alex Certify
ಕನ್ನಡ ದುನಿಯಾ       Mobile App
       

Kannada Duniya

ರಾಶಿಗನುಗುಣವಾಗಿ ಪ್ರೀತಿ ಜೀವನದ ಮೇಲೆ ಚಂದ್ರ ಗ್ರಹಣದ ಪ್ರಭಾವ

ಜುಲೈ 27 ರಂದು ಶತಮಾನದ ದೀರ್ಘ ಚಂದ್ರಗ್ರಹಣ ಸಂಭವಿಸಲಿದೆ. ಈ ಬಾರಿ ಸಂಭವಿಸಲಿರುವ ಚಂದ್ರಗ್ರಹಣವನ್ನು ಬ್ಲಡ್ ಮೂನ್ ಎಂದು ಕರೆಯಲಾಗಿದೆ. ಜಗತ್ತಿನ ಅನೇಕ ಭಾಗಗಳಲ್ಲಿ ಚಂದ್ರಗ್ರಹಣ ಗೋಚರಿಸಲಿದೆ. ಆದ್ರೆ ಎಲ್ಲರ ಮೇಲೂ ಇದು ಪ್ರಭಾವ ಬೀರಲಿದೆಯಂತೆ. ವಿಶೇಷವಾಗಿ ಪ್ರೇಮ ಜೀವನದ ಮೇಲೆ ಇದ್ರ ಪ್ರಭಾವ ಹೆಚ್ಚಿರಲಿದೆಯಂತೆ. ಪ್ರತಿಯೊಂದು ರಾಶಿಯ ಪ್ರೀತಿ ಜೀವನದ ಮೇಲೂ ಚಂದ್ರಗ್ರಹಣದ ಪ್ರಭಾವ ಬೇರೆ ಬೇರೆಯಾಗಿರುತ್ತದೆ.

ಮೇಷ ರಾಶಿ : ಚಂದ್ರಗ್ರಹಣದ ವೇಳೆ ಈ ರಾಶಿಯವರು ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಒಳ್ಳೆಯದು. ಯಾವುದೇ ಮಾತಿಗೆ ಹಠಾತ್ ಉತ್ತರ ನೀಡುವ ಪ್ರಯತ್ನ ಮಾಡಬೇಡಿ. ಪ್ರೇಮ ಸಂಬಂಧದಲ್ಲಿ ಮೊದಲೇ ಬಿರುಕು ಮೂಡಿದ್ದರೆ ಅದಕ್ಕೆ ಹೆಚ್ಚು ಮಹತ್ವ ನೀಡುವ ಬದಲು ನಿಮ್ಮ ವೃತ್ತಿಯ ಮೇಲೆ ಗಮನ ನೀಡಿ.

ವೃಷಭ: ಪ್ರೀತಿ ಹಾಗೂ ವೃತ್ತಿ ಜೀವನದ ಮೇಲೆ ಚಂದ್ರಗ್ರಹಣದ ಪ್ರಭಾವವಿರುತ್ತದೆ. ಸಂಗಾತಿ ಜೊತೆ ಒಳ್ಳೆ ಸಂಬಂಧ ಬೆಳೆಸಲು ಇದು ಒಳ್ಳೆ ಸಂದರ್ಭ. ಸೆಪ್ಟೆಂಬರ್ ತಿಂಗಳವರೆಗೆ ಈ ರಾಶಿಯವರ ಪ್ರೇಮ ಜೀವನ ಅದ್ಭುತವಾಗಿರುತ್ತದೆ.

ಮಿಥುನ:  ಚಂದ್ರಗ್ರಹಣ ಈ ರಾಶಿ ಮೇಲೆ ಹೆಚ್ಚಿನ ಪ್ರಭಾವ ಬೀರುವುದಿಲ್ಲ. ಆದ್ರೆ ಸಂಬಂಧದ ಬಗ್ಗೆ ಎಚ್ಚರಿಕೆ ವಹಿಸುವುದು ಒಳ್ಳೆಯದು. ಚಂದ್ರಗ್ರಹಣ ಮೇಷ ಹಾಗೂ ಕರ್ಕ ರಾಶಿ ಮೇಲೆ ಹೆಚ್ಚಿನ ಪ್ರಭಾವ ಬೀರಲಿದೆ. ಆ ರಾಶಿಯವರ ಜೊತೆ ನೀವು ಸಂಬಂಧ ಹೊಂದಿದ್ದರೆ ನಿಮ್ಮ ಪ್ರೀತಿ ಜೀವನದಲ್ಲಿ ಸಮಸ್ಯೆ ಕಾಡುವ ಸಾಧ್ಯತೆಯಿದೆ.

