alex Certify
ಕನ್ನಡ ದುನಿಯಾ       Mobile App
       

Kannada Duniya

ಹನುಮಾನ್ ಜಯಂತಿ: 120 ವರ್ಷಗಳ ನಂತ್ರ ಬಂದಿದೆ ವಿಶೇಷ ಯೋಗ

sunderkand_1491805978_749x421

ಹನುಮಂತನ ಭಕ್ತರಿಗೆ ಹನುಮಾನ್ ಜಯಂತಿ ಬಹಳ ಮಹತ್ವದ್ದು. ಈ ಬಾರಿ ಏಪ್ರಿಲ್ 11ರಂದು ಹನುಮಾನ್ ಜಯಂತಿ ಬಂದಿದೆ. 120 ವರ್ಷಗಳ ನಂತ್ರ ಈ ಬಾರಿಯ ಹನುಮಾನ್ ಜಯಂತಿ ಸಾಕಷ್ಟು ವಿಶೇಷತೆಗಳನ್ನು ಹೊಂದಿದ್ದು, ಭಕ್ತರು ಹನುಮಂತನ ವಿಶೇಷ ಕೃಪೆಗೆ ಪಾತ್ರರಾಗಲಿದ್ದಾರೆ.

ಮಂಗಳವಾರ, ಪೂರ್ಣಿಮೆ, ಚಿತ್ರಾ ನಕ್ಷತ್ರದಂದು ಹನುಮಾನ್ ಜಯಂತಿ ಬಂದಿದೆ. ಹನುಮಂತ ಜನಿಸಿದ್ದು ಕೂಡ ಇದೇ ವಾರ, ಇದೇ ತಿಥಿ,ಇದೇ ನಕ್ಷತ್ರದಂದು. ಗಜಕೇಸರಿ ಯೋಗ ಹಾಗೂ ಅಮೃತ್ ಯೋಗ ಕೂಡಿ ಬಂದಿದೆ. ಶನಿಯ ಸಾಡೇ ಸಾಥ್ ಅಥವಾ ದಯೆ ನಡೆಯುತ್ತಿದ್ದರೆ ನಿಮಗೆ ಇದು ಶುಭದಿನ.

ಹನುಮಂತ ಭಗವಂತ ಶಿವನ 11ನೇ ಅವತಾರ ಎನ್ನಲಾಗಿದೆ. ಹನುಮಂತ ಬಾಲ ಬ್ರಹ್ಮಚಾರಿ. ಈ ಶುಭ ದಿನ ನೀವು ಮಾಡುವ ಕೆಲ ಕೆಲಸಗಳು ಹನುಮಂತನ ಕೃಪೆ ನಿಮ್ಮ ಮೇಲೆ ಬೀಳುವಂತೆ ಮಾಡುತ್ತದೆ.

ಹನುಮಂತನ ದೇವಸ್ಥಾನದಲ್ಲಿ ಸಾಸಿವೆ ಎಣ್ಣೆಯ ದೀಪ ಅಥವಾ ಶುದ್ಧ ತುಪ್ಪದ ದೀಪ ಹಚ್ಚಿ. ಹನುಮಾನ್ ಚಾಲೀಸ್ ಮತ್ತು ಸುಂದರಕಾಂಡವನ್ನು ಓದಿ ಹನುಮಂತನ ಆಶೀರ್ವಾದ ಪಡೆಯಿರಿ.

ಮಂಗಳವಾರ ಹನುಮಂತನ ಮೂರ್ತಿಗೆ ಗುಲಾಬಿ ಹೂವಿನ ಹಾರವನ್ನು ಹಾಕಿ.

ಹನುಮಂತ ದುಷ್ಟ ಶಕ್ತಿಯನ್ನು ನಾಶ ಮಾಡಿ ಪ್ರಗತಿಗೆ ನೆರವಾಗುತ್ತಾನೆ. ಹಾಗಾಗಿ ಹನುಮಂತನ ದೇವಸ್ಥಾನಕ್ಕೆ ಹೋಗಿ ಕುಂಕುಮ, ಲಾಡು ಅಥವಾ ಬೂಂದಿಯನ್ನು ಅರ್ಪಿಸಿ. ಕೇಸರಿ ಬಣ್ಣದ ಬಟ್ಟೆಯನ್ನು ಕೂಡ ಭಗವಂತನಿಗೆ ಅರ್ಪಣೆ ಮಾಡಬಹುದು.

ಹನುಮಂತ ಶ್ರೀರಾಮನ ಭಕ್ತ. ಹಾಗಾಗಿ ರಾಮನಾಮ ಸ್ಮರಣೆಯಿಂದ ಕೂಡ ಹನುಮಂತನ ಕೃಪೆಗೆ ಪಾತ್ರರಾಗಬಹುದು.

11 ಅಶ್ವತ್ಥ ಎಲೆಯ ಮೇಲೆ ಶ್ರೀರಾಮನ ಹೆಸರನ್ನು ಬರೆಯಿರಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...