alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರತಿದಿನ ದಿಂಬಿನ ಕೆಳಗೆ ಈ ವಸ್ತುವಿಟ್ಟು ಮಲಗಿದ್ರೆ ಬದಲಾಗುತ್ತೆ ಅದೃಷ್ಟ

ಮಕ್ಕಳು ನಿದ್ರೆಯಲ್ಲಿ ಬೆಚ್ಚಿ ಬೀಳುತ್ತಿದ್ದರೆ, ಸರಿಯಾಗಿ ನಿದ್ರೆ ಮಾಡದೆ ಹೋದಾಗ ಮಕ್ಕಳ ಹಾಸಿಗೆ ಬಳಿ ಕತ್ತರಿ ಅಥವಾ ಚಾಕುವನ್ನು ಇಡುತ್ತಾರೆ. ನಕಾರಾತ್ಮಕ ಶಕ್ತಿ ಮಕ್ಕಳ ಬಳಿ ಬರದಿರಲಿ ಎನ್ನುವ ಕಾರಣಕ್ಕೆ ಹೀಗೆ ಮಾಡಲಾಗುತ್ತದೆ. ದಿಂಬಿನ ಕೆಳಗೆ ಕೆಲವೊಂದು ವಸ್ತುಗಳನ್ನಿಟ್ಟು ಮಲಗುವುದ್ರಿಂದ ಮುಚ್ಚಿದ್ದ ಅದೃಷ್ಟ ತೆರೆದುಕೊಳ್ಳುತ್ತದೆ ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ.

ಬಿಳಿ ಬಟ್ಟೆಯಲ್ಲಿ ಸೋಂಪನ್ನು ಕಟ್ಟಿ ದಿಂಬಿನ ಕೆಳಗಿಟ್ಟು ಮಲಗುವುದ್ರಿಂದ ರಾಹು ದೋಷ ದೂರವಾಗುತ್ತದೆ. ರಾಹುವಿನ ಕೆಟ್ಟ ಪರಿಣಾಮ ಕಡಿಮೆಯಾಗಿ ಕೆಟ್ಟ ಕನಸು ಬೀಳುವುದು ನಿಲ್ಲುತ್ತದೆ. ಮಾನಸಿಕ ತೊಂದರೆ ನಿವಾರಣೆಯಾಗುತ್ತದೆ.

ಮಲಗುವ ವೇಳೆ ದಿಂಬಿನ ಅಡಿ ಬೆಳ್ಳುಳ್ಳಿಯಿಟ್ಟು ಮಲಗುವುದ್ರಿಂದ ನಿಮ್ಮ ಬಳಿ ಸಕಾರಾತ್ಮಕ ಶಕ್ತಿ ಹರಡಿರುತ್ತದೆ. ನಕಾರಾತ್ಮಕ ಶಕ್ತಿ ಪ್ರಭಾವ ಕಡಿಮೆಯಾಗಿ ಸುಖ ನಿದ್ರೆ ಬರುತ್ತದೆ.

ಚಿನ್ನ ಮತ್ತು ಬೆಳ್ಳಿ ವಸ್ತುವನ್ನು ದಿಂಬಿನ ಬಳಿಯಿಟ್ಟು ಮಲಗಿದ್ರೆ ಮಂಗಳನ ದೋಷ ದೂರವಾಗುತ್ತದೆ.

ಕೆಟ್ಟ ಆಲೋಚನೆಗಳು, ಕೆಟ್ಟ ಸ್ವಪ್ನ ಬೀಳುತ್ತಿದ್ದರೂ ಬೆಳ್ಳುಳ್ಳಿಯಿಟ್ಟು ಮಲಗಬೇಕು.

ಪರೀಕ್ಷೆ ಭಯವಿದ್ದರೆ ದಿಂಬಿನ ಬಳಿಯೇ ಪುಸ್ತಕವಿಟ್ಟು ಮಲಗಬೇಕು. ಇದು ಯಶಸ್ಸಿಗೆ ಕಾರಣವಾಗುತ್ತದೆ. ಆದ್ರೆ ಪುಸ್ತಕದ ಮೇಲೆ ತಲೆಯಿಟ್ಟು ಮಲಗಬಾರದು.

ಸರಿಯಾಗಿ ನಿದ್ರೆ ಬರ್ತಿಲ್ಲವೆಂದಾದ್ರೆ ದಿಂಬಿನ ಕೆಳಗೆ ಏಲಕ್ಕಿಯನ್ನಿಟ್ಟು ಮಲಗಿ. ಇದು ಸುಖ ನಿದ್ರೆಗೆ ಕಾರಣವಾಗುತ್ತದೆ.

ಕೆಟ್ಟ ಸ್ವಪ್ನದಿಂದ ಮುಕ್ತಿ ಪಡೆಯಲು ದಿಂಬಿನ ಬಳಿ ಹನುಮಾನ್ ಚಾಲೀಸ್ ಇಟ್ಟು ಮಲಗಬೇಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...