alex Certify
ಕನ್ನಡ ದುನಿಯಾ       Mobile App
       

Kannada Duniya

ನವರಾತ್ರಿಯಲ್ಲಿ ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ

ನವರಾತ್ರಿಯಂದು ಒಂಭತ್ತು ದಿನ ತಾಯಿ ದುರ್ಗೆ ಆರಾಧನೆ ನಡೆಯುತ್ತದೆ. ಒಂಭತ್ತು ದಿನ ಪೂಜೆ, ವೃತ, ಆರಾಧನೆ ನಡೆಯುತ್ತದೆ. ದುರ್ಗೆಯ 9 ಅವತಾರಗಳ ಪೂಜೆ ನಡೆಯುತ್ತದೆ. ನವದುರ್ಗೆ ಆರಾಧನೆಯಿಂದ ಸುಖ-ಶಾಂತಿ ಪ್ರಾಪ್ತಿಯಾಗುತ್ತದೆ. ನವರಾತ್ರಿ ಪೂಜೆ ವೇಳೆ ಕೆಲವೊಂದು ನಿಯಮಗಳನ್ನು ಅವಶ್ಯಕವಾಗಿ ಮಾಡಬೇಕು.

ಯಾರ ಮನೆಯಲ್ಲಿ ಮಹಿಳೆಗೆ ಸನ್ಮಾನ, ಗೌರವ ನೀಡಲಾಗುತ್ತದೆಯೋ ಆ ಮನೆಯಲ್ಲಿ ತಾಯಿ ನೆಲೆಸುತ್ತಾಳೆ. ಮಹಿಳೆಗೆ ಗೌರವ ಸಿಗದ ಮನೆಯಲ್ಲಿ ಮಹಾಲಕ್ಷ್ಮಿ ನೆಲೆಸುವುದಿಲ್ಲ.

ನವರಾತ್ರಿಯ ಒಂಭತ್ತು ದಿನ ಮಹಿಳೆ ಹಾಗೂ ಪುರುಷರಿಬ್ಬರೂ ಬ್ರಹ್ಮಚರ್ಯವನ್ನು ಪಾಲಿಸಬೇಕು. ಶುದ್ಧ ಮನಸ್ಸಿನಿಂದ ತಾಯಿ ದುರ್ಗೆಯ ಪೂಜೆ ಮಾಡಬೇಕು. ತಾಯಿ ಆಶೀರ್ವಾದ ಪಡೆಯಲು ನವರಾತ್ರಿಯ 9 ದಿನ ಶಾರೀರಿಕ ಸಂಬಂಧ ಬೆಳೆಸಬಾರದು.

ನವರಾತ್ರಿಯಲ್ಲಿ ಕಳಶ ಸ್ಥಾಪನೆ ಮಾಡುವವರು ನವರಾತ್ರಿ ಮುಗಿಯುವವರೆಗೂ ಮನೆಗೆ ಬೀಗ ಹಾಕಬಾರದು. ಮನೆಯಲ್ಲಿ ಒಬ್ಬ ಸದಸ್ಯರಾದ್ರೂ ಇರಬೇಕು. ಹಾಗೆ ಮಧ್ಯಾಹ್ನದ ವೇಳೆ ಮಲಗಬಾರದು.

ನವರಾತ್ರಿಯಲ್ಲಿ ಮನಸ್ಸು ಶಾಂತವಾಗಿರಬೇಕು. ಕೋಪಕ್ಕೆ ಕಡಿವಾಣ ಹಾಕಬೇಕು. ನವರಾತ್ರಿಯಲ್ಲಿ ಕಳಶ ಸ್ಥಾಪನೆ ಮಾಡಿದವರು ಮನೆಯಲ್ಲಿ ಜಗಳವಾಡಬಾರದು.

ನವರಾತ್ರಿ ವರ್ಷದಲ್ಲಿ 2 ಬಾರಿ ಬರುತ್ತದೆ. ನವರಾತ್ರಿ ದಿನ ಬೆಳಿಗ್ಗೆ ಬೇಗ ಏಳಬೇಕು. ಸ್ನಾನ ಮಾಡಿ ದುರ್ಗೆ ಪೂಜೆ ಮಾಡಬೇಕು.

ನವರಾತ್ರಿ ವೃತ ಮಾಡುವವರು ಈರುಳ್ಳಿ, ಬೆಳ್ಳುಳ್ಳಿ, ಮಾಂಸಹಾರ, ಮದ್ಯದಿಂದ ದೂರವಿರಬೇಕು.

ನವರಾತ್ರಿಯಲ್ಲಿ ಬೇಡಿ ಬಂದವರನ್ನು ಬರಿಗೈನಲ್ಲಿ ಕಳುಹಿಸಬೇಡಿ. ದಾನಕ್ಕೆ ವಿಶೇಷ ಮಹತ್ವವಿದೆ. ನವರಾತ್ರಿಯಂದು ದುರ್ಗೆ ಯಾವ ರೂಪದಲ್ಲಿಯಾದ್ರೂ ನಿಮ್ಮ ಮನೆಗೆ ಬರಬಹುದು. ಹಾಗಾಗಿ ಭಿಕ್ಷುಕರನ್ನು ಬರಿಗೈನಲ್ಲಿ ಕಳುಹಿಸಬೇಡಿ.

ನವರಾತ್ರಿಯ 9 ದಿನ ಕೂದಲು ಕತ್ತರಿಸುವುದು, ಉಗುರು ಕತ್ತರಿಸುವುದು ಸೇರಿದಂತೆ ಯಾವುದೇ ಅಶುಭ ಕೆಲಸ ಮಾಡಬೇಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...