alex Certify
ಕನ್ನಡ ದುನಿಯಾ       Mobile App
       

Kannada Duniya

ದುಷ್ಟಶಕ್ತಿಗಳನ್ನು ದೂರ ಮಾಡುತ್ತೆ ಹೋಳಿ ಹುಣ್ಣಿಮೆ ರಾತ್ರಿ

peepal-tree

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೋಳಿ ಹಬ್ಬದ ದಿನ ನೀವು ಕೈಗೊಂಡ ಕಾರ್ಯಗಳೆಲ್ಲ ಯಶಸ್ವಿಯಾಗುತ್ತವೆ. ಯಾಕಂದ್ರೆ ಅಂದು ಹುಣ್ಣಿಮೆ. ಫಾಲ್ಗುಣ ಮಾಸದ ಶ್ರೇಷ್ಠ ದಿನವೂ ಹೌದು. ಈ ದಿನ ಭಕ್ತಿಯಿಂದ ಬೇಡಿಕೊಂಡ್ರೆ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ. ದುಷ್ಟಶಕ್ತಿಗಳನ್ನು ಕೂಡ ಹೊಡೆದೋಡಿಸಬಹುದು.

ಅಶ್ವತ್ಥ ಮರದಡಿ ತುಪ್ಪದ ದೀಪ ಹಚ್ಚಿ : ಮಧ್ಯರಾತ್ರಿ ಅಶ್ವತ್ಧ ಮರದ ಅಡಿಯಲ್ಲಿ ತುಪ್ಪದ ದೀಪವೊಂದನ್ನು ಹಚ್ಚಿ. 7 ಬಾರಿ ಅಶ್ವತ್ಥ ಮರವನ್ನು ಪ್ರದಕ್ಷಿಣೆ ಹಾಕಿ. ಹೀಗೆ ಮಾಡುವುದರಿಂದ, ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದಂತೆ ತಡೆಯುತ್ತಿರುವ ದುಷ್ಟಶಕ್ತಿಯು ದೂರವಾಗುತ್ತದೆ.

ಎರಡು ಲವಂಗದ ಎಸಳುಗಳನ್ನು ತೆಗೆದುಕೊಂಡು ತುಪ್ಪದಲ್ಲಿ ಅದ್ದಿ. ನಂತರ ಅದನ್ನು ಪಾನ್ ಎಲೆಯ ಮೇಲೆ ಇಡಿ. ಜೊತೆಗೊಂದು ಬತ್ತಾಸನ್ನು ಕೂಡ ಇರಿಸಬೇಕು. ಇವೆಲ್ಲವನ್ನು ಕಾಮದಹನದ ಬೆಂಕಿಗೆ ಹಾಕಬೇಕು. ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಶಾಂತಿ ಮತ್ತು ಸಂತಸ ನೆಲೆಸುತ್ತದೆ.

ದುಷ್ಟಶಕ್ತಿಯ ಕೆಟ್ಟ ಶಕ್ತಿಯಿಂದ ದೂರವಾಗಲು ಕೂಡ ಸುಲಭ ಮಾರ್ಗವಿದೆ. ಕಪ್ಪು ಬಟ್ಟೆಯಲ್ಲಿ ಸ್ವಲ್ಪ ಕರಿ ಎಳ್ಳನ್ನು ಹಾಕಿ. 7 ಲವಂಗ, 3 ಸುಪಾರಿ, 50 ಗ್ರಾಂ ಸಾಸಿವೆ ಹಾಗೂ ನಿಮ್ಮ ಮನೆಯ ಗಾರ್ಡನ್ ನಲ್ಲಿರುವ ಸ್ವಲ್ಪ ಮಣ್ಣನ್ನು ಅದರ ಜೊತೆಗೆ ಸೇರಿಸಿ. ಬಟ್ಟೆಯನ್ನು ಗಂಟು ಕಟ್ಟಿ ನಿಮ್ಮ ತಲೆಯ ಸುತ್ತ 7 ಬಾರಿ ಸುತ್ತಿಸಿದ ನಂತರ ಅದನ್ನು ಕಾಮದಹನ ಬೆಂಕಿಗೆ ಹಾಕಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...