alex Certify
ಕನ್ನಡ ದುನಿಯಾ       Mobile App
       

Kannada Duniya

ಅದೃಷ್ಟ ಬದಲಿಸುತ್ತೆ ಫೆಂಗ್ ಶುಯಿ ಉಪಾಯ

ಪ್ರತಿಯೊಬ್ಬ ವ್ಯಕ್ತಿ ಜೀವನ ಪೂರ್ತಿ ಸುಖ, ಸಮೃದ್ಧಿ, ಸಂತೋಷ ನೆಲೆಸಿರಬೇಕೆಂದು ಬಯಸ್ತಾನೆ. ಇದಕ್ಕಾಗಿ ತನ್ನ ಕೈಲಾದಷ್ಟು ಪ್ರಯತ್ನ ಕೂಡ ಮಾಡ್ತಾನೆ. ಆದ್ರೆ ಬಯಸಿದಂತೆ ಎಲ್ಲವೂ ಆಗುವುದಿಲ್ಲ. ಯಶಸ್ಸು ಕೈ ಸೇರದಿರಲು ಕಾರಣವೇನು ಎಂಬುದನ್ನು ಫೆಂಗ್ ಶುಯಿಯಲ್ಲಿ ಹೇಳಲಾಗಿದೆ. ಫೆಂಗ್ ಶುಯಿಯಲ್ಲಿ ಹೇಳಿದ ಉಪಾಯಗಳನ್ನು ಅನುಸರಿಸಿದ್ರೆ ದುರಾದೃಷ್ಟ ಅದೃಷ್ಟವಾಗಿ ಪರಿವರ್ತನೆಯಾಗುತ್ತದೆ.

ಮನೆಯಲ್ಲಿ ಸದಾ ಸಕಾರಾತ್ಮಕ ಶಕ್ತಿ ಇರಬೇಕೆಂದು ನೀವು ಬಯಸಿದ್ರೆ ಮನೆಯ ಸುತ್ತಮುತ್ತ ಸಾಧ್ಯವಾದಷ್ಟು ಗಿಡ-ಮರಗಳು ಇರುವಂತೆ ನೋಡಿಕೊಳ್ಳಿ. ನೆನಪಿರಲಿ ಮನೆಯಲ್ಲಿರುವ ಗಿಡಗಳನ್ನು ಚೆನ್ನಾಗಿ ನೋಡಿಕೊಳ್ಳಿ. ಒಣಗಿದ ಗಿಡಗಳು ಮೃತ್ಯುವನ್ನು ಪ್ರತಿನಿಧಿಸುತ್ತವೆ. ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ.

ಫೆಂಗ್ ಶುಯಿ ಪ್ರಕಾರ ಮನೆಯ ಬಹುತೇಕ ಜಾಗ ಖಾಲಿಯಿರಬೇಕು. ಕಸ, ಅನಾವಶ್ಯಕ ವಸ್ತುಗಳು ಮನೆಯಲ್ಲಿ ಇರಬಾರದು. ಮನೆ ಶುದ್ಧವಾಗಿದ್ದರೆ ಸಕಾರಾತ್ಮಕ ಶಕ್ತಿಗಳನ್ನು ಆಕರ್ಷಿಸಲು ಸಾಧ್ಯ.

ಮನೆಗೆ ಮುಖ್ಯದ್ವಾರ ಬಹಳ ಮಹತ್ವದ್ದು. ಹಾಗಾಗಿ ಮನೆಯ ಮುಖ್ಯ ದ್ವಾರದ ಮುಂದೆ ಕಸ, ಹಳೆ ಪಾತ್ರೆ, ಹಳೆ ವಸ್ತುಗಳನ್ನು ಇಡಬೇಡಿ.

ಮನೆಯಲ್ಲಿ ಮುರಿದ, ಹಾಳಾದ ವಸ್ತುಗಳನ್ನು ಇಟ್ಟುಕೊಳ್ಳಬೇಡಿ. ಆದಷ್ಟು ಬೇಗ ಅವುಗಳನ್ನು ರಿಪೇರಿ ಮಾಡಿಸಿ. ರಿಪೇರಿ ಸಾಧ್ಯವಿಲ್ಲದ ವಸ್ತುಗಳನ್ನು ಕಸಕ್ಕೆ ಎಸೆಯಿರಿ.

ಮನೆಯಲ್ಲಿ ಹಣವಿಡುವ ಜಾಗ ಸುಂದರ ಹಾಗೂ ಸ್ವಚ್ಛವಾಗಿರಲಿ. ಅದ್ರ ಬಳಿ ಮನಿ ಟ್ರೀ, ಲಾಫಿಂಗ್ ಬುದ್ದ, ಮೂರು ಕಾಲಿನ ಕಪ್ಪೆ, ಚಿನ್ನದ ನಾಣ್ಯವನ್ನು ಇಡಿ.

ಲೀವಿಂಗ್ ರೂಮಿನಲ್ಲಿ ನೀರಿನ ಫೋಟೋವನ್ನು ಹಾಕಿ. ಇದು ಮಂಗಳಕರ. ಇದು ಹಣವನ್ನು ಆಕರ್ಷಿಸುತ್ತದೆ ಎಂದು ನಂಬಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...