alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಇಂದು ಸಾಮಾಜಿಕ ಕಾರ್ಯಗಳಲ್ಲಿ ಸಮಯ ಕಳೆಯಲಿದ್ದೀರಿ. ಇದಕ್ಕಾಗಿ ಹಣ ಕೂಡ ಖರ್ಚಾಗಲಿದೆ. ಸರ್ಕಾರಿ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಮಕ್ಕಳಿಂದ ಶುಭ ಸಮಾಚಾರ ದೊರೆಯಬಹುದು.

ವೃಷಭ ರಾಶಿ

ಹೊಸ ಕಾರ್ಯವನ್ನು ಆರಂಭಿಸಲಿದ್ದೀರಿ. ಉದ್ಯೋಗಿಗಳಿಗೆ ಇಂದು ಶುಭ ದಿನ. ಆದಾಯ ವೃದ್ಧಿ ಮತ್ತು ಪದೋನ್ನತಿಯ ಸಮಾಚಾರ ದೊರೆಯುತ್ತದೆ. ಸರ್ಕಾರಿ ಲಾಭ ದೊರೆಯುತ್ತದೆ. ಮನೆಯಲ್ಲಿ ಸುಖ-ಶಾಂತಿ ನೆಲೆಸಲಿದೆ.

ಮಿಥುನ ರಾಶಿ

ಶರೀರದಲ್ಲಿ ಸ್ಪೂರ್ತಿಯ ಅಭಾವವಿರುತ್ತದೆ. ನಿಗದಿತ ಕಾರ್ಯಗಳು ಪೂರ್ಣಗೊಳ್ಳಲಿವೆ. ಕೋಪ ಹೆಚ್ಚಾಗಬಹುದು. ಸಹೋದ್ಯೋಗಿಗಳ ಸಹಕಾರ ಸಿಗುವುದಿಲ್ಲ. ಹಿರಿಯ ಅಧಿಕಾರಿಗಳೊಂದಿಗೆ ವಿವಾದದಲ್ಲಿ ತೊಡಗಬೇಡಿ.

ಕರ್ಕ ರಾಶಿ

ಕೋಪ ಮತ್ತು ನಕಾರಾತ್ಮಕ ವಿಚಾರಗಳು ನಿಮ್ಮ ಮಾನಸಿಕ ಸ್ವಾಸ್ಥ್ಯವನ್ನು ಹಾಳು ಮಾಡುತ್ತವೆ. ಸಂಯಮ ಇಟ್ಟುಕೊಳ್ಳುವುದು ಅತ್ಯಂತ ಅವಶ್ಯಕ. ಊಟ-ತಿಂಡಿ ಬಗ್ಗೆ ಗಮನ ವಹಿಸಿ. ಖರ್ಚು ಹೆಚ್ಚಾಗಬಹುದು.

ಸಿಂಹ ರಾಶಿ

ಆರೋಗ್ಯ ಮತ್ತು ವಿವಾದ ನಿಮ್ಮ ದಾಂಪತ್ಯ ಜೀವನದ ಮೇಲೆ ಪರಿಣಾಮ ಬೀರಲಿದೆ. ಸಾರ್ವಜನಿಕ ಜೀವನದಲ್ಲಿ ಅಪಯಶಸ್ಸಾಗದಂತೆ ಎಚ್ಚರ ವಹಿಸಿ. ವಿರುದ್ಧ ಲಿಂಗಿಗಳ ಬಗ್ಗೆ ಆಕರ್ಷಣೆ ಹೆಚ್ಚಲಿದೆ.

ಕನ್ಯಾ ರಾಶಿ

ಎಲ್ಲಾ ಕಾರ್ಯಗಳಲ್ಲೂ ಅನುಕೂಲತೆಯ ಅನುಭವವಾಗಲಿದೆ. ಮನೆಯಲ್ಲಿ ಸುಖ ಶಾಂತಿ ಇರುತ್ತದೆ. ಇದರಿಂದ ಮನಸ್ಸು ಪ್ರಸನ್ನವಾಗಲಿದೆ. ಸುಖಮಯ ಘಟನೆಗಳು ನಡೆಯಲಿವೆ. ಆರೋಗ್ಯ ಸುಧಾರಿಸಲಿದೆ.

