alex Certify
ಕನ್ನಡ ದುನಿಯಾ       Mobile App
       

Kannada Duniya

ದುರ್ಭಾಗ್ಯ ದೂರ ಮಾಡಲು ಅಮವಾಸ್ಯೆಯಂದು ಈ ಕೆಲಸ ಮಾಡಿ

shanii-1498195924

ಹಿಂದೂ ಪಂಚಾಂಗದ ಪ್ರಕಾರ ಆಷಾಡ ಮಾಸದಲ್ಲಿ ಬರುವ ಅಮವಾಸ್ಯೆಗೆ ಬಹಳ ಮಹತ್ವವಿದೆ. ಇದನ್ನು ಮಣ್ಣಿನ ಅಮವಾಸ್ಯೆ ಎಂದೂ ಕರೆಯುತ್ತಾರೆ. ಈ ಬಾರಿ ಶನಿವಾರ ಬಂದಿರುವುದರಿಂದ ಈ ಅಮವಾಸ್ಯೆ ಇನ್ನಷ್ಟು ಮಹತ್ವ ಪಡೆದಿದೆ. 10 ವರ್ಷಗಳ ನಂತ್ರ ಶನಿವಾರ ಅಮವಾಸ್ಯೆ ಬಂದಿದೆ. ಈ ಹಿಂದೆ 2007ರಲ್ಲಿ ಈ ಯೋಗ ಬಂದಿತ್ತು. ಭವಿಷ್ಯದಲ್ಲಿ 17 ವರ್ಷಗಳ ನಂತ್ರ ಅಂದ್ರೆ 2034ರಲ್ಲಿ ಈ ಯೋಗ ಕೂಡಿ ಬರಲಿದೆ.

ಶನಿವಾರ ಬಂದಿರುವುದರಿಂದ ಇದನ್ನು ಶನಿ ಅಮವಾಸ್ಯೆ ಎಂದೂ ಕರೆಯುತ್ತಾರೆ. ಯಾವುದೇ ಕೆಲಸದಲ್ಲಿ ಯಶಸ್ಸು ಸಿಗುತ್ತಿಲ್ಲ. ದುರ್ಭಾಗ್ಯ ನಿಮ್ಮ ಬೆನ್ನು ಬಿಡುತ್ತಿಲ್ಲ ಎಂದಾದಲ್ಲಿ ಇಂದು ಮಾಡುವ ಕೆಲವೊಂದು ಉಪಾಯ ನಿಮ್ಮ ಏಳ್ಗೆಗೆ ನೆರವಾಗಲಿದೆ.

ಅಶ್ವತ್ಥ ಮರದ ಪೂಜೆ ಮಾಡುವುದು ಇಂದು ಶುಭ. ನಿಮ್ಮ ಪಂಚಾಂಗದಲ್ಲಿ ಶನಿ ದೋಷವಿದ್ದರೆ ಅಶ್ವತ್ಥ ಮರದ ಪೂಜೆ ಮಾಡಿ. ಶನಿವಾರ ನಿತ್ಯ ಕಾರ್ಯ ಮುಗಿಸಿ ಸ್ನಾನ ಮಾಡಿ. ಬಿಳಿ ಬಣ್ಣದ ಬಟ್ಟೆಯನ್ನು ಧರಿಸಿ. ನಂತ್ರ ಅಶ್ವತ್ಥ ಮರದ ಬುಡಕ್ಕೆ ಚಂದನ, ಕೇಸರಿ, ಹೂವು ಹಾಗೂ ಅಕ್ಕಿ ಹಾಕಿದ ನೀರನ್ನು ಅರ್ಪಿಸಿ. ಸ್ವಲ್ಪ ನೀರನ್ನು ಹಾಗೆ ಮನೆಗೆ ತಂದು ಅದನ್ನು ಮನೆಗೆಲ್ಲ ಹಾಕಿ. ಇದ್ರಿಂದ ಮನೆ ಶುದ್ಧವಾಗುತ್ತದೆ. ನಂತ್ರ ಎಣ್ಣೆಯ ದೀಪ ಹಚ್ಚಿ.

ಶನಿವಾರ ಶನಿ ಯಂತ್ರವನ್ನು ಮನೆಯಲ್ಲಿ ಸ್ಥಾಪನೆ ಮಾಡಬೇಕು. ಇದಕ್ಕೆ ಪ್ರತಿದಿನ ಪೂಜೆ ಮಾಡಿ. ಇದ್ರಿಂದ ನಿಮ್ಮ ಮನೆಯಲ್ಲಿರುವ ಎಲ್ಲ ಸಮಸ್ಯೆ ದೂರವಾಗುತ್ತದೆ. ಮಾಡುವ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಯಂತ್ರವನ್ನು ಪೂಜೆ ಮಾಡುವ ವೇಳೆ ನೀಲಿ ಅಥವಾ ಕಪ್ಪು ಬಣ್ಣದ ಹೂವನ್ನು ಹಾಕಿ. ಜೊತೆಗೆ ಎಣ್ಣೆಯ ದೀಪವನ್ನು ಹಚ್ಚಿ. ಪೂಜೆ ವೇಳೆ ಪಂಡಿತರ ಸಲಹೆ ಮೇರೆಗೆ ಕೆಲವೊಂದು ಮಂತ್ರವನ್ನು ಜಪಿಸಬೇಕು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...