alex Certify
ಕನ್ನಡ ದುನಿಯಾ       Mobile App
       

Kannada Duniya

ಗಣೇಶ ಮೂರ್ತಿಯನ್ನು ಮನೆಗೆ ತರುವ ಮೊದಲು ಇದು ನೆನಪಿರಲಿ

ಈ ಬಾರಿ ಸೆಪ್ಟೆಂಬರ್ 13 ರಂದು ಗಣೇಶ ಚತುರ್ಥಿ ಆಚರಣೆ ಮಾಡಲಾಗ್ತಿದೆ. ಈ ವಿಶೇಷ ಸಂದರ್ಭದಲ್ಲಿ ಗಣೇಶ ಮೂರ್ತಿಗೆ ಪೂಜೆ ನಡೆಯುತ್ತದೆ. ಮನೆಗೆ ಗಣೇಶ ಮೂರ್ತಿ ತಂದು ಪೂಜೆ ಮಾಡಿದ ನಂತ್ರ ಅನಂತ ಚತುರ್ಥಿಯಂದು ಗಣೇಶನ ವಿಸರ್ಜನೆ ನಡೆಯುತ್ತದೆ. ಗಣೇಶನ ಪೂಜೆಯೊಂದೇ ಅಲ್ಲ, ಮೂರ್ತಿ ಖರೀದಿ ವೇಳೆಯೂ ಕೆಲವೊಂದು ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.

ನಿಂತಿರುವ, ನೃತ್ಯ ಮಾಡ್ತಿರುವ, ವಿಶ್ರಾಂತಿ ಪಡೆಯುತ್ತಿರುವ ಮೂರ್ತಿ ಮಾರುಕಟ್ಟೆಯಲ್ಲಿ ಸಿಗುತ್ತದೆ. ಆದ್ರೆ ಈ ಎಲ್ಲ ಮೂರ್ತಿಗಳನ್ನು ಮನೆಗೆ ತಂದು ಪೂಜೆ ಮಾಡುವುದು ಒಳ್ಳೆಯದಲ್ಲ. ಕುಳಿತ ಭಂಗಿಯಲ್ಲಿರುವ ಮೂರ್ತಿಯನ್ನು ಪೂಜೆ ಮಾಡಬೇಕು.

ಬಲಮುರಿ ಹೊಂದಿರುವ ಗಣೇಶ ಮೂರ್ತಿಯನ್ನು ಮನೆಗೆ ತರಬಾರದು. ಎಡ ಮುರಿ ಗಣೇಶನ ಪೂಜೆ ಶುಭಕರ.

ಗಣೇಶನ ವಾಹನ ಇಲಿ. ಪ್ರಿಯವಾದ ಸಿಹಿ ಮೋದಕ. ಹಾಗಾಗಿ ಗಣೇಶನ ಮೂರ್ತಿ ಬಳಿ ಇಲಿ ಹಾಗೂ ಮೋದಕ ಇರುವಂತೆ ನೋಡಿಕೊಳ್ಳಿ.

ಮಣ್ಣಿನಿಂದ ಮಾಡಿದ ಗಣೇಶ ಮೂರ್ತಿ ಪೂಜೆ ಶುಭಕರ. ಅಂತಹ ಮೂರ್ತಿ ಸಿಗದೆ ಹೋದಲ್ಲಿ ರಾಸಾಯನಿಕ ಬಳಸದ ಮೂರ್ತಿಯನ್ನು ಪೂಜೆಗೆ ಬಳಸಿ. ಲೋಹದ ಮೂರ್ತಿಗಳು ಕೂಡ ಶುಭಕರ.

ಬಿಳಿ ಬಣ್ಣದ ಹಾಗೂ ಸಿಂಧೂರ ಬಣ್ಣದ ಮೂರ್ತಿ ಒಳ್ಳೆಯದು. ಇಂಥ ಗಣೇಶ ಮೂರ್ತಿ ಪೂಜೆಯಿಂದ ಮನೆಯಲ್ಲಿ ಶಾಂತಿ ನೆಲೆಸುತ್ತದೆ. ಮನಸ್ಸಿನಲ್ಲಿರುವ ಆಸೆ ಈಡೇರುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...