alex Certify
ಕನ್ನಡ ದುನಿಯಾ       Mobile App
       

Kannada Duniya

ನವರಾತ್ರಿ ಆರಂಭಕ್ಕೂ ಮೊದಲ ದಿನದ ಸಿದ್ಧತೆ ಹೀಗಿರಲಿ

ಸೆಪ್ಟೆಂಬರ್ 21ರಿಂದ ನವರಾತ್ರಿ ವೈಭವ ಮನೆ ಮಾಡಲಿದೆ. ನವರಾತ್ರಿ ಸಿದ್ಧತೆಗೆ ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. 9 ದಿನಗಳ ಕಾಲ ತಾಯಿ ದುರ್ಗೆಯನ್ನು ಪೂಜೆ ಮಾಡಿ, ಕಳಶವಿಟ್ಟು ವೃತ ಮಾಡುವವರು ಈಗಾಗಲೇ ಸಿದ್ಧತೆ ಶುರುಮಾಡಿದ್ದಾರೆ. ದುರ್ಗಾ ಪೂಜೆಗೆ ಅವಶ್ಯವಾಗಿ ಬೇಕಾಗುವ ವಸ್ತುಗಳ ಖರೀದಿಯನ್ನು ಇಂದೇ ಮಾಡಿ. ಯಾಕೆಂದ್ರೆ ಕಳಶ ಸ್ಥಾಪನೆಗೆ ಗುರುವಾರ ಬೆಳಿಗ್ಗೆಯೇ ಶುಭ ಮುಹೂರ್ತವಿರುವುದ್ರಿಂದ ಬೆಳಿಗ್ಗೆ ವಸ್ತುಗಳ ಖರೀದಿ ಅಸಾಧ್ಯ.

ಪಂಡಿತರ ಪ್ರಕಾರ ತಾಯಿ ಪೂಜೆ ಮಾಡುವ ವೇಳೆ 9 ದಿನಗಳ ಕಾಲವೂ ತಾಯಿ ಪ್ರಸನ್ನಳಾಗುವ ಕೆಲ ವಸ್ತುಗಳನ್ನು ಆಕೆ ಮುಂದಿಡಬೇಕು. ನಂತ್ರವೇ ತಾಯಿ ಪೂಜೆ ಮಾಡಬೇಕು. ಹಾಗಾಗಿ ತಾಯಿ ಪ್ರಸನ್ನಳಾಗುವ ವಸ್ತುಗಳ ಪಟ್ಟಿಯನ್ನು ನಾವು ಹೇಳ್ತೇವೆ. ತಾಯಿ ಕೃಪೆಗೆ ಪಾತ್ರರಾಗ ಬಯಸುವ ಭಕ್ತರು ಈ ವಸ್ತುಗಳನ್ನು ಅವಶ್ಯವಾಗಿ ಖರೀದಿ ಮಾಡಿ ಮನೆಗೆ ತನ್ನಿ.

ಕೆಂಪು ಬಣ್ಣ ತಾಯಿ ದುರ್ಗೆಗೆ ಪ್ರಿಯವಾದ ಬಣ್ಣ. ಹಾಗಾಗಿ ದುರ್ಗಾ ಪೂಜೆಗೆ ಕೆಂಪು ಬಣ್ಣದ ಆಸನ ಅವಶ್ಯವಾಗಿ ಬೇಕು. ಯಾವುದೋ ಬಣ್ಣದ ಬಟ್ಟೆ ಹಾಕುವ ಬದಲು ಕೆಂಪು ಬಣ್ಣದ ಬಟ್ಟೆಯನ್ನು ತಾಯಿ ದುರ್ಗೆಗೆ ಆಸನವಾಗಿ ಬಳಸಿ.

ಕೆಂಪು ಬಣ್ಣದ ಚುನರಿ ಹಾಗೂ ಕುಂಕುಮವನ್ನು ತಾಯಿಗೆ ಅರ್ಪಿಸಬೇಕು. ಹಾಗಾಗಿ ಈ ವಸ್ತುಗಳನ್ನು ಪೂಜೆಗೂ ಮೊದಲೇ ಖರೀದಿ ಮಾಡಿ. ಮಣ್ಣಿನ ಪಾತ್ರೆ, ಸ್ವಚ್ಛವಾಗಿರುವ ಮಣ್ಣು, ನೀರಿನಿಂದ ತುಂಬಿರುವ ಚಿನ್ನ, ಬೆಳ್ಳಿ, ತಾಮ್ರ ಅಥವಾ ಮಣ್ಣಿನ ಕಳಶ. ಕೆಂಪು ದಾರದ ಉಂಡೆ, ಏಲಕ್ಕಿ, ಲವಂಗ, ಕರ್ಪೂರ, ಅಡಿಕೆ, ಅಕ್ಕಿ, ನಾಣ್ಯ, ಐದು ಮಾವಿನ ಎಲೆ, ಮಣ್ಣಿನ ಮುಚ್ಚಳ, ನೀರಿರುವ ತೆಂಗಿನಕಾಯಿ, ಹೂವು ಮತ್ತು ಹೂವಿನ ಮಾಲೆ, ನವರಾತ್ರಿ ಕಳಶವನ್ನು ಪೂಜೆಗೆ ಮೊದಲು ಸಿದ್ಧಪಡಿಸಿಕೊಳ್ಳಿ. ತುಪ್ಪ, ದೀಪದ ಬತ್ತಿ, ಅಗರಬತ್ತಿ ಸೇರಿದಂತೆ ಪೂಜೆಗೆ ಬೇಕಾಗುವ ವಸ್ತುಗಳನ್ನು ಖರೀದಿ ಮಾಡಿ.

ತಾಯಿ ದುರ್ಗೆಗೆ ಬರೀ ಚುನರಿಯನ್ನು ಹೊದಿಸಬೇಡಿ. ಚುನರಿ ಜೊತೆ ಕುಂಕುಮ, ತೆಂಗಿನಕಾಯಿ, ಸಿಹಿಭಕ್ಷ್ಯ, ಹಣ್ಣುಗಳು, ಹೂವನ್ನು ಅರ್ಪಿಸಿ. ಬಳೆ, ಕಾಡಿಗೆ, ಬಾಚಣಿಕೆ ಸೇರಿದಂತೆ ತಾಯಿ ಸಿಂಗಾರಕ್ಕೆ ಬೇಕಾಗುವ ಎಲ್ಲ ವಸ್ತುವನ್ನೂ ಅರ್ಪಿಸಬೇಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...