alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಕಷ್ಟ ನಿವಾರಣೆಗೆ ಇಂದು ಅವಶ್ಯವಾಗಿ ಮಾಡಿ ಈ ಕೆಲಸ

2017_1image_12_34_383739636ganeshpujan-ll

ಮಾಘ ಮಾಸದ ಕೃಷ್ಣ ಪಕ್ಷದ ಚತುರ್ಥಿ ದಿನವನ್ನು ಸಂಕಷ್ಟ ಗಣೇಶ ಚತುರ್ಥಿಯನ್ನಾಗಿ ಆಚರಿಸಲಾಗುತ್ತದೆ. ಇಂದಿನ ದಿನಕ್ಕೆ ಬಹಳ ವಿಶೇಷವಾದ ಮಹತ್ವವಿದೆ. ವಿಘ್ನನಿವಾರಕ ಗಣೇಶನ ಪೂಜೆ ಮಾಡಿದ್ರೆ ಎಲ್ಲ ಸಂಕಟಗಳು ದೂರವಾಗುತ್ತವೆ.

ಇಂದು ಗಣೇಶನ ಕಥೆ ಕೇಳುವ ಹಾಗೂ ಓದುವುದು ಬಹಳ ಮುಖ್ಯ. ವೃತವಿರಲಿ ಬಿಡಲಿ ಗಣೇಶ ಕಥೆಯನ್ನು ಅವಶ್ಯವಾಗಿ ಓದಬೇಕು ಅಥವಾ ಹೇಳಬೇಕು. ಹೀಗೆ ಮಾಡುವುದರಿಂದ ಜೀವನದ ಕಷ್ಟಗಳೆಲ್ಲ ದೂರವಾಗಿ ಸುಖ ಪ್ರಾಪ್ತಿಯಾಗುತ್ತದೆ.

ಒಂದು ಬಾರಿ ದೇವಾನುದೇವತೆಗಳಿಗೆ ಸಂಕಷ್ಟ ಎದುರಾಗಿತ್ತು. ಸಹಾಯಕ್ಕಾಗಿ ಅವರು ಭಗವಂತ ಶಿವನಲ್ಲಿಗೆ ಓಡಿ ಬಂದ್ರು. ಶಿವನ ಇಬ್ಬರು ಮಕ್ಕಳಾದ ಕಾರ್ತಿಕೇಯ ಹಾಗೂ ಗಣೇಶ ಇಬ್ಬರೂ ಅಲ್ಲಿ ಉಪಸ್ಥಿತರಿದ್ದರು. ಈ ವೇಳೆ ಯಾರು ದೇವತೆಗಳ ಕಷ್ಟವನ್ನು ಬಗೆಹರಿಸ್ತೀರಾ ಎಂದು ಶಿವ ಇಬ್ಬರು ಮಕ್ಕಳನ್ನು ಕೇಳ್ತಾನೆ. ಇಬ್ಬರು ಮಕ್ಕಳೂ ಮುಂದೆ ಬರ್ತಾರೆ. ಆಗ ಇಬ್ಬರಿಗೂ ಒಂದು ಪರೀಕ್ಷೆಯೊಡ್ಡುವ ತೀರ್ಮಾನಕ್ಕೆ ಶಿವ ಬರ್ತಾನೆ.

ನಿಮ್ಮಿಬ್ಬರಲ್ಲಿ ಯಾರು ಇಡೀ ಭೂಮಿಯನ್ನು ಸುತ್ತಿ ಮೊದಲು ನನ್ನಲ್ಲಿಗೆ ಬರ್ತೀರೋ ಅವರು ದೇವತೆಗಳಿಗೆ ಸಹಾಯ ಮಾಡಿ ಎಂದು ಶಿವ ತನ್ನಿಬ್ಬರು ಮಕ್ಕಳನ್ನು ಪರೀಕ್ಷೆಗೊಳಪಡಿಸ್ತಾನೆ.

ತಂದೆ ಈ ಮಾತು ಕೇಳ್ತಾ ಇದ್ದಂತೆ ಕಾರ್ತೀಕೇಯ ತನ್ನ ವಾಹನವನ್ನೇರಿ ಭೂಮಿ ಸುತ್ತಲು ಹೊರಡುತ್ತಾನೆ. ಆದ್ರೆ ಇದು ಗಣೇಶನಿಗೆ ಕಷ್ಟವಾಗಿತ್ತು. ಒಂದು ಗಣೇಶನ ಸ್ಥೂಲಕಾಯ. ಇನ್ನೊಂದು ಆತನ ವಾಹನ ಇಲಿ. ಗಾತ್ರದಲ್ಲಿ ದೊಡ್ಡದಾಗಿರುವ ಗಣೇಶನ ಬುದ್ಧಿ ಮಾತ್ರ ಚುರುಕಾಗಿತ್ತು. ಹಾಗಾಗಿ ಒಂದು ಉಪಾಯ ಮಾಡ್ತಾನೆ ಗಣೇಶ.

ಮುಂದೆ ಕುಳಿತಿದ್ದ ತಂದೆ-ತಾಯಿಯನ್ನು ಒಂದು ಪ್ರದಕ್ಷಿಣೆ ಹಾಕಿ ಭೂಮಿ ಸುತ್ತಿ ಬಂದೆ ಎನ್ನುತ್ತಾನೆ. ಇದರಿಂದ ಸಂತುಷ್ಟನಾದ ಶಿವ ದೇವತೆಗಳಿಗೆ ಸಹಾಯ ಮಾಡುವಂತೆ ಆಜ್ಞೆ ಮಾಡ್ತಾನೆ. ಜೊತೆಗೆ ಚತುರ್ಥಿ ದಿನ ಯಾರು ಗಣೇಶನ ಪೂಜೆ ಮಾಡಿ, ರಾತ್ರಿ ಚಂದ್ರನನ್ನು ನೋಡಿ ಎಳ್ಳು ಬೆಲ್ಲ ತರ್ಪಣ ಬಿಟ್ಟವರಿಗೆ ಎಲ್ಲ ಕಷ್ಟಗಳು ದೂರವಾಗಲಿದೆ ಎನ್ನುತ್ತಾನೆ. ಇಂದು ಗಣೇಶನ ಕಥೆ ಓದುವುದು ಅಥವಾ ಕೇಳುವುದನ್ನು ಅವಶ್ಯವಾಗಿ ಮಾಡಿ, ನಿಮ್ಮ ಕಷ್ಟ ಪರಿಹರಿಸಿಕೊಳ್ಳಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...