ತುಲಾ ರಾಶಿ

ಕಲ್ಪನೆ ಮತ್ತು ಸೃಜನಶೀಲತೆಯ ವೃದ್ಧಿಯಿಂದ ಸಂತೋಷದ ಅನುಭವವಾಗುತ್ತದೆ. ವ್ಯರ್ಥ ವಾದ-ವಿವಾದ ಮತ್ತು ಚರ್ಚೆಯಲ್ಲಿ ತೊಡಗಬೇಡಿ. ಅಜೀರ್ಣ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ

ಶಾರೀರಿಕ ಮತ್ತು ಮಾನಸಿಕವಾಗಿ ಆರೋಗ್ಯದಿಂದಿರುತ್ತೀರಿ. ತಾಯಿಯ ಆರೋಗ್ಯದಲ್ಲಿ ಏರುಪೇರಾಗಲಿದೆ. ಆರ್ಥಿಕ ನಷ್ಟ ಮತ್ತು ಮಾನಹಾನಿಯ ಸಾಧ್ಯತೆ ಇದೆ.

ಧನು ರಾಶಿ

ಮನಸ್ಸು ಶಾಂತಿಯಿಂದಿರಲಿದೆ. ಒಡಹುಟ್ಟಿದವರ ಭೇಟಿಯಾಗಲಿದೆ. ಹೊಸ ಕಾರ್ಯವನ್ನು ಆರಂಭಿಸಲಿದ್ದೀರಿ. ಸಂಬಂಧಿಕರು, ಮಿತ್ರರ ಆಗಮನವಾಗಲಿದೆ. ಭಾಗ್ಯ ವೃದ್ಧಿಯ ಅವಕಾಶವಿದೆ.

ಮಕರ ರಾಶಿ

ಮಾತಿನ ಮೇಲೆ ಸಂಯಮ ಇಟ್ಟುಕೊಂಡಲ್ಲಿ ಕಠಿಣ ಪರಿಸ್ಥಿತಿಗಳಿಂದ ಪಾರಾಗಬಹುದು. ಹಾಗಾಗಿ ಯೋಚಿಸಿ ಮಾತನಾಡಿ. ಮಾನಸಿಕವಾಗಿ ಅಸ್ವಸ್ಥತೆಯ ಅನುಭವವಾಗಲಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಏಕಾಗ್ರತೆ ಮೂಡಲಿದೆ.

ಕುಂಭ ರಾಶಿ

ಆರ್ಥಿಕ ದೃಷ್ಟಿಯಿಂದ ಲಾಭದಾಯಕ ದಿನ. ಮೃಷ್ಟಾನ್ನ ಭೋಜನದ ಯೋಗವಿದೆ. ಪ್ರವಾಸದ ಆಯೋಜನೆ ಮಾಡಲಿದ್ದೀರಿ. ನಕಾರಾತ್ಮಕ ವಿಚಾರಗಳನ್ನು ದೂರ ಮಾಡಿ.

ಮೀನ ರಾಶಿ

ಇಂದು ನಿಮಗೆ ಏಕಾಗ್ರತೆಯ ಅನುಭವವಾಗಲಿದೆ. ಧಾರ್ಮಿಕ ಕೆಲಸಗಳಿಗಾಗಿ ಹಣ ಖರ್ಚಾಗಲಿದೆ. ಮಾತಿನ ಮೇಲೆ ನಿಯಂತ್ರಣ ಇಟ್ಟುಕೊಳ್ಳದೇ ಇದ್ದಲ್ಲಿ ವಿವಾದ ಏರ್ಪಡಬಹುದು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...