alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಶುಭ ಮುಹೂರ್ತದಲ್ಲಿ ಮಾಡಿ ಗಣೇಶನ ಆರಾಧನೆ

ಭಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿಯಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಈ ಬಾರಿ ಸೆಪ್ಟೆಂಬರ್ 13ರಂದು ಚತುರ್ಥಿ ಬಂದಿದೆ. ಗಜಮುಖನ ಆರಾಧನೆಗೆ ಈಗಿನಿಂದಲೇ ತಯಾರಿ ಶುರುವಾಗಿದೆ. ಮಾರುಕಟ್ಟೆಯಲ್ಲಿ ಬಣ್ಣ ಬಣ್ಣದ ಗಣೇಶ ಮೂರ್ತಿಗಳ ಜೊತೆ ಪ್ರಕೃತಿ ಪ್ರಿಯ ಮಣ್ಣಿನ ಗಣಪತಿ ಎಲ್ಲರ ಗಮನ ಸೆಳೆಯುತ್ತಿದ್ದಾನೆ.

ಆದಿಯಲ್ಲಿ ಮೊದಲು ಪೂಜಿಸಲ್ಪಡುವ ದೇವರು ಗಣೇಶ. ಯಾವುದೇ ಪೂಜಾ ಕಾರ್ಯಕ್ರಮವಿರಲಿ, ಮೊದಲು ವಿಘ್ನ ವಿನಾಶಕನಿಗೆ ಪೂಜೆ ನೆರವೇರುತ್ತದೆ. ಜ್ಞಾನದ ದೇವರು ವಿನಾಯಕ. ಭಗವಂತ ಗಣೇಶನ ಆರಾಧನೆಯಿಂದ ಎಲ್ಲ ಕಾರ್ಯಗಳೂ ಸಿದ್ಧಿಸಲಿವೆ ಎಂದು ನಂಬಲಾಗಿದೆ. ಅಡೆತಡೆಗಳು ನಿವಾರಣೆಯಾಗಿ ಐಶ್ವರ್ಯ ಪ್ರಾಪ್ತಿಯಾಗುತ್ತದೆ.

ಈ ಬಾರಿ ಗಣೇಶ ಉತ್ಸವ ಸೆಪ್ಟೆಂಬರ್ 13ಕ್ಕೆ ಶುರುವಾಗಿ ಸೆಪ್ಟೆಂಬರ್ 23 ರ ವರೆಗಿರಲಿದೆ. ಈ ಬಾರಿ ಚತುರ್ಥಿ ದಿನ ಶುಭಕರವಾಗಿದೆಯಂತೆ. ಗಣೇಶ ಭಕ್ತರು ಬೆಳಿಗ್ಗೆ ಉಪವಾಸವಿದ್ದು, ಮಧ್ಯಾಹ್ನ ಗಣೇಶನಿಗೆ ತಿಲಕವಿಟ್ಟು ಪೂಜೆ ಮಾಡಬೇಕು.

ಸೆಪ್ಟೆಂಬರ್ 13 ರಂದು ಮಧ್ಯಾಹ್ನ 11.03 ರಿಂದ 13.30 ರವರೆಗೆ ಗಣೇಶನ ಪೂಜೆಗೆ ಶುಭ ಮುಹೂರ್ತವಿದೆ.

ಸೆಪ್ಟೆಂಬರ್ 13 ರಂದು ಚಂದ್ರನನ್ನು ನೋಡಬಾರದು. ಚಂದ್ರನನ್ನು ನೋಡಬಾರದ ಸಮಯ ಬೆಳಿಗ್ಗೆ 9 ಗಂಟೆ 31 ನಿಮಿಷದಿಂದ ಸಂಜೆ 9 ಗಂಟೆ 12 ನಿಮಿಷದವರೆಗೆ. ಚತುರ್ಥಿ ತಿಥಿ ಸೆಪ್ಟೆಂಬರ್ 12 ರ ಸಂಜೆ 4 ಗಂಟೆ ಏಳು ನಿಮಿಷಕ್ಕೆ ಶುರುವಾಗಲಿದೆ. ಚತುರ್ಥಿ ತಿಥಿ ಸೆಪ್ಟೆಂಬರ್ 13ರ ಮಧ್ಯಾಹ್ನ 2.51 ರ ವರೆಗಿರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...