alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಬಣ್ಣದಲ್ಲಿ ಹೋಳಿ ಆಡಿದ್ರೆ ಸಿಗುತ್ತೆ ಯಶಸ್ಸು….

holi_1489240478

ಎಲ್ಲಾ ಕಡೆ ಈಗ ಹೋಳಿ ಹಬ್ಬದ ಸಂಭ್ರಮ. ಹೋಳಿ ಬಣ್ಣಗಳ ಜೊತೆಗೆ ಬೆಸೆದುಕೊಂಡಿದೆ, ಆದ್ರೆ ಇದು ಬಾಂಧವ್ಯವನ್ನು ಬೆಸೆಯುವ ಹಬ್ಬ. ಪರಸ್ಪರ ಬಣ್ಣಗಳನ್ನು ಎರಚಾಡುವ ಮೂಲಕ ದ್ವೇಷ ಅಸಮಾಧಾನವನ್ನೆಲ್ಲ ಮರೆತು ಒಂದಾಗುವ ಸುಸಮಯ ಇದು.

ಹೋಳಿ ಆಟಕ್ಕೂ ಒಂದು ವಾಸ್ತು ನಿಯಮವಿದೆ. ಒಂದು ನಿರ್ದಿಷ್ಟ ದಿನಾಂಕದಂದು, ನಿರ್ದಿಷ್ಟ ಬಣ್ಣದಲ್ಲಿ ಹೋಳಿ ಆಡಿದ್ರೆ ನಿಮಗೆ ಜೀವನದಲ್ಲಿ ಯಶಸ್ಸು ಸಿಗುತ್ತದೆ. ಈ ವರ್ಷ ಮಾರ್ಚ್ 13ರಂದು ಹೋಳಿ ಹಬ್ಬ ಬಂದಿದೆ. ಹಾಗಾಗಿ ಆ ದಿನ ಯಾವ ಬಣ್ಣದಲ್ಲಿ ಹೋಳಿ ಆಚರಣೆ ಸೂಕ್ತ ಅನ್ನೋದನ್ನು ನೋಡೋಣ.

ವೇದ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವರ್ಷ ಹೋಳಿ ಹಬ್ಬದ ದಿನಾಂಕ ಅತ್ಯಂತ ಗಮನಾರ್ಹವಾಗಿದೆ. ಹೋಳಿ 13ಕ್ಕೆ ಬಂದಿರೋದ್ರಿಂದ 1+3 = 4. ನಾಲ್ಕು ರಾಹುವಿನ ಸಂಖ್ಯೆ. ಹಾಗಾಗಿ ಮಾರ್ಚ್ 13 ರಾಹುವಿನ ದಿನ. ರಾಹುವಿಗೆ ನೀಲಿ ಬಣ್ಣ ಶ್ರೇಷ್ಠ, ಹಾಗಾಗಿ ಈ ವರ್ಷ ನೀಲಿ ಬಣ್ಣದಿಂದ ಹೋಳಿ ಆಡಿದ್ರೆ ನಿಮಗೆ ಯಶಸ್ಸು ಸಿಗುತ್ತದೆ.

ನೀವು ಬಿಡಿಸುವ ರಂಗೋಲಿಯಲ್ಲೂ ನೀಲಿ ಬಣ್ಣ ಬಳಸಬಹುದು. ನೀಲಿ ಬಣ್ಣ ರಾಹುವಿನ ಅಶುಭತೆಯನ್ನು ದೂರ ಮಾಡುತ್ತದೆ. ಹಾಗಾಗಿ ನೀಲಿ ಬಣ್ಣದಲ್ಲಿ ಹೋಳಿಯಾಡಿದ್ರೆ ಯಶಸ್ಸು ನಿಮ್ಮನ್ನು ಅರಸಿ ಬರುತ್ತದೆ. ಕಪ್ಪು, ರಾಹುವಿಗೆ ಇಷ್ಟವಾಗದ ಬಣ್ಣ. ಹಾಗಾಗಿ ಯಾವುದೇ ಕಾರಣಕ್ಕೂ ಕಪ್ಪು ಬಣ್ಣದಲ್ಲಿ ಹೋಳಿ ಆಡಬೇಡಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...