alex Certify
ಕನ್ನಡ ದುನಿಯಾ       Mobile App
       

Kannada Duniya

ತಿಲಕವಿಡುವ ಮೊದಲು ಈ ವಿಷಯ ತಿಳಿದಿರಲಿ

lordkrishnaji_28_06_2017

ಭಗವಂತನಿಗೆ ಪೂಜೆ ಮಾಡುವ ವೇಳೆ ತಿಲಕವನ್ನಿಡುತ್ತೇವೆ. ಪೂಜೆ ವೇಳೆ ತಿಲಕವಿಡುವ ಪದ್ಧತಿಗೆ ವಿಶೇಷ ಮಹತ್ವವಿದೆ. ಶಾಸ್ತ್ರಗಳ ಪ್ರಕಾರ ಸಿಂಧೂರ ಹಚ್ಚುವ ಮೊದಲು ಕೆಲವೊಂದು ವಿಷಯಗಳ ಬಗ್ಗೆ ಗಮನ ನೀಡಬೇಕಾಗುತ್ತದೆ. ಸ್ನಾನ ಮಾಡಿ ವಸ್ತ್ರ ಧಾರಣೆ ಮಾಡಿದ ನಂತ್ರ ಉತ್ತರ ದಿಕ್ಕಿಗೆ ಮುಖ ಮಾಡಿ ತಿಲಕವನ್ನಿಟ್ಟುಕೊಳ್ಳಬೇಕು.

ವಿಷ್ಣು ಸಂಹಿತೆ ಪ್ರಕಾರ ಶುಭ ಹಾಗೂ ವೈದಿಕ ಕಾರ್ಯಕ್ಕೆ ಉಂಗುರ ಬೆರಳನ್ನು ಬಳಸಬೇಕು. ಪಿತೃ ಕಾರ್ಯಕ್ಕೆ ಮಧ್ಯದ ಬೆರಳು ಹಾಗೂ ಕೃಷ್ಣ ಕಾರ್ಯಕ್ಕೆ ಕಿರು ಬೆರಳು ಹಾಗೂ ತಾಂತ್ರಿಕ ಕಾರ್ಯಕ್ಕೆ ತೋರುಬೆರಳನ್ನು ಬಳಸಬೇಕು.

ತಿಲಕವಿಡುವಾಗ ಹಾಗೂ ಇಟ್ಟುಕೊಳ್ಳುವಾಗ ಕೂಡ ಬೇರೆ ಬೇರೆ ಬೆರಳುಗಳು ಬೇರೆ ಬೇರೆ ರೀತಿಯಲ್ಲಿ ಪ್ರಭಾವ ಬೀರುತ್ತವೆ. ಉಂಗುರ ಬೆರಳಿನಿಂದ ತಿಲಕವಿಟ್ಟರೆ ಶಾಂತಿ ಪ್ರಾಪ್ತಿಯಾಗುತ್ತದೆ. ಮಧ್ಯದ ಬೆರಳಿನಿಂದ ತಿಲಕವಿಟ್ಟರೆ ಆಯಸ್ಸು ವೃದ್ಧಿಯಾಗುತ್ತದೆ. ಹೆಬ್ಬರಳಿನಿಂದ ತಿಲಕವಿಟ್ಟರೆ ಅದನ್ನು ಪುಷ್ಠಿದಾಯಕವೆಂದು ಪರಿಗಣಿಸಲಾಗಿದೆ.

ಶ್ರೀಗಂಧದ ತಿಲಕ ಮನಸ್ಸಿಗೆ ಶಾಂತಿ ನೀಡುತ್ತದೆ. ಭಸ್ಮ ರೋಮದಲ್ಲಿರುವ ವಿಷಗುಣವನ್ನು ನಾಶ ಮಾಡುತ್ತದೆ.  ಅರಿಶಿನ ಹಾಗೂ ನಿಂಬೆಯಿಂದ ಮಾಡಿದ ತಿಲಕ ನಮ್ಮ ಜ್ಞಾನ ಶಕ್ತಿಯನ್ನು ವೃದ್ಧಿಸುತ್ತದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...