alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಇವತ್ತು ನಿಮಗೆ ಅನುಕೂಲಕರ ದಿನ. ಕೆಲಸದ ಕಡೆಗೆ ಹೆಚ್ಚು ಗಮನ ಕೇಂದ್ರೀಕರಿಸುತ್ತೀರಿ. ಲಕ್ಷ್ಮಿಯ ಕೃಪೆ ನಿಮ್ಮ ಮೇಲಿದೆ. ಕುಟುಂಬದವರೊಂದಿಗೆ ಆನಂದವಾಗಿ ಕಾಲ ಕಳೆಯಲಿದ್ದೀರಿ.

ವೃಷಭ ರಾಶಿ

ಇವತ್ತು ಸ್ವಲ್ಪ ಸಾವಧಾನದಿಂದ ಇರುವುದು ಒಳಿತು. ಇವತ್ತು ನಡೆಯುವ ಘಟನೆಗಳು ನಿಮ್ಮ ಚಿಂತೆಯನ್ನು ಹೆಚ್ಚಿಸುತ್ತವೆ. ಆರೋಗ್ಯ ಹದಗೆಡಬಹುದು. ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಕುಟುಂಬದವರ ವಿರೋಧ ಮತ್ತು ಕೋಪವನ್ನು ಎದುರಿಸಬೇಕಾಗುತ್ತದೆ.

ಮಿಥುನ ರಾಶಿ

ಇಂದು ಅನೇಕ ರೀತಿಯ ಲಾಭ ದೊರೆಯುವುದರಿಂದ ಹರ್ಷೋಲ್ಲಾಸ ಮನೆ ಮಾಡಲಿದೆ. ಪತ್ನಿ ಮತ್ತು ಪುತ್ರನಿಂದ ಲಾಭದಾಯಕ ಸಮಾಚಾರ ದೊರೆಯಬಹುದು. ಸ್ನೇಹಿತರ ಜೊತೆಗಿನ ಭೇಟಿ ಆನಂದದಾಯಕವಾಗಿರಲಿದೆ.

ಕರ್ಕ ರಾಶಿ

ಉದ್ಯಮಿಗಳಿಗೆ ಇಂದು ಶುಭ ದಿನ. ಹಿರಿಯ ಅಧಿಕಾರಿಗಳ ಕೃಪೆ ನಿಮ್ಮ ಮೇಲಿದೆ. ನಿಮ್ಮ ವರ್ಚಸ್ಸು ಕೂಡ ಹೆಚ್ಚಲಿದೆ. ಪದೋನ್ನತಿಯ ಸಾಧ್ಯತೆಗಳಿವೆ. ಮನೆಯಲ್ಲಿ ಅಗತ್ಯ ವಿಷಯದ ಬಗ್ಗೆ ಚರ್ಚೆ ನಡೆಯಬಹುದು.

ಸಿಂಹ ರಾಶಿ

ಇವತ್ತು ಧಾರ್ಮಿಕ ಕಾರ್ಯಗಳಲ್ಲಿ ಸಮಯ ಕಳೆಯುತ್ತೀರಿ. ಸ್ನೇಹಿತರೊಂದಿಗೆ ಧಾರ್ಮಿಕ ಕ್ಷೇತ್ರಕ್ಕೆ ತೆರಳುವ ಅವಕಾಶ ಸಿಗಬಹುದು. ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತೀರಿ. ವ್ಯವಹಾರ ಉತ್ತಮವಾಗಿರಲಿದೆ.

ಕನ್ಯಾ ರಾಶಿ

ಮಾತಿನ ಮೇಲೆ ಹಿಡಿತವಿರಲಿ. ಹೊಸ ಕಾರ್ಯವನ್ನು ಆರಂಭಿಸಲು ಸಮಯ ಸೂಕ್ತವಲ್ಲ. ಯಾರ ಮೇಲೂ ಕೋಪ ಪ್ರದರ್ಶಿಸಬೇಡಿ. ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ವಿವಾದ ಉಂಟಾಗಬಹುದು.

ತುಲಾ ರಾಶಿ

ಇವತ್ತು ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ಮಿತ್ರರ ಜೊತೆಗೆ ಭೋಜನ ಮಾಡುವ ಅವಕಾಶ ಸಿಗಲಿದೆ. ಲಾಭದಾಯಕ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದೀರಿ. ಪ್ರಯಾಣದ ಯೋಗವಿದೆ.

ವೃಶ್ಚಿಕ ರಾಶಿ

ಮನೆಯಲ್ಲಿ ಸುಖ-ಶಾಂತಿ ಮತ್ತು ಆನಂದದ ವಾತಾವರಣವಿರುತ್ತದೆ. ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರಲಿದೆ. ಅಗತ್ಯ ವಸ್ತುಗಳಿಗಾಗಿ ಹಣ ಖರ್ಚಾಗಲಿದೆ.

ಧನು ರಾಶಿ

ಇವತ್ತು ಯಾವುದೇ ರೀತಿಯ ಪ್ರವಾಸ ಅಥವಾ ಯಾತ್ರೆ ಬೇಡ. ಮಕ್ಕಳ ವಿದ್ಯಾಭ್ಯಾಸ ಮತ್ತು ಆರೋಗ್ಯದ ಕುರಿತು ಆತಂಕ ಕಾಡಲಿದೆ. ಕೆಲಸದಲ್ಲಿ ಯಶಸ್ಸು ಸಿಗದೇ ಇರುವುದರಿಂದ ನಿರಾಶರಾಗುತ್ತೀರಿ.

ಮಕರ ರಾಶಿ

ನಿಮ್ಮ ಮನಃಸ್ಥಿತಿ ಮತ್ತು ಆರೋಗ್ಯ ಉತ್ತಮವಾಗಿಲ್ಲ. ಕೌಟುಂಬಿಕ ಕಲಹದಿಂದ ಮನಸ್ಸು ಖಿನ್ನವಾಗಲಿದೆ. ಶರೀರದಲ್ಲಿ ಸ್ಪೂರ್ತಿಯ ಅಭಾವವಿರುತ್ತದೆ. ಆತ್ಮೀಯರೊಂದಿಗೆ ಜಗಳವಾಗಬಹುದು.

ಕುಂಭ ರಾಶಿ

ಮನಸ್ಸು ಹಗುರವಾಗಲಿದೆ. ಮನಸ್ಸಿನಲ್ಲಿ ಮೂಡಿದ್ದ ಚಿಂತೆಗಳೆಲ್ಲ ಮರೆಯಾಗಲಿವೆ. ಭಾಗ್ಯವೃದ್ಧಿಯ ಯೋಗವಿದೆ. ವೈವಾಹಿಕ ಬದುಕಿನಲ್ಲಿ ಆನಂದ ದೊರೆಯುತ್ತದೆ.

ಮೀನ ರಾಶಿ

ಖರ್ಚಿನ ಮೇಲೆ ಹಿಡಿತ ಇಟ್ಟುಕೊಳ್ಳಿ. ಕೋಪ ಮತ್ತು ಮಾತನ್ನು ನಿಯಂತ್ರಿಸುವುದು ಅತ್ಯಗತ್ಯ. ಇಲ್ಲದೇ ಹೋದಲ್ಲಿ ನೋವುಂಟು ಮಾಡುವಂತಹ ಘಟನೆಗಳು ನಡೆಯುತ್ತವೆ. ಹಣಕಾಸು ವ್ಯವಹಾರದಲ್ಲಿ ಜಾಗರೂಕರಾಗಿರಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...