alex Certify
ಕನ್ನಡ ದುನಿಯಾ       Mobile App
       

Kannada Duniya

ರಸ್ತೆಯಲ್ಲಿ ಬಿದ್ದ ಈ ವಸ್ತುಗಳಿಂದ ದೂರವಿರಿ

ರಸ್ತೆಯಲ್ಲಿ ಅನೇಕ ವಸ್ತುಗಳು ಬಿದ್ದಿರುತ್ತವೆ. ಅದ್ರಲ್ಲಿ ಕೆಲ ವಸ್ತುಗಳ ಸ್ಪರ್ಶವಾದ್ರೆ ಅದು ನಮ್ಮ ಅವನತಿಗೆ ಕಾರಣವಾಗುತ್ತದೆ. ಗರುಡ ಪುರಾಣದಲ್ಲಿ ಕೂಡ ಈ ಬಗ್ಗೆ ಹೇಳಲಾಗಿದೆ. ರಸ್ತೆಯಲ್ಲಿ ಅಪ್ಪಿತಪ್ಪಿ ಅಂಥ ವಸ್ತುಗಳ ಸ್ಪರ್ಶವಾದ್ರೆ ಮೊದಲು ಸ್ನಾನ ಮಾಡಿ. ನಂತ್ರ ಮುಂದಿನ ಕೆಲಸ ಮಾಡಿ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

ತಂತ್ರ-ಮಂತ್ರಗಳಲ್ಲಿ ಬಳಸಿದ ವಸ್ತುಗಳನ್ನು ಸ್ಪರ್ಶ ಮಾಡಬಾರದು. ತಂತ್ರ ಮಂತ್ರಕ್ಕೆ ನಿಂಬೆ ಹಣ್ಣು, ಮೆಣಸು, ಮೊಟ್ಟೆ, ಕುಂಬಳಕಾಯಿ, ಕುಂಕುಮವನ್ನು ಬಳಸಲಾಗುತ್ತದೆ. ರಸ್ತೆ ಮಧ್ಯೆ ಇಂಥ ವಸ್ತು ಕಂಡು ಬಂದಲ್ಲಿ ಅದನ್ನು ದಾಟಬೇಡಿ. ಹಾಗೆ ಅದನ್ನು ಸ್ಪರ್ಶಿಸಬೇಡಿ.

ರಸ್ತೆ ಮಧ್ಯೆ ಮಾಂಸದ ತುಂಡು ಅಥವಾ ಯಾವುದೇ ಪ್ರಾಣಿಯ ಎಲುಬು ಕಂಡಲ್ಲಿ ತಕ್ಷಣ ಅದ್ರಿಂದ ದೂರ ಹೋಗಿ. ಇದು ನಮ್ಮ ಜೀವನದಲ್ಲಿ ಅನೇಕ ಸಮಸ್ಯೆಗೆ ಕಾರಣವಾಗುತ್ತದೆ.

ರಸ್ತೆ ಮಧ್ಯೆ ಕೂದಲ ಪಿಂಡಿ ಕಂಡಲ್ಲಿ ಅದ್ರಿಂದ ದೂರ ಹೋಗಿ. ಅದನ್ನು ಮುಟ್ಟಬೇಡಿ. ತಲೆಯಿಂದ ಬೀಳುವ ಸಹಜ ಕೂದಲೂ ಕೂಡ ಅಶುಭ ಎಂದು ಪರಿಗಣಿಸಲಾಗಿದೆ.

ಪ್ರತಿ ದಿನ ಸ್ನಾನ ಮಾಡಬೇಕು. ಆದ್ರೆ ಬೇರೆಯವರು ಸ್ನಾನ ಮಾಡಿದ ನೀರನ್ನು ಸ್ಪರ್ಶಿಸಬಾರದು. ಗ್ರಾಮೀಣ ಪ್ರದೇಶದಲ್ಲಿ ಮನೆ ಹೊರಗೆ ಸ್ನಾನ ಮಾಡುವ ಪದ್ಧತಿ ಇನ್ನೂ ಇದೆ. ಅದ್ರ ನೀರು ರಸ್ತೆಗೆ ಬರುತ್ತದೆ. ಈ ನೀರನ್ನು ಮುಟ್ಟ ಬಾರದು.

ಸತ್ತ ಪ್ರಾಣಿಗಳು ಅಶುಭವೆಣದು ಪರಿಗಣಿಸಲಾಗಿದೆ. ರಸ್ತೆಯಲ್ಲಿ ಸತ್ತ ಪ್ರಾಣಿಗಳು ಕಂಡಲ್ಲಿ ಅದ್ರಿಂದ ದೂರವಿರಿ. ಮೃತ ಪ್ರಾಣಿ ಸ್ಪರ್ಶದಿಂದ ದೋಷ ಬರುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...