alex Certify
ಕನ್ನಡ ದುನಿಯಾ       Mobile App
       

Kannada Duniya

ದೇವರ ಮನೆಯಲ್ಲಿ ಅಪ್ಪಿತಪ್ಪಿಯೂ ಮಾಡಬೇಡಿ ಈ ತಪ್ಪು

ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ದೇವರ ಮನೆ ಇದ್ದೇ ಇರುತ್ತದೆ. ಕೆಲವರ ಮನೆಯಲ್ಲಿ ದೇವರಿಗೆ ಪ್ರತ್ಯೇಕ ಕೋಣೆ ಇದ್ದರೆ ಮತ್ತೆ ಕೆಲವರು ಹಾಲ್, ಕಿಚನ್, ಬೆಡ್ ರೂಂ ಯಾವುದಾದ್ರೂ ಒಂದು ಕಡೆ ದೇವರ ಫೋಟೋ ಹಾಗೂ ವಿಗ್ರಹಗಳನ್ನಿಟ್ಟುಕೊಂಡಿರುತ್ತಾರೆ.

ಪ್ರತಿದಿನ ಎಲ್ಲ ದೇವರಿಗೂ ಪೂಜೆ, ಆರತಿಗಳು ನಡೆಯುತ್ತವೆ. ಎಷ್ಟೇ ಭಕ್ತಿಯಿಂದ ಪೂಜೆ ಮಾಡಿದ್ರೂ ಅನಾರೋಗ್ಯ ಹಾಗೂ ಆರ್ಥಿಕ ಸಂಕಷ್ಟ ತಪ್ಪುತ್ತಿಲ್ಲ ಎಂದು ಪರಿತಪಿಸುವವರು ನಮ್ಮಲ್ಲಿದ್ದಾರೆ. ದೇವರಿಗೆ ಪೂಜೆ ಮಾಡಿದ್ರೆ ಸಾಲದು, ದೇವರ ಮನೆ ಹಾಗೂ ದಿಕ್ಕು ಕೂಡ ಮನುಷ್ಯನ ಏಳಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.

ದೇವರ ಮನೆ ಹಾಗೂ ಪೂಜಾ ವಿಧಿ-ವಿಧಾನದಲ್ಲಿ ತಪ್ಪುಗಳಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ವಾಸ್ತು ಪ್ರಕಾರ ದೇವರು ಸಂತೃಪ್ತಿಗೊಳ್ಳಬೇಕಾದ್ರೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಅಡುಗೆ ಮನೆ ಹಾಗೂ ದೇವರ ಮನೆ ಎಂದಿಗೂ ಒಟ್ಟಿಗೆ ಇರಬಾರದು.

ಬೆಡ್ ರೂಂನಲ್ಲಿ ಕೂಡ ದೇವರ ಮನೆ ಇರಬಾರದು.

ಪೂಜೆ ಮಾಡುವಾಗ ನಮ್ಮ ಮುಖ ಉತ್ತರ ಅಥವಾ ಪೂರ್ವಕ್ಕೆ ಬರುವಂತೆ ದೇವರ ವಿಗ್ರಹ ಹಾಗೂ ಫೋಟೋಗಳನ್ನು ಇಡಬೇಕು.

ಜಾಗ ಉಳಿಸುವ ದೃಷ್ಠಿಯಿಂದ ಕೆಲವರು ಮನೆಯ ಮಹಡಿಗೆ ಹೋಗುವ ಜಾಗದಲ್ಲಿ ಅಂದ್ರೆ ಮೆಟ್ಟಿಲ ಕೆಳಗೆ ದೇವರ ಮನೆಯನ್ನು ಮಾಡಿಕೊಳ್ತಾರೆ. ಆದ್ರೆ ಹಾಗೆ ಮಾಡುವುದರಿಂದ ಶುಭ ಫಲಗಳು ಲಭಿಸುವುದಿಲ್ಲ.

ದೇವರ ಮನೆಯ ಜೊತೆ ಶೌಚಾಲಯ ಅಥವಾ ಸ್ನಾನ ಗೃಹದ ಗೋಡೆ ಕೂಡಿರಬಾರದು.

ದೇವರ ವಿಗ್ರಹ ಅಥವಾ ಫೋಟೋಗಳನ್ನು ಇಡುವಲ್ಲಿಯೂ ವಿಧಿ ವಿಧಾನಗಳು, ದಿಕ್ಕುಗಳಿವೆ. ಹನುಮಂತ, ಗಣೇಶ, ದುರ್ಗಾ ದೇವಿಯ ವಿಗ್ರಹಗಳ ಮುಖ ದಕ್ಷಿಣಕ್ಕೆ ಬರುವಂತೆ ಇಡಬೇಕು. ಕೃಷ್ಣ ಮತ್ತು ರಾಮನ ಮೂರ್ತಿ ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಿರಬೇಕು.

ತುಳಸಿಯ ಗಿಡವನ್ನು ಮನೆಯ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿಡಬೇಕು.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...