alex Certify
ಕನ್ನಡ ದುನಿಯಾ       Mobile App
       

Kannada Duniya

ಅಧಿಕ ಮಾಸದಲ್ಲಿ ಧನ ಪ್ರಾಪ್ತಿಗೆ ಇಲ್ಲಿದೆ ಉಪಾಯ

ಅಧಿಕಮಾಸವನ್ನು ಪುರುಷೋತ್ತಮ ಮಾಸವೆಂದು ಕರೆಯಲಾಗುತ್ತದೆ.ಮೂರು ವರ್ಷಕ್ಕೊಮ್ಮೆ ಅಧಿಕ ಮಾಸ ಬರುತ್ತದೆ. ಶ್ರೀಮದ್ಭವತ್ ಪುರಾಣದಲ್ಲಿ ಈ ಮಾಸಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ಅಧಿಕಮಾಸದಲ್ಲಿ ಧರ್ಮ-ಕರ್ಮ ಮಾಡಲಾಗುತ್ತದೆ. ಅಧಿಕಮಾಸದಲ್ಲಿ ಯಾರ ಪೂಜೆ  ಮಾಡಿದ್ರೆ ಏನು ಲಾಭ ಎಂಬುದನ್ನು ಪಂಡಿತರು ವಿವರಿಸುತ್ತಾರೆ.

ಪ್ರತಿ ದಿನ ವಿಷ್ಣು ಹಾಗೂ ಲಕ್ಷ್ಮಿ ಪೂಜೆ ಮಾಡುವುದ್ರಿಂದ ಧನ ಲಾಭ ಪ್ರಾಪ್ತಿಯಾಗುತ್ತದೆ.ಲಕ್ಷ್ಮಿ ಪೂಜೆಗೆ ದಕ್ಷಿಣ ಮುಖದ ಶಂಖ, ಅರಿಶಿನ ಕೊಂಬು,ಗೋಮತಿ ಚಕ್ರ ಹಾಗೂ ಶ್ರೀಯಂತ್ರವನ್ನು ಇಡಬೇಕು.

ಬುಧವಾರ ವಿಷ್ಣು-ಮಹಾಲಕ್ಷ್ಮಿ ಪೂಜೆ ನಂತ್ರ ಮುಖ್ಯ ದ್ವಾರದ ಮುಂದೆ ಲಕ್ಷ್ಮಿ ಚರಣದ ಚಿತ್ರವನ್ನು ಇಡಬೇಕು. ಲಕ್ಷ್ಮಿ ಮನೆ ಪ್ರವೇಶ ಮಾಡುತ್ತಿರುವಂತೆ ಚರಣವನ್ನಿಡಬೇಕು. ಪ್ರತಿ ದಿನ ಬೆಳಿಗ್ಗೆ ಲಕ್ಷ್ಮಿ ಚರಣದ ಪೂಜೆ ಮಾಡಬೇಕು.

ಬೆಳಿಗ್ಗೆ ಬೇಗ ಎದ್ದು ಎರಡೂ ಕೈಗಳನ್ನು ನೋಡಿ. ಸ್ನಾನ ಮಾಡಿದ ನಂತ್ರ ಸೂರ್ಯನಿಗೆ ಜಲವನ್ನು ಅರ್ಪಿಸಿ. ಈ ವೇಳೆ ಓಂ ಆದಿತ್ಯಾಯ ನಮಃ ಮಂತ್ರವನ್ನು ಜಪಿಸಿ.

ದೇವರ ಮನೆಯಲ್ಲಿ ಬೆಳಿಗ್ಗೆ ಕೆಲ ಹೊತ್ತು ಶ್ರೀಮದ್ಭವತ್ ಮಂತ್ರವನ್ನು ಜಪಿಸಿ. ಈ ಉಪಾಯದಿಂದ ಶ್ರೀಕೃಷ್ಣನ ಕೃಪೆ ಪಾತ್ರವಾಗುತ್ತದೆ,

ಶ್ರೀಕೃಷ್ಣನ ಬಾಲ ಮೂರ್ತಿಗೆ ಮೊಸರು, ಬೆಣ್ಣೆಯನ್ನು ಅರ್ಪಿಸಿ.

ಇದು ಬೇಸಿಗೆ ಕಾಲ. ಹಾಗಾಗಿ ಶಿವಲಿಂಗಕ್ಕೆ ತಂಪಾದ ನೀರನ್ನು ಅರ್ಪಿಸಿ. ಬೆಳ್ಳಿ ಲೋಟವನ್ನು ಇದಕ್ಕೆ ಬಳಸುವುದು ಶುಭಕರ.

ಹನುಮಂತನ ಮುಂದೆ ಸಾಸಿವೆ ಎಣ್ಣೆ ದೀಪ ಹಚ್ಚಿ. ಓಂ ರಾಮದೂತಾಯ ನಮಃ ಮಂತ್ರವನ್ನು ಜಪಿಸಿ.

ಪ್ರತಿ ದಿನ ಸೂರ್ಯಾಸ್ತದ ನಂತ್ರ ಶಿವನಿಗೆ ತುಪ್ಪದ ದೀಪ ಹಚ್ಚಿ. ಜೊತೆಗೆ ಮಹಾಮೃತ್ಯುಂಜಯ ಜಪ ಮಾಡಿ.

ದಿನದ ಆರಂಭವನ್ನು ಗಣೇಶನ ದರ್ಶನದೊಂದಿಗೆ ಶುರು ಮಾಡಿ.

ಪ್ರತಿ ದಿನ ದನಕ್ಕೆ ಮೊದಲು ಆಹಾರವನ್ನು ನೀಡಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...