ತುದೋಷದಿಂದ ಅನೇಕ ಸಮಸ್ಯೆ ಕಾಡುತ್ತದೆ. ವಾಸ್ತು ಶಾಸ್ತ್ರದಲ್ಲಿಯೇ ವಾಸ್ತು ದೋಷ ನಿವಾರಣೆಗೆ ಪರಿಹಾರ ಹೇಳಲಾಗಿದೆ. ಸಣ್ಣ ಸಣ್ಣ ಸಂಗತಿಗಳಿಂದಲೂ ವಾಸ್ತು ದೋಷವನ್ನು ಕಡಿಮೆ ಮಾಡಬಹುದು. ಕೆಲವೊಂದು ಚಿತ್ರ ಹಾಗೂ ಚಿಹ್ನೆ ಕೂಡ ವಾಸ್ತು ದೋಷ ಕಡಿಮೆ ಮಾಡುವ ಶಕ್ತಿ ಹೊಂದಿದೆ.

ಕಳಶ : ಪವಿತ್ರ ಧಾತುವಿನಿಂದ ಈ ಕಲಶವನ್ನು ಮಾಡಲಾಗಿರುತ್ತದೆ. ಅದ್ರಲ್ಲಿ ಪವಿತ್ರ ಜಲವನ್ನು ಇಡಲಾಗುತ್ತದೆ. ಇದ್ರ ಮೇಲೆ ಅಶೋಕ ಅಥವಾ ಮಾವಿನ ಎಲೆ ಇಲ್ಲವೇ ಕೆಂಪು ದಾರವನ್ನು ಕಟ್ಟಲಾಗುತ್ತದೆ. ಇದನ್ನು ಆರೋಗ್ಯ, ಐಶ್ವರ್ಯ ಹಾಗೂ ಕಲ್ಯಾಣದ ಸಂಕೇತವೆಂದು ಪರಿಗಣಿಸಲಾಗಿದೆ. ಇದನ್ನು ದೇವರ ಮನೆಯಲ್ಲಿ ಸ್ಥಾಪನೆ ಮಾಡಬೇಕು.

ಮನೆಯ ಮುಖ್ಯ ದ್ವಾರದ ಮೇಲೆ ಅಥವಾ ಪಕ್ಕದ ಗೋಡೆಗೆ ಮಹಿಳೆಯರ ಹಸ್ತದ ಅಚ್ಚನ್ನು ಒತ್ತಬೇಕು. ಅರಿಶಿನದಲ್ಲಿ ಕೈ ಅದ್ದಿ ಹಸ್ತ ಅಚ್ಚನ್ನು ಹಾಕಬೇಕು. ಇದು ವಾಸ್ತು ಪ್ರಕಾರ ಶುಭವೆಂದು ಪರಿಗಣಿಸಲಾಗಿದೆ. ಇದು ಮನೆಯ ಸಮೃದ್ಧಿಗೆ ಕಾರಣವಾಗುತ್ತದೆ.

ವಾಸ್ತು ಶಾಸ್ತ್ರದಲ್ಲಿ ಮೀನಿಗೆ ಮಹತ್ವದ ಸ್ಥಾನವಿದೆ. ಮನೆಯ ಉತ್ತರ ದಿಕ್ಕಿಗೆ ಮೀನಿನ ಚಿತ್ರವನ್ನು ಹಾಕಬೇಕು. ಜೋಡಿ ಮೀನು ಒಟ್ಟಿಗೆ ಇದ್ದಲ್ಲಿ ಅದು ಮತ್ತಷ್ಟು ಶುಭ ಫಲ ನೀಡುತ್ತದೆ.

‘ಓಂ’ ಚಿಹ್ನೆ ಬಹಳ ಶುಭಕರವಾದದ್ದು. ಇದು ರೋಗ ಹರಡುವ ಶಕ್ತಿಯನ್ನು ನಾಶಪಡಿಸುತ್ತದೆ. ಮನೆಯ ಮುಖ್ಯ ದ್ವಾರ ಅಥವಾ ಮನೆಯ ಯಾವುದೇ ಭಾಗದಲ್ಲಿ ಓಂ ಚಿಹ್ನೆಯನ್ನು ಇಡಿ.

ಮನೆಯಲ್ಲಿ ಧನದ ಅಭಾವವಿದ್ದರೆ ಅಥವಾ ಮನೆಯ ಸದಸ್ಯರು ಆಗಾಗ ಹಾಸಿಗೆ ಹಿಡಿಯುತ್ತಿದ್ದರೆ ‘ಸ್ವಸ್ಥಿಕ್’ ಚಿಹ್ನೆಯನ್ನು ಮನೆಯಲ್ಲಿಡಿ. ಇದು ಆರ್ಥಿಕ ಹಾಗೂ ಆರೋಗ್ಯ ಸಮಸ್ಯೆಯನ್ನು ದೂರ ಮಾಡುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...