ಕರ್ಕ : ಚಂದ್ರಗ್ರಹಣದ ಪ್ರಭಾವ ಈ ರಾಶಿಯವರ ಮೇಲೆ ಹೆಚ್ಚಿರುತ್ತದೆ. ಸಂಗಾತಿ ಹೆಚ್ಚಿನ ಕಾಳಜಿ ವಹಿಸುವರಾಗಿದ್ದರೆ ಚಿಂತೆಪಡುವ ಅಗತ್ಯವಿಲ್ಲ. ಸಂಬಂಧ ಈಗಾಗಲೇ ಹಳಸುತ್ತ ಬಂದಿದ್ದರೆ ಚಂದ್ರಗ್ರಹಣದ ನಂತ್ರ ಪ್ರೀತಿ ಜೀವನ ಮುರಿದು ಬೀಳಲಿದೆ.

ಸಿಂಹ : ಈ ರಾಶಿ ಜನರು ಅಹಂಕಾರದಿಂದ ಸಮಸ್ಯೆ ಮೈಮೇಲೆಳೆದುಕೊಳ್ಳುತ್ತಾರೆ. ಸಂಗಾತಿ ಬಗ್ಗೆ ಗಮನ ನೀಡುವ ಅವಶ್ಯಕತೆಯಿದೆ.

ಕನ್ಯಾ : ಚಂದ್ರಗ್ರಹಣ ಈ ರಾಶಿಯವರ ಪ್ರೇಮ ಜೀವನದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಸಂಗಾತಿ ಜೊತೆ ಹೆಚ್ಚು ಸಮಯ ಕಳೆದ್ರೆ ಯಾವುದೇ ಭಯಪಡುವ ಅಗತ್ಯವಿಲ್ಲ.

ತುಲಾ: ಈ ರಾಶಿಯವರ ಪ್ರೇಮ ಜೀವನದ ಮೇಲೂ ಚಂದ್ರಗ್ರಹಣ ಪ್ರಭಾವ ಬೀರುವುದಿಲ್ಲ. ಆದ್ರೆ ಕೆಲವೊಂದು ಎಚ್ಚರಿಕೆ ವಹಿಸಬೇಕಾಗುತ್ತದೆ.

ವೃಶ್ಚಿಕ : ಈ ರಾಶಿಯವರ ಮೇಲೆ ಚಂದ್ರಗ್ರಹಣದ ಪ್ರಭಾವ ಹೆಚ್ಚಿರುತ್ತದೆ. ಆದ್ರೆ ಇದನ್ನು ಎದುರಿಸುವ ಶಕ್ತಿ ಈ ರಾಶಿಯವರಿಗಿರುತ್ತದೆ.

ಧನು : ಈ ರಾಶಿಯವರ ಸಂಗಾತಿ ರಾಶಿಯ ಮೇಲೆ ಚಂದ್ರಗ್ರಹಣದ ಪ್ರಭಾವ ಹೆಚ್ಚಿದ್ದರೆ ಸಕಾರಾತ್ಮಕ ಚಿಂತನೆ ಅಗತ್ಯವಾಗುತ್ತದೆ. ಪ್ರೀತಿ ಜೀವನ ಉಳಿಸಿಕೊಳ್ಳಲು ಹೋರಾಡಬೇಕಾಗುತ್ತದೆ.

ಮಕರ : ಚಂದ್ರಗ್ರಹಣದ ಪ್ರಭಾವ ಹೆಚ್ಚಿರುವ ರಾಶಿ ಜನರು ನಿಮ್ಮ ಬಳಿಯಿದ್ದರೆ ಅವ್ರ ಪ್ರಭಾವ ನಿಮ್ಮ ಮೇಲಾಗುತ್ತದೆ. ಹಾಗಾಗಿ ಆದಷ್ಟು ಎಚ್ಚರಿಕೆ ವಹಿಸಬೇಕು.

ಕುಂಭ : ಈ ರಾಶಿಯವರ ಪ್ರೇಮ ಜೀವನದ ಮೇಲೆ ಚಂದ್ರಗ್ರಹಣ ಪ್ರಭಾವ ಬೀರುತ್ತದೆ. ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಬೇಡ.

ಮೀನ : ಈ ರಾಶಿಯವರ ಮೇಲೂ ಚಂದ್ರಗ್ರಹಣದ ಪ್ರಭಾವವಿದೆ. ಸಂಬಂಧದಲ್ಲಿರುವ ವ್ಯಕ್ತಿಗಳು ಸಂಗಾತಿ ಭಾವನೆಗಳಿಗೆ ಮಹತ್ವ ನೀಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...