alex Certify
ಕನ್ನಡ ದುನಿಯಾ       Mobile App
       

Kannada Duniya

ಚಂದ್ರಗ್ರಹಣ : ಸಂಜೆ ವೇಳೆ ಮಾಡಬೇಡಿ ಈ ಕೆಲಸ

moon

ರಕ್ಷಾ ಬಂಧನ  ಹಾಗೂ ಗ್ರಹಣ ಒಟ್ಟಿಗೆ ಬಂದಿದೆ. ಆಗಸ್ಟ್ 7ರ ರಾತ್ರಿ 10 ಗಂಟೆ 53 ನಿಮಿಷಕ್ಕೆ ಗ್ರಹಣ ಶುರುವಾಗಲಿದೆ. ಗ್ರಹಣದ ಮಧ್ಯಕಾಲ ರಾತ್ರಿ 11 ಗಂಟೆ 50 ನಿಮಿಷ. 12 ಗಂಟೆ 49 ನಿಮಿಷಕ್ಕೆ ಗ್ರಹಣ ಮುಕ್ತಾಯವಾಗಲಿದೆ.

ಶಾಸ್ತ್ರಗಳ ಪ್ರಕಾರ ಗ್ರಹಣದ ಕಾಲದಲ್ಲಿ ಕೆಲವೊಂದು ಕೆಲಸಗಳನ್ನು ಮಾಡಬಾರದು. ಈಗಿನ ಕಾಲದಲ್ಲಿ ಜನರು ಶಾಸ್ತ್ರಗಳನ್ನು ನಂಬುವುದಿಲ್ಲ. ಒಂದು ವೇಳೆ ಶಾಸ್ತ್ರಗಳನ್ನು ನಂಬುವವರು ನೀವಾಗಿದ್ದರೆ ಸಂಜೆ ಸಮಯದಲ್ಲಿ ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ. ಇದು ನಿಮ್ಮ ಮಾನಸಿಕ ಹಾಗೂ ದೈಹಿಕ ಸಮಸ್ಯೆಗೆ ಕಾರಣವಾಗುತ್ತದೆ.

ಸಂಜೆ ಹೊತ್ತಿನಲ್ಲಿ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಬೇಡಿ. ಇದು ಚರ್ಮಕ್ಕೆ ಸಂಬಂಧಿಸಿದ ಕೆಲ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಗ್ರಹಣದ ಸಮಯದಲ್ಲಿ ನಿದ್ರೆ ಮಾಡಬೇಡಿ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಗರ್ಭಿಣಿಯರು, ಕಾಯಿಲೆಗೆ ಬಿದ್ದ ವ್ಯಕ್ತಿಗಳು ಹಾಗೂ ವೃದ್ಧರಿಗೆ, ಮಕ್ಕಳಿಗೆ ಇದು ಅನ್ವಯಿಸುವುದಿಲ್ಲ.

ಗರ್ಭಿಣಿಯರು ಹೆಚ್ಚಿನ ಗಮನ ನೀಡಬೇಕು. ಮನೆಯಿಂದ ಹೊರಗೆ ಹೋಗದಿರುವುದು ಬಹಳ ಒಳ್ಳೆಯದು. ಜೊತೆಗೆ ಭಗವಂತನ ಜಪ ಮಾಡಿ. ಇಲ್ಲವಾದ್ರೆ ಗರ್ಭದಲ್ಲಿರುವ ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆ.

ಗ್ರಹಣ ಕಾಲದಲ್ಲಿ ದೇವರ ಮೂರ್ತಿಯನ್ನು ಮುಟ್ಟಬೇಡಿ. ಹಾಗೆ ಚಿನ್ನವನ್ನೂ ಮುಟ್ಟಬೇಡಿ. ಆಹಾರ ತಯಾರಿಸುವ ಹಾಗೂ ತಿನ್ನುವ ಸಾಹಸ ಬೇಡ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...