alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಥವರ ಮನೆಯಲ್ಲಿ ಅಪ್ಪಿತಪ್ಪಿಯೂ ಭೋಜನ ಮಾಡಬೇಡಿ

ಪ್ರತಿಯೊಂದು ಅನ್ನದ ಅಗುಳಿನ ಮೇಲೆ ತಿನ್ನುವವರ ಹೆಸರು ಬರೆದಿರುತ್ತದೆಯಂತೆ. ಅನ್ನವನ್ನು ದೇವರೆಂದು ಪೂಜಿಸಲಾಗುತ್ತದೆ. ಅನ್ನದಾನ ಮಹಾದಾನ ಎಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ. ಆದ್ರೆ ಗರುಡ ಪುರಾಣ ಕೆಲವೊಬ್ಬರ ಮನೆಯಲ್ಲಿ  ಅನ್ನಾಹಾರ ಸೇವನೆ ಹಾನಿಕಾರಕವೆಂದು ಹೇಳಿದೆ.

ಕಳ್ಳರು ಅಥವಾ ಅಪರಾಧಿಗಳ ಮನೆಯಲ್ಲಿ ಎಂದೂ ಆಹಾರ ಸೇವನೆ ಮಾಡಬಾರದಂತೆ. ಅಂಥವರ ಮನೆಯಲ್ಲಿ ಆಹಾರ ಸೇವನೆ ಮಾಡುವುದ್ರಿಂದ ಅವರ ಪಾಪ ನಮಗೆ ಸುತ್ತಿಕೊಳ್ಳುತ್ತದೆಯಂತೆ.

ಚರಿತ್ರಹೀನ ವ್ಯಕ್ತಿಗಳ ಮನೆಯಲ್ಲೂ ಭೋಜನ ಮಾಡಬಾರದೆಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.

ಬೇರೆಯವರ ದೌರ್ಬಲ್ಯವನ್ನು ದುರುಪಯೋಗಪಡಿಸಿಕೊಂಡು ತನ್ನ ಲಾಭಕ್ಕೆ ಬಳಸಿಕೊಳ್ಳುವ ವ್ಯಕ್ತಿಯ ಮನೆಯಲ್ಲಿಯೂ ಊಟ ಮಾಡಬಾರದು.

ಕೋಪ ವ್ಯಕ್ತಿಯ ದೊಡ್ಡ ಶತ್ರು. ಒಳ್ಳೆಯ ಹಾಗೂ ಕೆಟ್ಟದರ ನಡುವಿನ ವ್ಯತ್ಯಾಸವನ್ನು ಕೋಪಗೊಂಡ ವ್ಯಕ್ತಿ ಮರೆಯುತ್ತಾನೆ. ಇದ್ರಿಂದ ಸಾಕಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ಅವರ ಮನೆಯಲ್ಲಿ ಊಟ ಮಾಡುವುದ್ರಿಂದ ನಿಮ್ಮ ಸ್ವಭಾವ ಕೂಡ ಅದೇ ರೀತಿಯಾಗುತ್ತದೆ.

ಮಾದಕ ವಸ್ತುಗಳನ್ನು ಮಾರಾಟ ಮಾಡುವ ವ್ಯಕ್ತಿಗಳ ಮನೆಯಲ್ಲಿ ಕೂಡ ಊಟ ಮಾಡಬಾರದು. ಅಂತವರ ಮನೆಯಲ್ಲಿ ಆಹಾರ ಸೇವನೆ ಮಾಡಿದ್ರೆ ಅವರ ಪಾಪ ನಮ್ಮ ಬೆನ್ನು ಹತ್ತುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...