alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚ್ಛೇದನಕ್ಕೆ ಕಾರಣವಾಗುತ್ತೆ ಈ ಗ್ರಹ ದೋಷ…!

ಗ್ರಹಗಳು ನಮ್ಮ ಜೀವನದ ಪ್ರತಿ ಕೆಲಸದ ಮೇಲೆ ಪ್ರಭಾವ ಬೀರುತ್ತದೆ. ವೈವಾಹಿಕ ಜೀವನದ ಸುಖ, ವಿಚ್ಛೇದನ ಎಲ್ಲದಕ್ಕೂ ಗ್ರಹಗಳ ಪ್ರಭಾವವಿರುತ್ತದೆ.

ಶನಿ : ವೈವಾಹಿಕ ಜೀವನ ಮುರಿಯಲು ಬಹುಮುಖ್ಯ ಕಾರಣ ಶನಿ. ವೈವಾಹಿಕ ಜೀವನಕ್ಕೆ ಭಂಗ ತರುವ ಸ್ಥಾನದಲ್ಲಿ ಶನಿಯಿದ್ದರೆ ಸಂಬಂಧ ಹಾಳಾಗುತ್ತದೆ. ದಾಂಪತ್ಯ ವಿಚ್ಛೇದನದಲ್ಲಿ ಅಂತ್ಯವಾಗುತ್ತದೆ. ಶನಿ ಕೆಟ್ಟ ಸ್ಥಾನದಲ್ಲಿದ್ದರೆ ಶಿವನ ಆರಾಧನೆ ಮಾಡಬೇಕು. ಶಿವಲಿಂಗಕ್ಕೆ ಪ್ರತಿ ದಿನ ಬೆಳಿಗ್ಗೆ ನೀರನ್ನು ಹಾಕಬೇಕು. ಪ್ರತಿ ಶನಿವಾರ ಸಾಸಿವೆ ಎಣ್ಣೆಯನ್ನು ಶಿವಲಿಂಗಕ್ಕೆ ಅರ್ಪಿಸಬೇಕು.

ಮಂಗಳ : ವೈವಾಹಿಕ ಜೀವನದ ಗಲಾಟೆ ಹಿಂಸೆ ರೂಪ ಪಡೆದಿದ್ದರೆ ಇದಕ್ಕೆ ಮಂಗಳ ಗ್ರಹ ದೋಷ ಕಾರಣ. ಇದರ ಪರಿಹಾರಕ್ಕೆ ಮಂಗಳವಾರ ವೃತ ಮಾಡಿ. ಪ್ರತಿ ಮಂಗಳವಾರ ಬಡವರಿಗೆ ಸಿಹಿ ತಿಂಡಿಯನ್ನು ದಾನ ಮಾಡಿ. ಕೆಂಪು ಬಣ್ಣವನ್ನು ಬಳಸಬೇಡಿ.

ರಾಹು-ಕೇತು : ವೈವಾಹಿಕ ಜೀವನದಲ್ಲಿ ಅನುಮಾನ ಸುಳಿದ್ರೆ ಇದಕ್ಕೆ ರಾಹು-ಕೇತು ದೋಷ ಕಾರಣ. ಅನಗತ್ಯ ಅನುಮಾನ ಸಂಗಾತಿ ದೂರ ಹೋಗಲೂ ಕಾರಣವಾಗುತ್ತದೆ. ಇದರ ಪರಿಹಾರಕ್ಕಾಗಿ ವಿಷ್ಣುವಿನ ಪೂಜೆ ಮಾಡಿ. ಶನಿವಾರ ಸಿಹಿ ತಿಂಡಿಯನ್ನು ತಿನ್ನಬೇಡಿ.

ಸೂರ್ಯ : ಸೂರ್ಯ ಗ್ರಹ ದೋಷವಿದ್ದರೆ ಸಂಗಾತಿ ವೃತ್ತಿಗೆ ಅಡ್ಡಿಯುಂಟಾಗುತ್ತದೆ. ಅಹಂಕಾರದಿಂದ ಸಂಬಂಧ ಹಾಳಾಗುತ್ತದೆ. ತಾಮ್ರದ ಉಂಗುರವನ್ನು ಹಾಕಿಕೊಳ್ಳಿ. ಗುಲಾಬಿ ಬಟ್ಟೆಯನ್ನು ಧರಿಸಿ.

ಶುಕ್ರ : ವೈವಾಹಿಕ ಜೀವನದಲ್ಲಿ ಶುಕ್ರನಿಗೆ ಮಹತ್ವದ ಸ್ಥಾನವಿದೆ. ಇದು ವೈವಾಹಿಕ ಜೀವನದಲ್ಲಿ ಸಂತೋಷ ತರುತ್ತದೆ. ಆದ್ರೆ ಶುಕ್ರ ದುರ್ಬಲನಾಗಿದ್ದರೆ ವೈವಾಹಿಕ ಜೀವನದಲ್ಲಿ ಸಮಸ್ಯೆ ಶುರುವಾಗುತ್ತದೆ. ಇಂಥವರು ವಜ್ರವನ್ನು ಧರಿಸಬಾರದು. ಶಿವನ ಪೂಜೆ ಮಾಡಬೇಕು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...