alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಬಾರಿ 11 ದಿನಗಳವರೆಗೆ ನಡೆಯಲಿದೆ ಗಣೇಶೋತ್ಸವ

2017_8image_07_23_593902000ganeshutsav-ll

ಭಾರತೀಯ ಪಂಚಾಂಗದ ಪ್ರಕಾರ ಭಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿ ದಿನ ಗಣೇಶನ ಪೂಜೆ ನೆರವೇರುತ್ತದೆ. ವಿಘ್ನ ವಿನಾಯಕನಿಗೆ ಮೊದಲ ಪೂಜೆ. ಈಗಾಗಲೇ ಗಣೇಶ ಚತುರ್ಥಿಗೆ ತಯಾರಿ ಜೋರಾಗಿ ನಡೆಯುತ್ತಿದೆ. ಈ ಬಾರಿ ಆಗಸ್ಟ್ 25ರಂದು ಗಣೇಶನ ಹಬ್ಬ ಆಚರಿಸಲಾಗುತ್ತಿದೆ.

ಮನೆ ಮನೆಯಲ್ಲಿ ಗಣೇಶನ ಮೂರ್ತಿಯನ್ನು ತಂದು ಅದ್ಧೂರಿಯಾಗಿ ಹಬ್ಬ ಆಚರಿಸಲಾಗುತ್ತದೆ. ಪ್ರತಿ ವರ್ಷ 10 ದಿನಗಳ ಕಾಲ ಗಣೇಶನ ಪೂಜೆ ನಡೆಯುತ್ತಿತ್ತು. ಆದ್ರೆ ಈ ವರ್ಷ 11 ದಿನಗಳ ಕಾಲ ವಿನಾಯಕನಿಗೆ ಪೂಜೆ ಮಾಡುವ ಅವಕಾಶ ಭಕ್ತರಿಗೆ ಸಿಗ್ತಿದೆ. ಆಗಸ್ಟ್ 25ರಂದು ಗಣೇಶೋತ್ಸವ ಆರಂಭವಾಗಲಿದ್ದು, ಸೆಪ್ಟೆಂಬರ್ 5ರವರೆಗೆ ವಿಸರ್ಜನೆಗೆ ಅವಕಾಶವಿದೆ.

ಗಣೇಶೋತ್ಸವ ಆರಂಭವಾದ ನಂತ್ರ ಎರಡು ದಶಮಿ ತಿಥಿ ಬರಲಿದೆ. ಆಗಸ್ಟ್ 31 ಹಾಗೂ ಸೆಪ್ಟೆಂಬರ್ 1ರಂದು ದಶಮಿ ತಿಥಿ ಇರಲಿದೆ. ಹಾಗಾಗಿ ಈ ಬಾರಿ 11 ದಿನಗಳ ಕಾಲ ಉತ್ಸವ ಆಚರಿಸಬಹುದಾಗಿದೆ.

ಗಣೇಶ ಬಪ್ಪ ಮಧ್ಯಾಹ್ನ ಜನಿಸಿದ್ದಾನೆಂಬ ನಂಬಿಕೆಯಿದೆ. ಚತುರ್ಥಿ ಆಗಸ್ಟ್ 24ರಂದು ರಾತ್ರಿ 8.27ಕ್ಕೆ ಶುರುವಾಗಲಿದೆ. ಈ ಶುಭ ಸಮಯ ಆಗಸ್ಟ್ 25 ರಾತ್ರಿ 8.31ರವರೆಗೆ ಇರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...