alex Certify
ಕನ್ನಡ ದುನಿಯಾ       Mobile App
       

Kannada Duniya

ಮೇ.17ರಂದು ಮರೆತೂ ಮಾಡಬೇಡಿ ಈ ಕೆಲಸ

17th

ಮೇ. 17, ವೈಶಾಖ ಮಾಸದ ಶುಕ್ಲ ಪಕ್ಷದ ಏಕಾದಶಿ. ಇಂದು ಮೋಹಿನಿ ಏಕಾದಶಿ ಮಾಡ್ತಾಳಂತೆ. ಧರ್ಮ ಗ್ರಂಥದ ಪ್ರಕಾರ ಈ ದಿನ ವಿಶೇಷ ಕೆಲಸಗಳನ್ನು ಮಾಡಬಾರದು. ಮಾಡಿದ್ರೆ ಲಭಿಸಿದ ಪುಣ್ಯ ಕೂಡ ಬದಲಾಗುತ್ತದೆ. ಏಕಾದಶಿಯಂದು ಮರೆತೂ ಈ ಕೆಲಸಗಳನ್ನು ಮಾಡಲು ಹೋಗಬೇಡಿ.

ಏಕಾದಶಿಯ ರಾತ್ರಿಯಂದು ನಿದ್ರೆ ಮಾಡಬಾರದು. ರಾತ್ರಿ ಪೂರ್ತಿ ಭಗವಂತ ವಿಷ್ಣುವಿನ ಪೂಜೆ ಮಾಡಬೇಕು.

ಏಕಾದಶಿಯಂದು ಎಲೆ ಅಡಿಕೆ ಹಾಕಬಾರದು. ಇದರಿಂದ ರಜೋಗುಣ ಹೆಚ್ಚಾಗುತ್ತದೆ. ಹಾಗಾಗಿ ಪಾನ್ ತಿನ್ನಬಾರದು.

ಏಕಾದಶಿಯಂದು ಹಲ್ಲುಜ್ಜಬಾರದು. ಏಕಾದಶಿ ಬಹಳ ಪವಿತ್ರವಾದದ್ದು. ಅಂದು ಲೈಂಗಿಕ ಕ್ರಿಯೆ ನಡೆಸಬಾರದು. ಅದ್ರ ಬಗ್ಗೆ ಯೋಚನೆ ಕೂಡ ಮಾಡಬಾರದು.

ಬೇರೆಯವರನ್ನು ನಿಂದಿಸುವ ಕೆಲಸ ಮಾಡಬೇಡಿ. ಹಾಗೆ ಕೋಪ ಬೇಡ. ತಪ್ಪು ಮಾಡಿದ್ರೂ ಅವರನ್ನು ಕ್ಷಮಿಸಿಬಿಡಬೇಕು. ವಿಷ್ಣುವಿನ ಧ್ಯಾನದಲ್ಲಿ ಕಾಲ ಕಳೆಯಬೇಕು.

ಸುಳ್ಳು ಹೇಳಬಾರದು. ಸುಳ್ಳು ಹೇಳಿದ್ರೆ ಅವರಿಗೆ ಯಾರಿಂದಲೂ ಎಂದೂ ಗೌರವ ಸಿಗುವುದಿಲ್ಲ. ಹಾಗಾಗಿ ಸುಳ್ಳು ಹೇಳಬೇಡಿ.

ಕಾರ್ಡ್ಸ್ ಆಡುವುದು ಎಂದಿಗೂ ಕೆಟ್ಟದ್ದು. ಹಾಗಾಗಿ ಏಕಾದಶಿ ಸೇರಿದಂತೆ ಎಂದೂ ಇದನ್ನು ಆಡಬಾರದು.

ಮನದಲ್ಲಿ ವಿಕಾರತೆ ಬೆಳೆಯುವುದರಿಂದ ಏಕಾದಶಿಯಂದು ಕೆಟ್ಟ ಕೆಲಸಗಳನ್ನು ಮಾಡಬಾರದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...