alex Certify
ಕನ್ನಡ ದುನಿಯಾ       Mobile App
       

Kannada Duniya

ಮರೆತೂ ಈ ದಿನ ಬೇರೆಯವರ ಮನೆಯಲ್ಲಿ ಊಟ ಮಾಡಬೇಡಿ

food_1473855996

ಪ್ರತಿಯೊಂದು ಅನ್ನದ ಅಗಳಿನ ಮೇಲೆ ತಿನ್ನುವವನ ಹೆಸರಿರುತ್ತಂತೆ. ಹಾಗೆ ಬೇರೆಯವರ ಅನ್ನ, ಊಟವನ್ನು ಎಲ್ಲ ಸಮಯದಲ್ಲೂ ತಿನ್ನಬಾರದು. ಶಾಸ್ತ್ರಗಳ ಪ್ರಕಾರ ಸಮಯವಲ್ಲದ ಸಮಯದಲ್ಲಿ, ದಿನಗಳಲ್ಲಿ ಬೇರೆಯವರ ಅನ್ನ ಸೇವನೆ ಮಾಡಿದ್ರೆ ತಿಂಗಳ ಪೂರ್ತಿ ಮಾಡಿದ ಪುಣ್ಯ ನಷ್ಟವಾಗುತ್ತಂತೆ. ಹಾಗೆ ಮುಂದಿನ ಜನ್ಮದಲ್ಲಿ ಪ್ರಾಣಿಯಾಗಿ ಹುಟ್ಟುತ್ತಾನಂತೆ.

ಸ್ಕಂದ ಪುರಾಣದ ಪ್ರಕಾರ ಗ್ರಹಣದ ದಿನ ಬೇರೆಯವರ ಅನ್ನವನ್ನು ಸೇವಿಸಬಾರದು. ಸೆಪ್ಟೆಂಬರ್ 16ರಂದು ಈ ವರ್ಷದ ಕೊನೆಯ ಚಂದ್ರಗ್ರಹಣ. ಅಂದು ಬೇರೆಯವರ ಮನೆಯಲ್ಲಿ ಊಟ ಮಾಡಬೇಡಿ. ಬೇರೆಯವರ ಅನ್ನವನ್ನು ಸೇವಿಸಬೇಡಿ. ಹಾಗೆ ಮಾಡಿದ್ರೆ 12 ವರ್ಷಗಳ ಪುಣ್ಯ ನಷ್ಟವಾಗಲಿದೆ.

ಅಮಾವಾಸ್ಯೆ ದಿನದಂದು ಬೇರೆಯವರ ಊಟವನ್ನು ಸೇವನೆ ಮಾಡಬಾರದು. ತಿಂಗಳ ಪೂರ್ತಿ ಸಂಪಾದಿಸಿದ ಪುಣ್ಯ ಕಳೆದು ಹೋಗುತ್ತದೆ. ಯಾರ ಊಟವನ್ನು ನೀವು ಸೇವನೆ ಮಾಡಿರುತ್ತೀರೋ ಅವರಿಗೆ ಪುಣ್ಯ ಪ್ರಾಪ್ತಿಯಾಗುತ್ತದೆ.

ಸಂಕ್ರಾತಿಯ ದಿನದಂದೂ ಬೇರೆಯವರ ಊಟವನ್ನು ಸೇವನೆ ಮಾಡಬಾರದು.

ಉತ್ತರಾಯಣ ಅಥವಾ ದಕ್ಷಿಣಾಯಣ ಆರಂಭವಾಗುವ ದಿನ ಕೂಡ ಬೇರೆಯವರ ಅನ್ನ ಸೇವನೆ ಮಾಡಬೇಡಿ.

ಮನುಸ್ಮೃತಿಯ ಪ್ರಕಾರ ಯಾವ ವ್ಯಕ್ತಿ ಅತಿ ಆಸೆಗೆ ಬಿದ್ದು ಬೇರೆಯವರ ಮನೆಯಲ್ಲಿ ಊಟ ಮಾಡ್ತಾನೋ ಆ ವ್ಯಕ್ತಿ ಮುಂದಿನ ಜನ್ಮದಲ್ಲಿ ಆ ಮನೆಯ ಊಟ ತಿನ್ನುವ ಪಶುವಾಗಿ ಜನಿಸ್ತಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...