alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಪತ್ತು ವೃದ್ಧಿಸುವ ಅಕ್ಷಯ ತೃತೀಯ

Akshaya-Tritiya

ಅಕ್ಷಯ ತೃತೀಯ ದಿನದಂದು ಏನು ಮಾಡಿದರೂ ಒಳಿತಾಗುತ್ತದೆ. ಸಂಪತ್ತು ಹೆಚ್ಚುತ್ತದೆ ಎಂಬ ನಂಬಿಕೆ ಪ್ರಚಲಿತದಲ್ಲಿದೆ. ಇತ್ತೀಚಿನ ವರ್ಷಗಳಲ್ಲಿ ಅಕ್ಷಯ ತೃತೀಯಕ್ಕೆ ಇನ್ನಿಲ್ಲದ ಮಹತ್ವ ಬಂದಿದೆ. ಚಿನ್ನವನ್ನು ಮನೆಗೆ ತಂದರೆ ಒಳಿತಾಗುತ್ತದೆ ಎಂಬ ನಂಬಿಕೆ ಬೆಳೆದುಬಂದಿದೆ.

ಚಿನ್ನ ಖರೀದಿಗೆ ಅಕ್ಷಯ ತೃತೀಯ ದಿನ ಉತ್ತಮ ಎಂದು ಹೇಳುವುದರಿಂದ ಕೆಲವರು, ಮೊದಲೇ ಅಂಗಡಿಗಳಲ್ಲಿ ಚಿನ್ನ ಖರೀದಿಸಿ ಇಟ್ಟಿರುತ್ತಾರೆ. ಅಂದಿನ ದಿನ ಮನೆಗೆ ಕೊಂಡೊಯ್ಯುತ್ತಾರೆ. ಇನ್ನು ಕೆಲವರು ಅಕ್ಷಯ ತೃತೀಯದಂದೇ ಚಿನ್ನ ಖರೀದಿ ಮಾಡುವುದರಿಂದ ಚಿನ್ನದ ಅಂಗಡಿಗಳಲ್ಲಿ ಜನಜಾತ್ರೆಯೇ ನೆರೆದಿರುತ್ತದೆ. ಈ ದಿನದಂದು ಗೃಹಪ್ರವೇಶ, ಪೂಜೆ, ನಾಮಕರಣ, ವ್ಯಾಪಾರ ವಹಿವಾಟು ಮಾಡಿದರೆ ಒಳಿತಾಗುತ್ತದೆ ಎಂದು ಹೇಳಲಾಗುತ್ತದೆ.

ಅಕ್ಷಯ ತೃತೀಯ ದಿನದಂದು ಮಾಡುವ ಕೆಲಸಗಳು ಯಶಸ್ವಿಯಾಗುತ್ತವೆ ಎಂಬ ನಂಬಿಕೆ ಇರುವುದರಿಂದ, ಬಹುತೇಕರು ಈ ದಿನದಂದು ಚಿನ್ನ ಖರೀದಿ ಸೇರಿದಂತೆ ಹಲವು ಕೆಲಸಗಳನ್ನು ಮಾಡುತ್ತಾರೆ. ಸಂಪತ್ತು ಹೆಚ್ಚುತ್ತದೆ, ಸುಖ, ಸಂತೋಷ ಲಭಿಸುತ್ತದೆ ಎಂದು ಹೇಳುವುದರಿಂದ ಈ ದಿನಕ್ಕೆ ಭಾರೀ ಮಹತ್ವ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...