alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಯಲ್ಲಿ ಧನಲಕ್ಷ್ಮಿ ನೆಲೆಸಬೇಕಾದ್ರೆ ಸಹೋದರಿಗೆ ನೀಡಿ ಈ ವಸ್ತು

2017_8image_08_00_006516000maa-laxmi-ll

12 ವರ್ಷಗಳ ನಂತ್ರ ಇಂಥ ದಿನ ಬಂದಿದೆ. ರಾಖಿ ಹಬ್ಬದಂದು ಗ್ರಹಣ ಬಂದಿದೆ. ರಾಖಿ ಹಬ್ಬದಂದು ಸೂತಕವಿರಲಿದೆ. ಹುಣ್ಣಿಮೆ ತಿಥಿ ಆಗಸ್ಟ್ 6,2017 ರಂದು ರಾತ್ರಿ 10.28ರಿಂದ ಶುರುವಾಗಲಿದೆ. ಹಾಗಾಗಿ ಆಗಸ್ಟ್ 7ರಂದು ರಾಖಿ ಕಟ್ಟಲು ಕೆಲವೇ ಸಮಯ ಮಾತ್ರ ಸೂಕ್ತವಾಗಿದ್ದು, ಗ್ರಹಣ ಕಾಲದಲ್ಲಿ ರಾಖಿ ಕಟ್ಟಬಾರದು.

ಪಂಡಿತರ ಪ್ರಕಾರ, ಭದ್ರಾ ಕಾಲದಲ್ಲಿ ರಾಖಿ ಕಟ್ಟಬಾರದು. ಶೂರ್ಪನಖಿ ಭದ್ರಾ ಕಾಲದಲ್ಲಿ ರಾವಣನಿಗೆ ರಾಖಿ ಕಟ್ಟುತ್ತಿದ್ದಳಂತೆ. ಇದರಿಂದ ರಾವಣನಿಗೆ ಹಾನಿಯಾಯ್ತು. ಹಾಗಾಗಿ ಭದ್ರಾ ಕಾಲದಲ್ಲಿ ರಾಖಿ ಕಟ್ಟುವುದು ನಿಶಿದ್ಧ. ಈ ಬಾರಿ ಹಿಂದೂ ಧರ್ಮ ಗ್ರಂಥದ ಪ್ರಕಾರ ರಾಖಿ ಹಬ್ಬವನ್ನು ಆಗಸ್ಟ್ 7 ರಂದು ಆಚರಿಸಲಾಗುವುದು.

ಸಹೋದರ-ಸಹೋದರಿಯರ ಬಾಂಧವ್ಯ ಬೆಸೆಯುವ ಹಬ್ಬ ರಾಖಿ. ಹಿಂದೂ ಧರ್ಮದಲ್ಲಿ ಸ್ತ್ರೀಯನ್ನು ದೇವರಿಗೆ ಹೋಲಿಸಲಾಗಿದೆ. ಮನೆಯಲ್ಲಿರುವ ತಾಯಿ, ಪತ್ನಿ, ಮಗಳು, ಸಹೋದರಿ ಎಲ್ಲರೂ ದೇವರಿಗೆ ಸಮಾನ. ಅವರನ್ನು ಗೌರವಿಸುವುದು ಪ್ರತಿಯೊಬ್ಬನ ಕರ್ತವ್ಯ. ಸಹೋದರಿ, ಮಗಳು ಬೇರೆ ಮನೆಯನ್ನು ಬೆಳಗುವವಳು. ಅವಳು ಸುಖವಾಗಿರಲೆಂದು ಪ್ರತಿಯೊಬ್ಬ ಅಣ್ಣನೂ ಬಯಸ್ತಾನೆ. ಮನೆಯಲ್ಲಿರುವ ಸ್ತ್ರೀಯರಿಗೆ ಕೊಡುವ ಕೆಲವೊಂದು ವಸ್ತುಗಳು ಅವರ ಸುಖ-ಶಾಂತಿಯ ಜೊತೆಗೆ ಪುರುಷನ ಏಳ್ಗೆಗೆ ಕಾರಣವಾಗುತ್ತದೆ.

ರಕ್ಷಾಬಂಧನದ ಈ ವಿಶೇಷ ಸಂದರ್ಭದಲ್ಲಿ ಸಹೋದರಿಗೆ ಈ ಮೂರರಲ್ಲಿ ಒಂದು ಉಡುಗೊರೆ ನೀಡಿ.

ಬಟ್ಟೆ : ಸ್ವಚ್ಛ ಹಾಗೂ ಸುಂದರ ಸ್ಥಳದಲ್ಲಿ ಲಕ್ಷ್ಮಿ ವಾಸವಾಗಿರುತ್ತಾಳೆ. ಮನೆಯಲ್ಲಿ ಮಹಿಳೆಯರು ಲಕ್ಷ್ಮಿಯ ರೂಪ. ಮನೆಯನ್ನು ನಡೆಸುವ ಜವಾಬ್ದಾರಿ ಪುರುಷನ ಮೇಲಿರುತ್ತದೆ. ಆತ ತಾಯಿ, ಪತ್ನಿ, ಸಹೋದರಿ, ಮಗಳಿಗೆ ಸುಂದರ ಉಡುಗೆ ನೀಡಿದಲ್ಲಿ ಲಕ್ಷ್ಮಿ ಕೃಪೆ ಆತನ ಮೇಲಿರುತ್ತದೆ. ಯಾವ ಪುರುಷ ಹೀಗೆ ಮಾಡುವುದಿಲ್ಲವೋ ಅಲ್ಲಿ ಲಕ್ಷ್ಮಿ ನೆಲೆಸಿರುವುದಿಲ್ಲ.

ಆಭರಣ : ಯಾವ ಮನೆಯ ಮಹಿಳೆ ಆಭರಣಗಳಿಂದ ಅಲಂಕಾರಗೊಂಡಿರುತ್ತಾಳೋ ಆ ಮನೆಯಲ್ಲಿ ಸಂಪತ್ತು ತುಂಬಿ ತುಳುಕುತ್ತಿರುತ್ತದೆ. ಹಬ್ಬ ಹಾಗೂ ವಿಶೇಷ ಸಂದರ್ಭದಲ್ಲಿ ಮನೆಯ ಪುರುಷನಾದವನು ಮಹಿಳೆಯರಿಗೆ ಆಭರಣಗಳನ್ನು ನೀಡಬೇಕು. ಮಹಿಳೆ ಖುಷಿಯಾಗಿ, ಪ್ರಸನ್ನವಾಗಿದ್ದರೆ ಕುಟುಂಬ ಸಂತೋಷವಾಗಿರುತ್ತದೆ.

ಹಿತನುಡಿ : ಮನೆಯಲ್ಲಿರುವ ಪುರುಷ ಸದಾ ಮಹಿಳೆಯನ್ನು ಗೌರವದಿಂದ ಕಾಣಬೇಕು. ಮಹಿಳೆಯರ ಜೊತೆ ಹಿತವಾಗಿ ಗೌರವದಿಂದ ಮಾತನಾಡಬೇಕು. ಈ ಮನೆಯಲ್ಲಿ ದೇವತೆಗಳು ವಾಸವಾಗಿರುತ್ತಾರೆ. ಮಹಿಳೆ ಸದಾ ದುಃಖದಲ್ಲಿರುವ ಮನೆಯಲ್ಲಿ ಬಡತನ, ಅಸಂತೋಷ ಸದಾ ನೆಲೆಸಿರುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...